ಶುಕ್ರವಾರ, ಜುಲೈ 1, 2022
23 °C

UPSC: ಆಡಳಿತಾತ್ಮಕ ಸೇವೆ ಹುದ್ದೆಗಳ ಸಂದರ್ಶನಕ್ಕೆ ವೇಳಾಪಟ್ಟಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) 2020ರ ಸಾಲಿನ ಕೇಂದ್ರ ಆಡಳಿತಾತ್ಮಕ ಸೇವೆ ಹುದ್ದೆಗಳ ಸಂದರ್ಶನಕ್ಕೆ ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಕೋವಿಡ್ ಪರಿಸ್ಥಿತಿಯಿಂದಾಗಿ ಕೇಂದ್ರ ಲೋಕಸೇವಾ ಆಯೋಗವು ಕಳೆದ ಏಪ್ರಿಲ್‌ನಲ್ಲಿ ನಡೆಯಬೇಕಿದ್ದ ಸಂದರ್ಶನಗಳನ್ನು ಮುಂದೂಡಿತ್ತು.

ಸಂದರ್ಶನ ಪ್ರಕ್ರಿಯೆ ಆಗಸ್ಟ್‌ 2ರಿಂದ ನಡೆಯಲಿದೆ. ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್‌ ಮೂಲಕ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಂದರ್ಶನಕ್ಕೆ ಆಯ್ಕೆಯಾಗಿರುವ ಅಭ್ಯರ್ಥಿಗಳು ಸಂದರ್ಶನ ಕರೆ ಪತ್ರವನ್ನು ಯುಪಿಎಸ್‌ಸಿ ವೆಬ್‌ಸೈಟ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಸಂದರ್ಶನ ಸೆಪ್ಟೆಂಬರ್‌ 22ರವರೆಗೆ ನಡೆಯಲಿದೆ.

ಕೇಂದ್ರ ಆಡಳಿತಾತ್ಮಕ ಸೇವೆಯ (ಐಎಎಸ್., ಐಪಿಎಸ್‌, ಮತ್ತು ಐಎಫ್‌ಎಸ್‌) ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ಯುಪಿಎಸ್‌ಸಿ ಮೂರು ಹಂತಗಳಲ್ಲಿ ಅಂದರೆ ಪ್ರಿಲಿಮಿನರಿ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ನಡೆಸಲಿದೆ.

ವೆಬ್‌ಸೈಟ್‌: https://www.upsc.gov.in

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು