ಟಾಟಾ ಸ್ಟೀಲ್ ಮಿಲೇನಿಯಂ ವಿದ್ಯಾರ್ಥಿವೇತನ 2019–20

ವಿವರ: ಜಮ್‌ಷೇಡ್‌ಪುರದ ಟಾಟಾ ಸ್ಟೀಲ್ ಲಿಮಿಟೆಡ್ ಈ ವಿದ್ಯಾರ್ಥಿವೇತನ ಪ್ರಕಟಿಸಿದೆ.ಟಾಟಾ ಸ್ಟೀಲ್ ಲಿಮಿಟೆಡ್‌ನ ಕಾರ್ಮಿಕರು, ಮೇಲ್ವಿಚಾರಕರು ಮತ್ತು ಅಧಿಕಾರಿಗಳ ಮಕ್ಕಳು ಮತ್ತು ಪತಿ/ಪತ್ನಿಯ ಬಿ.ಟೆಕ್/ ಬಿ.ಇ/ ಎಂ.ಟೆಕ್/ ಎಂಬಿಬಿಎಸ್ ಅಥವಾ ಇತರ ವೃತ್ತಿಪರ ಕೋರ್ಸ್‌ಗಳ ವ್ಯಾಸಂಗಕ್ಕೆ ಈ ವಿದ್ಯಾರ್ಥಿವೇತನವನ್ನು ಕಂಪನಿ ನೀಡಲಿದೆ.

ಅರ್ಹತೆ: ಅರ್ಜಿದಾರರು ಟಾಟಾ ಸ್ಟೀಲ್ ಲಿಮಿಟೆಡ್‌ನ ಸಿಬ್ಬಂದಿಯ ಮಕ್ಕಳು ಅಥವಾ ಪತಿ/ಪತ್ನಿ ಆಗಿರಬೇಕು. ಅಭ್ಯರ್ಥಿಯು ಎಂಜಿನಿಯರಿಂಗ್, ವೈದ್ಯಕೀಯ ಅಥವಾ ವೃತ್ತಿ ಶಿಕ್ಷಣ ಕೋರ್ಸ್‌ಗಳಲ್ಲಿ ಪೂರ್ಣಕಾಲಿಕವಾಗಿ ವ್ಯಾಸಂಗ ಮಾಡುತ್ತಿರಬೇಕು.

ಆರ್ಥಿಕ ನೆರವು: ‘ಪ್ರವರ್ಗ–ಎ’ ಅಡಿ ಆಯ್ಕೆಯಾಗುವ 120 ಬಿ.ಟೆಕ್, ಎಂ.ಟೆಕ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ವಾರ್ಷಿಕ ₹ 50 ಸಾವಿರ ಆರ್ಥಿಕ ನೆರವು ದೊರೆಯಲಿದೆ. ‘ಪ್ರವರ್ಗ–ಬಿ’ ಅಡಿ ಆಯ್ಕೆಯಾಗುವ 140 ವಿದ್ಯಾರ್ಥಿಗಳಿಗೆ ವಾರ್ಷಿಕ ₹24 ಸಾವಿರ ನೆರವು ಸಿಗಲಿದೆ.

ಕೊನೆ ದಿನಾಂಕ: 2020ರ ಜನವರಿ 9

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ

ಮಾಹಿತಿಗೆ: http://www.b4s.in/praja/TSM1

ಶಾಲೆ/ ಮಂಡಳಿ/ ವಿಶ್ವವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ

ವಿವರ: ಕೇಂದ್ರದ ದೂರಸಂಪರ್ಕ ಇಲಾಖೆಯು ಈ ವಿದ್ಯಾರ್ಥಿವೇತನ ಪ್ರಕಟಿಸಿದೆ. ಇಲಾಖೆಯ ಸಿಬ್ಬಂದಿಯ ಪ್ರತಿಭಾವಂತ ಮಕ್ಕಳಿಗೆ ಈ ವಿದ್ಯಾರ್ಥಿವೇತನವನ್ನು ಇಲಾಖೆ ಮೂಲಕ ನೀಡುತ್ತದೆ.

ಅರ್ಹತೆ: ಶಾಲೆ/ ಕಾಲೇಜು/ ವಿಶ್ವವಿದ್ಯಾಲಯ ಹಂತದಲ್ಲಿ ಎಲ್ಲ ವಿಷಯಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವದೂರಸಂಪರ್ಕ ಇಲಾಖೆಯ ಸಿಬ್ಬಂದಿಯ ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರು.

ಆರ್ಥಿಕ ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ₹600ರಿಂದ ₹2000ದವರೆಗೆ ಆರ್ಥಿಕ ನೆರವು ದೊರೆಯಲಿದೆ.

ಅರ್ಜಿ ಸಲ್ಲಿಸಲು ಕೊನೆ ದಿನ: 2020ರ ಜನವರಿ 30

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ ಮೂಲಕ

ಮಾಹಿತಿಗೆ: http://www.b4s.in/praja/IME1

ಭಾರತೀಯ ವಿದ್ಯಾರ್ಥಿಗಳಿಗೆ ಫೆಲಿಕ್ಸ್ ವಿದ್ಯಾರ್ಥಿವೇತನ 2020

ವಿವರ: ಇಂಗ್ಲೆಂಡ್‌ನ ‘ಯೂನಿವರ್ಸಿಟಿ ಆಫ್ ರೀಡಿಂಗ್’ನಲ್ಲಿ ಸ್ನಾತಕೋತ್ತರ ಕೋರ್ಸ್ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಬೋಧನಾ ಶುಲ್ಕ ವಿನಾಯಿತಿಯನ್ನು ಈ ವಿದ್ಯಾರ್ಥಿವೇತನ ನೀಡುತ್ತದೆ. ಅಲ್ಲದೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಸ್ಟೈಪಂಡ್ ಕೂಡ ದೊರೆಯುತ್ತದೆ.

ಅರ್ಹತೆ: ಭಾರತದ ವಿಶ್ವವಿದ್ಯಾಲಯಗಳಲ್ಲಿ ಪದವಿ ಕೋರ್ಸ್ ವ್ಯಾಸಂಗ ಮಾಡಿರುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿದಾರರು‘ಯೂನಿವರ್ಸಿಟಿ ಆಫ್ ರೀಡಿಂಗ್’ನಲ್ಲಿ ಸ್ನಾತಕೋತ್ತರ ಕೋರ್ಸ್ ವ್ಯಾಸಂಗಕ್ಕೆ ಪ್ರವೇಶ ಪಡೆದಿರಬೇಕು ಅಥವಾ ಪ್ರವೇಶಕ್ಕೆ ವಿ.ವಿ ಒಪ್ಪಿಗೆ ನೀಡಿರಬೇಕು.

ಆರ್ಥಿಕ ನೆರವು: ಆಯ್ಕೆಯಾಗುವ ಎಲ್ಲ ವಿದ್ಯಾರ್ಥಿಗಳಿಗೆ ಕೋರ್ಸ್‌ನ ಸಂಪೂರ್ಣ ಬೋಧನಾ ಶುಲ್ಕವನ್ನು ವಿದ್ಯಾರ್ಥಿವೇತನದ ಮೂಲಕ ಭರಿಸಲಾಗುತ್ತದೆ. ಅಲ್ಲದೆ ಸ್ಟೈಪಂಡ್ ಆಗಿ ₹13.68 ಲಕ್ಷ ದೊರೆಯಲಿದೆ. ಜತೆಗೆ ಸಾರಿಗೆ, ಪುಸ್ತಕ ಮತ್ತು ಬಟ್ಟೆ ಖರೀದಿ ಭತ್ಯೆಯೂ ಸಿಗಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2020ರ ಜನವರಿ 30

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ

ಮಾಹಿತಿಗೆ:http://www.b4s.in/praja/FEL1

ಕೃಪೆ: buddy4study.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.