ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ಪ್ರಶ್ನೋತ್ತರ: ಸಾಮಾನ್ಯ ಜ್ಞಾನ

Last Updated 24 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಕೆಪಿಎಸ್‌ಸಿ, ಕೆಎಸ್‌ಐಎಸ್‌ಎಫ್‌ ಸೇರಿದಂತೆ ಮುಂದೆ ನಡೆಯಲಿರುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳು ಇಲ್ಲಿವೆ.

1. 2022ರ ಆಗಸ್ಟ್ 13ರಂದು 30ಕ್ಕೂ ಅಧಿಕ ರಾಷ್ಟ್ರಗಳ 2200ಕ್ಕೂ ಅಧಿಕ ಮಂದಿ ಭಗವದ್ಗೀತೆಯ ಎಲ್ಲಾ 700 ಶ್ಲೋಕಗಳನ್ನು ಕಂಠಪಾಠ ಮಾಡಿ,ಒಕ್ಕೊರಲಿನಿಂದ ಹಾಡಿದರು.‌ ಇದು ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಸೇರ್ಪಡೆಯಾಯಿತು. ಕರ್ನಾಟಕದ ಸಂತರೊಬ್ಬರು ಇದಕ್ಕೆ ಮಾರ್ಗದರ್ಶಕರಾಗಿದ್ದರು. ಹಾಗಾದರೆ ಈ ಕಾರ್ಯಕ್ರಮ ಎಲ್ಲಿ ನಡೆಯಿತು?

ಎ) ಅಮೆರಿಕದ ಟೆಕ್ಸಾಸ್ ರಾಜ್ಯದ ಡೆಲ್ಲಾಸ್ ನಗರ

ಬಿ) ಇಂಗ್ಲೆಂಡಿನ ಲಂಡನ್ ನಗರ

ಸಿ) ರಷ್ಯದ ಮಾಸ್ಕೊ ನಗರ

ಡಿ) ಪಾಕಿಸ್ತಾನದ ಕರಾಚಿ ನಗರ

ಉತ್ತರ: ಎ

2. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ದೇಶದಲ್ಲಿರುವ ಹಣದುಬ್ಬರ ನಿಯಂತ್ರಿಸಲು ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಆರ್‌ಬಿಐ ತನ್ನ ರೆಪೊದರ (ಬಡ್ಡಿ ದರ) ಹೆಚ್ಚಿಸುತ್ತದೆ. ಆರ್‌ಬಿಐ `ರೆಪೊ ದರ’ ಹೆಚ್ಚಿಸಿದರೆ ಗೃಹ, ವಾಹನ, ಚಿನ್ನ ಮತ್ತು ಕಾರ್ಪೋರೇಟ್ ಮತ್ತಿತರ ಸಾಲಗಳ ಇಎಂಐಗಳು ಸಹಜವಾಗಿಯೇ ಏರಿಕೆಯಾಗುತ್ತದೆ.

2) ಬ್ಯಾಂಕುಗಳು ಆರ್‌ಬಿಐನಿಂದ ಪಡೆಯುವ ಹಣಕ್ಕೆ ವಿಧಿಸುವ ಬಡ್ಡಿದರವೇ ರೆಪೊ ದರವಾಗಿದೆ. ಕಳೆದ ಮೇ ತಿಂಗಳಲ್ಲಿ ಆರ್‌ಬಿಐ ರೆಪೊದರವನ್ನು ಶೇ 0.4ರಷ್ಟು ಏರಿಸಿತ್ತು. ನಂತರ ಜೂನ್ ತಿಂಗಳಲ್ಲಿ ಶೇ 0.5 ಏರಿಕೆ ಮಾಡಿತ್ತು ಈಗ ಶೇ 0.5ರಷ್ಟು ಏರಿಕೆ ಮಾಡಿದೆ. ಒಟ್ಟಾರೆ ಪ್ರಸ್ತುತ ರೆಪೊ ದರ ಶೇ 5.40ಕ್ಕೆ ತಲುಪಿದೆ.

‌3) ಆರ್‌ಬಿಐ ಗವರ್ನರ್ ನೇತೃತ್ವದ ಹಣಕಾಸು ನೀತಿ ಸಮಿತಿಯ ಸದಸ್ಯರು ರೆಪೂದರವನ್ನು ನಿರ್ಧರಿಸುತ್ತಾರೆ.

ಉತ್ತರ ಸಂಕೇತಗಳು:

ಎ) 1 ಮತ್ತು 3 ಮಾತ್ರ ಸರಿಯಾಗಿದೆ

ಬಿ) 1 ಮತ್ತು 2 ಮಾತ್ರ ಸರಿಯಾಗಿದೆ

ಸಿ) 1 ರಿಂದ 3ರತನಕ ಎಲ್ಲವೂ ಸರಿಯಾಗಿದೆ

ಡಿ) ಎಲ್ಲವೂ ತಪ್ಪಾಗಿವೆ.

ಉತ್ತರ: ಸಿ

3) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) 1983ರಲ್ಲಿ ಭಾರತವು ಅಂಟಾರ್ಟಿಕ ಒಪ್ಪಂದದ ಭಾಗವಾಯಿತು. ಆರಂಭದಲ್ಲಿ 12 ದೇಶಗಳು ಈ ಒಪ್ಪಂದ ಮಾಡಿಕೊಂಡಿದ್ದವು. ಪ್ರಸ್ತುತ 54 ದೇಶಗಳು ಈ ಒಪ್ಪಂದದ ಭಾಗವಾಗಿವೆ.

2) ಅಂಟಾರ್ಟಿಕದಲ್ಲಿ ನ್ಯೂಕ್ಲಿಯರ್ ಸ್ಫೋಟ ಮಾಡುವಂತಿಲ್ಲ. ನ್ಯೂಕ್ಲಿಯರ್ ತ್ಯಾಜ್ಯ ಸುರಿಯುವಂತಿಲ್ಲ. ಸೇನಾ ನೆಲೆ ನಿರ್ಮಾಣಕ್ಕೆ ಸದಸ್ಯ ರಾಷ್ಟ್ರಗಳಿಗೆ ಅವಕಾಶ ನೀಡುವುದಿಲ್ಲ. ವೈಜ್ಞಾನಿಕ ಸಂಶೋಧನೆ ನಡೆಸಲು ಅವಕಾಶಗಳಿವೆ. ಸಂಶೋಧನಾ ಕೇಂದ್ರ ಸ್ಥಾಪಿಸಿದ ಮಾತ್ರಕ್ಕೆ ಅಲ್ಲಿ ತಮ್ಮ ದೇಶದ ಸಾರ್ವಭೌಮ ಪ್ರದೇಶ ಎಂದು ಘೋಷಿಸುವಂತೆ ಇಲ್ಲ. ಈ ಮೊದಲಾದ ಅಂಶಗಳು ಅಂಟಾರ್ಟಿಕ ಒಪ್ಪಂದದಲ್ಲಿ ಇವೆ.

ಉತ್ತರ ಸಂಕೇತಗಳು:

ಎ) 2 ಮಾತ್ರ ಸರಿಯಾಗಿದೆ

ಬಿ) 1 ಮಾತ್ರ ಸರಿಯಾಗಿದೆ

ಸಿ) 1 ಮತ್ತು 2 ಎರಡೂ ಸರಿಯಾಗಿವೆ.

ಡಿ) ಯಾವ ಹೇಳಿಕೆಗಳು ಸರಿಯಾಗಿಲ್ಲ

ಉತ್ತರ: ಸಿ

4) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಮಧ್ಯ ಅಮೆರಿಕದಲ್ಲಿರುವ ಪ್ರಾಕೃತಿಕವಾಗಿ ಶ್ರೀಮಂತವಾಗಿರುವ ದೇಶ ನಿಕಾರಾಗುವ. ಕೋಸ್ಟರಿಕಾ ಮತ್ತು ಹೂಂಡುರಾಸ್ ದೇಶಗಳು ಇದರ ಗಡಿಯನ್ನು ಹಂಚಿಕೊಂಡಿವೆ. ನಿಕಾರಾಗುವ ದೇಶದಲ್ಲಿರುವ ಲಿಯೊಮಿಜೊ ಮಧ್ಯ ಅಮೆರಿಕದಲ್ಲಿಯೇ ದೊಡ್ಡನಗರವಾಗಿದೆ.

2) ನಿಕಾರಾಗುವ ದೇಶದಲ್ಲಿ 430ಕ್ಕೂ ಹೆಚ್ಚು ಜ್ವಾಲಾಮುಖಿ ದ್ವೀಪಗಳಿವೆ. ಈ ದೇಶ ಭೂಶಾಖದ ಶಕ್ತಿಯನ್ನು ಬಳಕೆ ಮಾಡಿಕೊಳ್ಳುತ್ತದೆ.

3) ಸಿಹಿ ನೀರಿನ ಶಾರ್ಕ್ ಮೀನು ನಿಕರಾಗುವ ದೇಶದಲ್ಲಿ ಮಾತ್ರ ನೋಡಲು ಸಾಧ್ಯ. ಪಾಲೊಡೆಮಯೊ ಜನಪದ ಶೈಲಿಯ ನೃತ್ಯ ಇಲ್ಲಿ ತುಂಬಾ ಪ್ರಸಿದ್ಧ. ಬೇಸಬಾಲ್ ಇಲ್ಲಿನ ರಾಷ್ಟ್ರೀಯ ಕ್ರೀಡೆ.

4) 1856ರಲ್ಲಿ ನಿಕರಾಗುವ ದೇಶವನ್ನು ಅಮೆರಿಕ ತನ್ನ ಕಾಲೊನಿ ಮಾಡಿಕೊಳ್ಳುವ ಯೋಜನೆ ರೂಪಿಸಿತ್ತು ಆದರೆ ಜನರು ದಂಗೆ ಎದ್ದು ಪ್ರತಿಭಟಿಸಿದರು

ಉತ್ತರ ಸಂಕೇತಗಳು:
ಎ) 1, 2 ಮತ್ತು 3 ಮಾತ್ರ ಸರಿಯಾಗಿವೆ

ಬಿ) 1, 2 ಮತ್ತು 4 ಮಾತ್ರ ಸರಿಯಾಗಿವೆ

ಸಿ) 1 ರಿಂದ 4ರ ತನಕ ಎಲ್ಲವೂ ಸರಿಯಾಗಿವೆ

ಡಿ) 1, 3 ಮತ್ತು 4 ಮಾತ್ರ ಸರಿಯಾಗಿವೆ.

ಉತ್ತರ: ಸಿ

‘ನಿಮಗಿದು ಗೊತ್ತೇ’ ಮಾಹಿತಿಗಾಗಿ www.prajavani.net ಜಾಲತಾಣಕ್ಕೆ ಭೇಟಿ ನೀಡಿ.

(ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT