ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ ನೇಮಕಾತಿ ಪರೀಕ್ಷೆ | ಮಾದರಿ ಪ್ರಶ್ನೋತ್ತರಗಳು

Published 28 ಜೂನ್ 2023, 23:30 IST
Last Updated 28 ಜೂನ್ 2023, 23:30 IST
ಅಕ್ಷರ ಗಾತ್ರ

ಆರ್.ಕೆ.ಬಾಲಚಂದ್ರ

ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ (ಆರ್‌ಆರ್‌ಬಿ)ಗಳಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗಾಗಿ ಐಬಿಪಿಎಸ್‌ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಕಳೆದ ಸಂಚಿಕೆಯಲ್ಲಿ ಮಾಹಿತಿ ನೀಡಲಾಗಿತ್ತು. ಪರೀಕ್ಷೆಗೆ ನಿಗದಿಪಡಿಸಿರುವ ತಾರ್ಕಿಕತೆ (ಲಾಜಿಕಲ್ ರೀಸನಿಂಗ್) ವಿಷಯಕ್ಕೆ ಸಂಬಂಧಿಸಿದಂತೆ ಎರಡು ಮಾದರಿ ಪ್ರಶ್ನೋತ್ತರಗಳನ್ನು ನೀಡಲಾಗಿತ್ತು. ಈ ಸಂಚಿಕೆಯಲ್ಲಿ ಉಳಿದ ವಿಷಯಗಳಿಗೆ ಸಂಬಂಧಿಸಿದ ಒಂದೊಂದು ಮಾದರಿ ಪ್ರಶ್ನೋತ್ತರವನ್ನು ನೀಡಲಾಗಿದೆ.

3. ಸಾದೃಶ್ಯಗಳು (Analogies)

1) ದಳ - ಹೂವು : ಈ ಜೋಡಿ ಪದಗಳಿಗೆ ಹೊಂದುವಂತಹ ಕೆಳಗೆ ನೀಡಿರುವ ಯಾವುದಾದರೂ ಜೋಡಿ ಪದವನ್ನು ಗುರುತಿಸಿ

ಎ) ಪೆನ್: ಪೇಪರ್  ಬಿ) ಎಂಜಿನ್: ಕಾರು

ಸಿ) ಬೆಕ್ಕು : ನಾಯಿ ಡಿ) ಚೆಂಡು : ಆಟ

ಉತ್ತರ: ಬಿ

ವಿವರಣೆ: ಹೂವಿನ ಒಂದು ಭಾಗ ದಳವಾಗಿದೆ. ಹಲವಾರು ದಳಗಳು ಸೇರಿ ಒಂದು ಹೂವಾಗಿದೆ. ಅದೇ ರೀತಿಯಲ್ಲಿ, ಕೊಟ್ಟ ಎ ಬಿ ಸಿ ಡಿ ಆಯ್ಕೆಗಳಲ್ಲಿ ಈ ರೀತಿಯ ಒಂದಕ್ಕೊಂದು ಸಂಬಂಧ ಇರುವುದು ಬಿ ಆಯ್ಕೆಯಲ್ಲಿ ಮಾತ್ರ. ಅಂದರೆ ಎಂಜಿನ್, ಕಾರಿನ ಒಂದು ಭಾಗವಾಗಿದೆ. ಪೆನ್ನು–ಪೇಪರ್‌, ಬೆಕ್ಕು –ನಾಯಿ, ಚೆಂಡು–ಆಟ – ಇವುಗಳಲ್ಲಿ ಯಾವುದೂ ಅಂತರ್ಗತವಾಗಿ ಸಂಬಂಧವಿಲ್ಲ. ಆದ್ದರಿಂದ ಸರಿಯಾದ ಉತ್ತರ ಬಿ ಆಗಿದೆ.

4. ಕಾರಣ ಮತ್ತು ಪರಿಣಾಮ (Cause and Effect)

1) ಎರಡು ಹೇಳಿಕೆ ಮತ್ತು ಕಾರಣಗಳನ್ನು ಗಮನಿಸಿ.

I. ನಗರದ ಎಲ್ಲಾ ಕಾಲೇಜುಗಳು ವಾರದಲ್ಲಿ ಮೂರು ದಿನಗಳ ಕಾಲ ಮುಚ್ಚಬೇಕು.

II. ಅನೇಕ ವಿದ್ಯಾರ್ಥಿಗಳು ಸ್ಥಳೀಯ ಕಾಲೇಜುಗಳನ್ನು ತೊರೆದಿದ್ದಾರೆ.

ಎ) ಹೇಳಿಕೆ II ಕಾರಣ ಮತ್ತು ಹೇಳಿಕೆ I ಅದರ ಪರಿಣಾಮವಾಗಿದೆ.

ಬಿ) ಹೇಳಿಕೆ I ಕಾರಣ ಮತ್ತು ಹೇಳಿಕೆ II ಅದರ ಪರಿಣಾಮವಾಗಿದೆ.

ಸಿ) ಎರಡೂ ಹೇಳಿಕೆಗಳು ಸ್ವತಂತ್ರ ಕಾರಣಗಳ ಪರಿಣಾಮಗಳಾಗಿವೆ.

ಡಿ) ಎರಡೂ ಹೇಳಿಕೆಗಳು ಸ್ವತಂತ್ರ ಕಾರಣಗಳಾಗಿವೆ.

ಇ) ಎರಡೂ ಹೇಳಿಕೆಗಳು ಕೆಲವು ಸಾಮಾನ್ಯ ಕಾರಣಗಳ ಪರಿಣಾಮಗಳಾಗಿವೆ

ಉತ್ತರ: ಸಿ

ವಿವರಣೆ: ವಾರದಲ್ಲಿ ಕೆಲವು ದಿನಗಳವರೆಗೆ ಕಾಲೇಜುಗಳನ್ನು ಮುಚ್ಚುವುದು ಮತ್ತು ವಿದ್ಯಾರ್ಥಿಗಳು ಕಾಲೇಜುಗಳನ್ನು ತೊರೆಯುವುದು ಎರಡೂ ಬೇರೆ ಬೇರೆ ಸ್ವತಂತ್ರ ಸಮಸ್ಯೆಗಳಾಗಿವೆ. ಹಾಗಾಗಿ ಸ್ವತಂತ್ರ ಕಾರಣಗಳ ಪರಿಣಾಮಗಳಾಗಿರಬೇಕು ಎಂಬ ಆಯ್ಕೆ ಸರಿಯಾಗಿದೆ.

5. ಮೌಖಿಕ ವರ್ಗೀಕರಣ (Verbal Classification)

1) ಯಾವ ಪದವು ಈ ಗುಂಪಿಗೆ ಸೇರಿಲ್ಲ?

ಎ)ಇಂಚು  ಬಿ)ಕಿಲೋಗ್ರಾಂ  ಸಿ)ಸೆಂಟಿಮೀಟರ್ ಡಿ)ಯಾರ್ಡ್

ಉತ್ತರ: ಬಿ

ವಿವರಣೆ: ಕಿಲೋಗ್ರಾಂ ಅನ್ನು ತೂಕದ ಮಾಪನವಾಗಿ ಅಳೆಯಲು ಬಳಸುವ ಸಾಧನ. ಉಳಿದೆಲ್ಲವು ಉದ್ದವನ್ನು ಅಳೆಯಲು ಬಳಸಲಾಗುತ್ತದೆ.

6. ಪದಗಳ ತಾರ್ಕಿಕ ಅನುಕ್ರಮ (Logical Sequence of Words)

1) ಕೆಳಗಿನ ಪದಗಳನ್ನು ಅರ್ಥಪೂರ್ಣ ಅನುಕ್ರಮದಲ್ಲಿ ಜೋಡಿಸಿ.

1. ಸೋಂಕು  2. ಸಮಾಲೋಚನೆ

3. ವೈದ್ಯರು  4. ಚಿಕಿತ್ಸೆ

5. ಚೇತರಿಕೆ

ಎ) 1, 3, 4, 5, 2 ಬಿ) 1, 3, 2, 4, 5

ಸಿ) 1, 2, 3, 4, 5 ಡಿ) 2, 3, 5, 1, 4

ಉತ್ತರ: ಬಿ

ವಿವರಣೆ: ಪದಗಳ ತಾರ್ಕಿಕ ಅನುಕ್ರಮ ಹೀಗಿರಬೇಕು. ಸೋಂಕು ಮೊದಲು ಸಂಭವಿಸುತ್ತದೆ, ನಂತರ ವೈದ್ಯರನ್ನು ಭೇಟಿ ಮಾಡುತ್ತಾರೆ.  ವೈದ್ಯರು ಸಮಾಲೋಚನೆಯ ನಂತರ ಚಿಕಿತ್ಸೆಯನ್ನು ಪ್ರಾರಂಭಿಸುತ್ತಾರೆ. ನಂತರ ಚೇತರಿಕೆಯ ಹಂತ ಪ್ರಾರಂಭವಾಗುತ್ತದೆ.ಇದು ಅರ್ಥಪೂರ್ಣ ಅನುಕ್ರಮವಾಗಿದೆ.

7. ಡೈರೆಕ್ಷನ್ ಸೆನ್ಸ್ ಟೆಸ್ಟ್ (Direction Sense Test)

1) ಟಾಮ್ ಎಂಬ ವ್ಯಕ್ತಿ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಂತಿದ್ದಾನೆ. ಪೀಟರ್ ಎಂಬುವವನು ಟಾಮ್‌ನ ಎದುರಿಗೆ ಪಶ್ಚಿಮ ದಿಕ್ಕಿನೆಡೆಗೆ ಮುಖ ಮಾಡಿ ನಿಂತಿದ್ದಾನೆ. ಜಾನ್ ಎಂಬ ವ್ಯಕ್ತಿ ಟಾಮ್ ನ ಬಲಬದಿಗೆ ದಕ್ಷಿಣ ದಿಕ್ಕಿನಲ್ಲಿ ನಿಂತಿದ್ದಾನೆ. ಮೈಕ್ ಜಾನ್‌ನ ಬಲಬದಿಯಲ್ಲಿ ನಿಂತಿದ್ದಾನೆ. ಹಾಗಾದರೆ ಮೈಕ್ ಪೀಟರ್‌ನ ಯಾವ ದಿಕ್ಕಿನಲ್ಲಿ ನಿಂತಿದ್ದಾನೆ?

ಎ) ಆಗ್ನೇಯ  ಬಿ) ನೈಋತ್ಯ

ಸಿ) ದಕ್ಷಿಣ  ಡಿ) ಈಶಾನ್ಯ

ಉತ್ತರ: ಬಿ

8. ತಾರ್ಕಿಕ ವೆನ್ ರೇಖಾಚಿತ್ರಗಳು (Logical Venn Diagrams)

1) ಕೆಳಗಿನ ಯಾವ ರೇಖಾಚಿತ್ರವು ಸಿಂಹಗಳು, ಆನೆಗಳು ಮತ್ತು ಪ್ರಾಣಿಗಳನ್ನು ಸರಿಯಾಗಿ ಪ್ರತಿನಿಧಿಸುತ್ತದೆ?

ಉತ್ತರ: ಎ

ಉತ್ತರ ಎ
ಉತ್ತರ ಎ

ವಿವರಣೆ: ಸಿಂಹಗಳು ಮತ್ತು ಆನೆಗಳ ನಡುವೆ ಪರಸ್ಪರವಾಗಿ ಯಾವುದೇ ಸಂಬಂಧವನ್ನು ಹೊಂದಿಲ್ಲ, ಆದರೆ ಅವು ಎರಡೂ ಪ್ರಾಣಿಗಳಾಗಿವೆ.ಹಾಗಾಗಿ ಉತ್ತರ ಎ ಸರಿಯಾಗಿದೆ.

9. ಹೇಳಿಕೆಯ ಸತ್ಯದ ಪರಿಶೀಲನೆ (Verification of the Truth of the Statement)

1) ಪ್ರಾಣಿ ಯಾವಾಗಲೂ ____________ ಹೊಂದಿದೆ

ಎ) ಚರ್ಮ  ಬಿ) ಹೃದಯ  ಸಿ) ಶ್ವಾಸಕೋಶಗಳು

ಡಿ) ಜೀವನ  ಇ) ಕಿವಿಗಳು

ಉತ್ತರ: ಡಿ

ವಿವರಣೆ: ಪ್ರಾಣಿ ಜೀವಿಸಿದರೆ ಮಾತ್ರ ಉಳಿದೆಲ್ಲ ಅಂಗಗಳು ಉಪಯೋಗಕ್ಕೆ ಬರುತ್ತದೆ. ಹಾಗಾಗಿ ಜೀವನ ಸರಿಯಾದ ಉತ್ತರ. 

(ಲೇಖಕರು ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು
ಹಾಗೂ ವೃತ್ತಿ ಮಾರ್ಗದರ್ಶಕರು, ಮಡಿಕೇರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT