ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ: ಎನ್ ಜಿ ಎಸ್ ಎಫ್ (NGSF) ಇಂಟರ್ನ್‌ಶಿಪ್

Published 1 ಜನವರಿ 2024, 0:40 IST
Last Updated 1 ಜನವರಿ 2024, 0:40 IST
ಅಕ್ಷರ ಗಾತ್ರ

ಎನ್ ಜಿ ಎಸ್ ಎಫ್ (NGSF) ಇಂಟರ್ನ್‌ಶಿಪ್


ವಿವರ:  ಜೀವ ವಿಜ್ಞಾನದಲ್ಲಿ ಸಂಶೋಧನಾ ಅನುಭವವನ್ನು ಪಡೆಯಲು ಇಚ್ಛಿಸುವ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೆಕ್ಸ್ಟ್ ಜೆನ್ ಸೈಂಟಿಸ್ಟ್ಸ್ ಫೌಂಡೇಶನ್   ನೀಡುವ ಇಂಟರ್ನ್‌ಶಿಪ್ ಅವಕಾಶವಾಗಿದೆ.

ಅರ್ಹತೆ:  ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ. ಭಾರತೀಯ ಸಂಸ್ಥೆಯಲ್ಲಿ ಪ್ರಧಾನ ತನಿಖಾಧಿಕಾರಿಯ ಪ್ರಯೋಗಾಲಯದಲ್ಲಿ 2 ರಿಂದ 3 ತಿಂಗಳವರೆಗೆ ಕೆಲಸ ಮಾಡಲು ಸಿದ್ಧರಿರಬೇಕು.

ಆರ್ಥಿಕ ಸಹಾಯ:  ₹6,000 ವರೆಗೆ ಮಾಸಿಕ ಸ್ಟೈಫಂಡ್
ಅರ್ಜಿ ಸಲ್ಲಿಸಲು ಕೊನೆ ದಿನ: 31-03-2024
ಅರ್ಜಿ ಸಲ್ಲಿಸುವ ವಿಧಾನ:  ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ:  Short Url:www.b4s.in/praja/NGF1


 
ಯಂಗ್ ವಿಮೆನ್ ಇನ್ ಸೈನ್ಸ್ ಸ್ಕಾಲರ್‌ಶಿಪ್  


ವಿವರ:  ಯಾವುದೇ ವಿಜ್ಞಾನ ಕ್ಷೇತ್ರದಲ್ಲಿ ಪದವಿ ಪಡೆಯಲು ಇಚ್ಛಿಸುವ ಯುವತಿಯರಿಗೆ ಲೊರಿಯಾಲ್ ಇಂಡಿಯಾವು ಶೈಕ್ಷಣಿಕ ವಿದ್ಯಾರ್ಥಿ ವೇತನ  ಒದಗಿಸುತ್ತದೆ. ವಿಜ್ಞಾನದಲ್ಲಿ ತಮ್ಮ ಶಿಕ್ಷಣ ಮತ್ತು ವೃತ್ತಿಯನ್ನು ಮುಂದುವರಿಸಲು ಯುವತಿಯರನ್ನು ಪ್ರೋತ್ಸಾಹಿಸುವುದು ಮತ್ತು ಆರ್ಥಿಕ ನೆರವಿನೊಂದಿಗೆ ಅವರನ್ನು ಸಬಲೀಕರಣಗೊಳಿಸುವುದು ಈ ಸ್ಕಾಲರ್‌ಶಿಪ್‌ನ ಉದ್ದೇಶವಾಗಿದೆ.


ಅರ್ಹತೆ:  ಶೈಕ್ಷಣಿಕ ವರ್ಷದಲ್ಲಿ (2022-23) ಪಿಸಿಬಿ/ಪಿಸಿಎಂ/ಪಿಸಿಎಂಬಿಯಲ್ಲಿ ಶೇ 85 ಅಂಕಗಳೊಂದಿಗೆ 12 ನೇ ತರಗತಿ ಉತ್ತೀರ್ಣರಾದ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ₹ 6 ಲಕ್ಷಕ್ಕಿಂತ ಕಡಿಮೆಯಿರಬೇಕು.


ಆರ್ಥಿಕ ಸಹಾಯ:  ಬೋಧನಾ ಶುಲ್ಕ ಮತ್ತು ಶೈಕ್ಷಣಿಕ ವೆಚ್ಚಗಳಿಗಾಗಿ ಕಂತುಗಳಲ್ಲಿ ₹ 2,50,000ದ ವರೆಗೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆ ದಿನ:  07-01-2024
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌‘

ಹೆಚ್ಚಿನ ಮಾಹಿತಿಗೆ:  Short Url: www.b4s.in/praja/LIS4

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT