ಮಕ್ಕಳಲ್ಲಿನ ಪ್ರತಿಭೆ ಅನಾವರಣಗೊಳ್ಳಲು ವೇದಿಕೆಯಾಗುವ ಬೇಸಿಗೆ ಶಿಬಿರಗಳು
ಪ್ರಮೋದ ಕುಲಕರ್ಣಿ
Published : 17 ಮಾರ್ಚ್ 2025, 5:51 IST
Last Updated : 17 ಮಾರ್ಚ್ 2025, 5:51 IST
ಫಾಲೋ ಮಾಡಿ
Comments
ಬೇಸಿಗೆ ಶಿಬಿರಗಳು ಮಕ್ಕಳ ಮಾನಸಿಕ ಹಾಗೂ ದೈಹಿಕ ಗಟ್ಟಿತನಕ್ಕೆ ಕಾರಣವಾಗಬೇಕು. ಇದಕ್ಕಾಗಿ ಇಲಾಖೆಯಿಂದಲೇ ಶಿಬಿರಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ. ಮಕ್ಕಳು ಹಾಗೂ ವಯಸ್ಕರು ತಮ್ಮ ಆಸಕ್ತಿಯ ವಿಷಯಗಳನ್ನು ನಮ್ಮ ಮುಂದೆ ಹಂಚಿಕೊಂಡರೆ ಅದಕ್ಕೆ ಅನುಗುಣವಾಗಿ ಶಿಬಿರ ಆಯೋಜಿಸಲಾಗುತ್ತದೆ. ಮಕ್ಕಳ ಮನೋವಿಕಾಸಕ್ಕೂ ಅನುಕೂಲವಾಗುತ್ತದೆ.
ವಿಠ್ಠಲ ಜಾಬಗೌಡರ, ಸಹಾಯಕ ನಿರ್ದೇಶಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಬೇಸಿಗೆ ರಜೆಯ ದಿನಗಳಲ್ಲಿ ಮಕ್ಕಳು ಮೊಬೈಲ್‌ಗೆ ಅಂಟಿಕೊಳ್ಳದೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎನ್ನುವುದು ನಮ್ಮ ಆಶಯ. ಇದರಿಂದ ಅವರಲ್ಲಿನ ಪ್ರತಿಭೆ ಹೊರಬರಲು ವೇದಿಕೆ ಸಿಕ್ಕಂತಾಗುತ್ತದೆ. ಆದ್ದರಿಂದ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯಿಂದಲೇ ಮಕ್ಕಳಿಗೆ ಉಚಿತವಾಗಿ ಕ್ರೀಡಾ ತರಬೇತಿ ನೀಡಲು ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ.
ರಾಜಶೇಖರ ಹಿಟ್ನಾಳ, ಅಧ್ಯಕ್ಷ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ
ಸಂಗೀತ ಕಲಿತವರಿಗೆ ಸಾಕಷ್ಟು ಅವಕಾಶಗಳು ಇವೆ. ಇದನ್ನೇ ವೃತ್ತಿಪರವಾಗಿ ಸ್ವೀಕರಿಸಿ ಗ್ರಾಮೀಣ ಪ್ರದೇಶದಿಂದ ಅಂತರರಾಷ್ಟ್ರೀಯ ಮಟ್ಟದ ತನಕ ಸಾಧನೆ ಮಾಡಿದ ಅನೇಕರು ನಮ್ಮ ನಡುವೆ ಇದ್ದಾರೆ.
ಮಹಾಂತಯ್ಯ ಶಾಸ್ತ್ರಿ ಹಿರೇಮಠ, ಸಂಗೀತ ಕಲಾವಿದ
ಕೊಪ್ಪಳದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳದಲ್ಲಿ ಮಕ್ಕಳು ಈಜು ಅಭ್ಯಾಸ ಮಾಡಿದ ಚಿತ್ರಣ –ಪ್ರಜಾವಾಣಿ ಚಿತ್ರ/ಭರತ್ ಕಂದಕೂರ