ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ: ಆದಿತ್ಯ ಬಿರ್ಲಾ, ಕೋಟಕ್ ಕನ್ಯಾ ಸ್ಕಾಲರ್‌ಷಿಪ್

Last Updated 31 ಅಕ್ಟೋಬರ್ 2022, 0:30 IST
ಅಕ್ಷರ ಗಾತ್ರ

ಆದಿತ್ಯ ಬಿರ್ಲಾ ಕ್ಯಾಪಿಟಲ್ ಕೋವಿಡ್ ಸ್ಕಾಲರ್‌ಷಿಪ್ ಪ್ರೋಗ್ರಾಮ್‌

ಕೋವಿಡ್‌–19ನಿಂದಾಗಿ ಪೋಷಕರನ್ನು ಕಳೆದುಕೊಂಡ ಪದವಿಪೂರ್ವ ಹಂತದವರೆಗೆ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ, ತಮ್ಮ ಶಿಕ್ಷಣ ಮುಂದುವರಿಸಲು ಬೆಂಬಲ ನೀಡುವುದಕ್ಕಾಗಿ ಆದಿತ್ಯ ಬಿರ್ಲಾ ಕ್ಯಾಪಿಟಲ್ ಫೌಂಡೇಶನ್ ಈ ಸ್ಕಾಲರ್‌ಷಿಪ್‌ ಪ್ರೋಗ್ರಾಂ ಆರಂಭಿಸಿದೆ.

ಅರ್ಹತೆ: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ತಮ್ಮ ಪೋಷಕರನ್ನು (ತಂದೆ ಅಥವಾ ತಾಯಿ ಅಥವಾ ಇಬ್ಬರೂ) ಕಳೆದುಕೊಂಡಿರುವ ಭಾರತೀಯ ವಿದ್ಯಾರ್ಥಿಗಳು ಈ ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಸಬಹುದು.

ಅರ್ಜಿದಾರರು 1 ರಿಂದ 12 ನೇ ತರಗತಿ ಮತ್ತು ಪದವಿಪೂರ್ವ (ಸಾಮಾನ್ಯ ಮತ್ತು ವೃತ್ತಿಪರ) ಕೋರ್ಸ್‌ಗಳಿಗೆ ದಾಖಲಾಗಿ,ಓದು ಮುಂದುವರಿಸಿರಬೇಕು.

ಆರ್ಥಿಕ ನೆರವು: ₹60,000ವರೆಗೆ ನಿಗದಿಯಾದ ಒಂದು-ಬಾರಿಯ ವಿದ್ಯಾರ್ಥಿವೇತನ

ಅರ್ಜಿ ಸಲ್ಲಿಕೆಗೆ ಕೊನೆ ದಿನ: 10-11-2022

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್ ಮೂಲಕ

ಮಾಹಿತಿಗೆ: www.b4s.in/praja/ABCC3

ಕೋಟಕ್ ಕನ್ಯಾ ಸ್ಕಾಲರ್‌ಷಿಪ್

ಕೋಟಕ್ ಮಹೀಂದ್ರಾ ಗ್ರೂಪ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್) ಯೋಜನೆಯಡಿಯಲ್ಲಿ, ಕೋಟಕ್ ಎಜುಕೇಶನ್ ಫೌಂಡೇಶನ್‌ನಿಂದ 12 ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗಾಗಿ ಈ ಸ್ಕಾಲರ್‌ಷಿಪ್‌ ಕಾರ್ಯಕ್ರಮವನ್ನು ರೂಪಿಸಿದೆ.

ಸಮಾಜದ ಹಿಂದುಳಿದ ವರ್ಗಗಳ ಪ್ರತಿಭಾನ್ವಿತ ವಿದ್ಯಾರ್ಥಿನಿಯರು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ವೃತ್ತಿಪರ ಪದವಿ ಕೋರ್ಸ್‌ ಕಲಿಯಲು ನೆರವಾಗುವುದು ಈ ವಿದ್ಯಾರ್ಥಿವೇತನದ ಗುರಿಯಾಗಿದೆ.‌

ಪ್ರತಿಷ್ಠಿತ ಸಂಸ್ಥೆಗಳಿಂದ (ಎನ್‍ಎ‍ಎಸಿ/ಎನ್‌‌‍ಐಆರ್‌‌‌‌‍ಎಫ್ ಮಾನ್ಯತೆ ಪಡೆದ) ವೃತ್ತಿಪರ ಕೋರ್ಸ್‌ಗಳಲ್ಲಿ ಮೊದಲ ವರ್ಷದ ಪದವಿಗೆ ಪ್ರವೇಶ ಪಡೆದಿರುವ ಪ್ರತಿಭಾವಂತ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. ವೃತ್ತಿಪರ ಕೋರ್ಸ್‌ಗಳಲ್ಲಿ ಎಂಜಿನಿಯರಿಂಗ್, ಎಂಬಿಬಿಎಸ್, ಆರ್ಕಿಟೆಕ್ಚರ್, ಡಿಸೈನ್, ಇಂಟಿಗ್ರೇಟೆಡ್ ಎಲ್‌ಎಲ್‌ಬಿ ಇತ್ಯಾದಿ ವೃತ್ತಿಪರ ಪದವಿ ಕೋರ್ಸ್‌ಗಳು ಸೇರಿವೆ.

ಅರ್ಹತೆ: ಅರ್ಜಿದಾರರು 12ನೇ ತರಗತಿ ಬೋರ್ಡ್ ಪರೀಕ್ಷೆಗಳಲ್ಲಿ ಶೇ 75 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿರಬೇಕು. ಕುಟುಂಬದ ವಾರ್ಷಿಕ ವರಮಾನ ₹ 3.20 ಲಕ್ಷ ಮೀರಬಾರದು.

ಆರ್ಥಿಕ ನೆರವು: ವಾರ್ಷಿಕ ರೂ.1.5 ಲಕ್ಷದವರೆಗೆ (ದಯವಿಟ್ಟು ಗಮನಿಸಿ: ಪ್ರತಿ ವರ್ಷ ವಿದ್ಯಾರ್ಥಿವೇತನದ ನವೀಕರಣವು ಕೋಟಕ್ ಶಿಕ್ಷಣ ಪ್ರತಿಷ್ಠಾನದ ಸ್ವಂತ ವಿವೇಚನೆಯಲ್ಲಿರುತ್ತದೆ)

ಅರ್ಜಿ ಸಲ್ಲಿಕೆಗೆ ಕೊನೆ ದಿನ: 30-11-2022
ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.
ಹೆಚ್ಚಿನ ಮಾಹಿತಿಗೆ: www.b4s.in/praja/KKGS12

ಕೃಪೆ: www.buddy.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT