ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಭವೂ ಉಂಟು ನಷ್ಟವೂ ಉಂಟು

Last Updated 11 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಮನೆಯಲ್ಲಿಯೇ ಮಕ್ಕಳಿಗೆ ಶಿಕ್ಷಣ ಕೊಡುವುದು ಅಥವಾ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪೋಷಕರು ಮಕ್ಕಳೊಂದಿಗೆ ಕೈತೋಟ, ಮೃಗಾಲಯ, ವಿಜ್ಞಾನಕೇಂದ್ರಗಳು, ವಸ್ತು ಸಂಗ್ರಹಾಲಯಗಳು, ಇತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವುದು ಹಾಗೂ ಮಕ್ಕಳಿಗೆ ಪ್ರಾಯೋಗಿಕ ಜ್ಞಾನ ನೀಡುವುದೇ ಹೋಮ್ ಸ್ಕೂಲಿಂಗ್ ಅಥವಾ ಹೋಮ್ ಎಜುಕೇಶನ್. ಹೋಮ್ ಸ್ಕೂಲಿಂಗ್‌ನಲ್ಲಿ ಪೋಷಕರೇ ಶಿಕ್ಷಕರ ಪಾತ್ರವನ್ನು ವಹಿಸುತ್ತಾರೆ. ನಾನಾ ಅನುಕೂಲಗಳು ಹೋಮ್ ಸ್ಕೂಲಿಂಗ್‌ನಲ್ಲಿರುವಂತೆ ಅನನುಕೂಲಗಳೂ ಇರುತ್ತವೆ.

ಹೋಮ್‌ಸ್ಕೂಲಿಂಗ್‌ ಮಕ್ಕಳಿಗೆ ವೈಯಕ್ತಿಕ ಕಾಳಜಿ ದೊರೆಯುತ್ತದೆ. ಪೋಷಕರು ಸರಿಯಾದ ಯೋಜನೆಯನ್ನು ರೂಪಿಸಿ ಅವರಿಗೆ ಶಿಕ್ಷಣವನ್ನು ನೀಡಬಹುದು. ಸಾರ್ವಜನಿಕ ಶಾಲೆಗಳಲ್ಲಿ ಮಕ್ಕಳಿಗೆ ಕಲಿಸುವ ವಿಷಯಗಳನ್ನೇ ಹೋಮ್‌ ಸ್ಕೂಲಿಂಗ್‌ನಲ್ಲಿಯೂ ಮಕ್ಕಳಿಗೆ ಕಲಿಸಬಹುದು. ಪೋಷಕರು ತಮ್ಮ ಮಕ್ಕಳ ಮೇಲೆ ಹೆಚ್ಚಿನ ಗಮನವನ್ನು ಹರಿಸಲು ಸಾಧ್ಯವಾಗುತ್ತದೆ. ಶಿಕ್ಷಣವನ್ನೂ ಪರಿಣಾಮಕಾರಿಯಾಗಿ ಕಲಿಸಬಹುದು. ಆದರೆ ಹೆಚ್ಚಿನ ಜನರು ಹೋಮ್ ಸ್ಕೂಲಿಂಗ್‌ ಬಗ್ಗೆ ಒಲವನ್ನು ಹೊಂದಿರುವುದಿಲ್ಲ.

ಹೋಮ್ ಸ್ಕೂಲಿಂಗ್‌ನಲ್ಲಿ ಕಲಿಯುವ ಮಕ್ಕಳು ಸಮಾಜದೊಂದಿಗೆ ಹಾಗೂ ಇತರ ಮಕ್ಕಳೊಂದಿಗೆ ಬೆರೆಯಲು ಕಷ್ಟವಾಗಬಹುದು. ಪೋಷಕರು ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಸಮಯ ಹಾಗೂ ದುಡ್ಡನ್ನು ವ್ಯಯಿಸಬೇಕಾಗುತ್ತದೆ. ಸಾರ್ವಜನಿಕ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಪರೀಕ್ಷೆಯ ಭಯ ಇರುವುದರಿಂದ ಆಸಕ್ತಿ ಹಾಗೂ ಶಿಸ್ತಿನಿಂದ ಕಲಿಯಬಹುದು.

ಹೋಮ್ ಸ್ಕೂಲಿಂಗ್‌ನಲ್ಲಿ ಕಲಿಯುವ ಮಕ್ಕಳು ಗಂಭೀರದಿಂದ ಕಲಿಯಲು ಸಾಧ್ಯವಾಗದಿರಬಹುದು. ಮುಖ್ಯವಾಗಿ ಮಕ್ಕಳ ಓದಿಗೆ ಸಂಬಂಧಿಸಿದಂತೆ ಪೋಷಕರು ಅವರ ಮೇಲೆ ಒತ್ತಡವನ್ನು ಎಂದಿಗೂ ಹೇರಬಾರದು. ಮಕ್ಕಳು ಕಲಿಕೆಗಾಗಿ ಹೆಚ್ಚು ಸಮಯ ತೆಗೆದುಕೊಂಡರೆ ತಪ್ಪಿಲ್ಲ. ತಮ್ಮ ಮಕ್ಕಳನ್ನು ಬೇರೆ ಮಗುವಿನೊಂದಿಗೆ ಎಂದಿಗೂ ಹೋಲಿಸಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT