ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಬ್‌ ವಿನ್ಯಾಸಕನಿಗೆ ಕೌಶಲವೂ ಬೇಕು

Last Updated 5 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಡಿಜಿಟಲೀಕರಣ ಶರವೇಗವಾಗಿ ನಡೆಯುತ್ತಿದೆ. ಜೊತೆಗೆ ಉದ್ಯಮಗಳು ಅಂತರ್ಜಾಲದಲ್ಲಿ ತಮ್ಮ ಅಸ್ತಿತ್ವ ಇರಬೇಕೆಂದು ಬಯಸುವುದು ಸಾಮಾನ್ಯ. ಈ ಹಿನ್ನೆಲೆಯಲ್ಲಿ ವೆಬ್‌ ವಿನ್ಯಾಸಕರಿಗೆ ಬೇಡಿಕೆಯೂ ಜಾಸ್ತಿಯಾಗಿದ್ದು, ಅಂಥವರು ಕೇವಲ ಕೋರ್ಸ್‌ ಮಾತ್ರವಲ್ಲ, ಇತರ ಕೌಶಲಗಳನ್ನೂ ರೂಢಿಸಿಕೊಳ್ಳುವ ಅಗತ್ಯವಿದೆ.

ತಂತ್ರಜ್ಞಾನ ಸುಧಾರಿಸುತ್ತಿರುವ ಹಾಗೂ ಇಂತಹದ್ದೇ ಉದ್ಯೋಗ ಬೇಕು ಎಂಬ ನಿಲುವು ಬದಲಾಗುತ್ತಿರುವ ಇಂದಿನ ಸಂದರ್ಭ ದಲ್ಲಿ ವೃತ್ತಿಪರ ಅವಕಾಶಗಳು ಜಾಸ್ತಿಯಾಗುತ್ತಿವೆ. ಇದು ನಮ್ಮಲ್ಲಿರುವ ಸೃಜನಶೀಲತೆಗೆ ಉತ್ತಮ ವೇದಿಕೆ ಯನ್ನೂ ಒದಗಿಸುತ್ತಿದೆ. ಈಗಂತೂ ಮನೆಯಿಂದಲೇ ಕಚೇರಿ ಕೆಲಸ ಮಾಡುವಂತಹ ಅವಕಾಶಗಳಿರುವಾಗ, ಉದ್ಯೋಗದಾತರೂ ಕೂಡ ಕಾರ್ಯವೈಖರಿಯ ಗುಣಮಟ್ಟಕ್ಕೆ ಬೆಲೆ ಕೊಡು ತ್ತಾರೆಯೇ ಹೊರತು ಕಚೇರಿಯಲ್ಲೇ ಇರಬೇಕೆಂಬ ನಿಯಮಗಳಿಗೆ ಬದ್ಧವಾ ಗಿಲ್ಲ. ಹೀಗಿರುವಾಗ ಡಿಜಿಟಲ್‌ ವೇದಿಕೆ ಗಳು ಬಹಳಷ್ಟು ಜನಪ್ರಿಯವಾಗಿವೆ.

ಈ ನಿಟ್ಟಿನಲ್ಲಿ ವೆಬ್‌ ವಿನ್ಯಾಸ ಯುವಜನರನ್ನು ಹೆಚ್ಚು ಆಕರ್ಷಿಸಿದೆ. ಕಳೆದ ಕೆಲವು ವರ್ಷಗಳಿಂದ ವಿನ್ಯಾಸ ಉದ್ಯಮವು ಶರವೇಗದಿಂದ ಬೆಳವ ಣಿಗೆ ಹೊಂದುತ್ತಿದೆ. ಇದಕ್ಕೆ ಕಾರಣ ಡಿಜಿಟಲೀಕರಣ ಹಾಗೂ ಮೊಬೈಲ್‌ ಆಧಾರಿತ ವೆಬ್‌ಸೈಟ್‌ಗಳು. ಡಿಜಿಟಲ್‌ ಜಗತ್ತಿನಲ್ಲಿ ಈ ವೃತ್ತಿ ಮುಂಚೂಣಿಯಲ್ಲಿದ್ದು, ಸೃಜನಶೀಲತೆ, ತಂತ್ರಜ್ಞಾನ ಮತ್ತು ಅನುಭವಕ್ಕೆ ಹೆಚ್ಚು ಅವಕಾಶಗಳು ಸಿಗುತ್ತಿವೆ. ಯಾವುದೇ ಉದ್ಯಮವಿರಲಿ, ವೆಬ್‌ ಸೈಟ್‌ ರೂಪದಲ್ಲಿ ಇಂಟರ್‌ನೆಟ್‌ನಲ್ಲಿ ಸಿಗುವಂತಿರಬೇಕು. ಹೀಗಾಗಿ ವೆಬ್‌ ವಿನ್ಯಾಸಕರಿಗೂ ಬೇಡಿಕೆ ಜಾಸ್ತಿಯಾಗುತ್ತಿದೆ.

ವೆಬ್‌ಸೈಟ್‌ನ ವಿನ್ಯಾಸ, ಅದರಲ್ಲಿ ರುವ ಮಾಹಿತಿಗಳು ಇವುಗಳನ್ನು ಗ್ರಾಹ ಕರಿಗೆ ಆಕರ್ಷಕವಾಗಿ ಕಾಣಿಸುವಂತೆ ಮಾಡುವ ಕಲೆ ಇರಬೇಕು. ವೆಬ್‌ಸೈಟ್‌ನ ಲೇಔಟ್‌ ಕೂಡ ಆಕರ್ಷಕವಾಗಿರಬೇಕು. ಎಲ್ಲಾ ವೆಬ್‌ ವಿನ್ಯಾಸಕರು ಮಾಹಿತಿಯ ಮೇಲೆ ಹಿಡಿತ ಇಟ್ಟುಕೊಂಡಿರುವುದಿಲ್ಲ. ಅಂಥವರು ಕಂಟೆಂಟ್‌ ಬರಹಗಾರರನ್ನು ಅವಲಂಬಿಸಿರುತ್ತಾರೆ.

ವೆಬ್‌ ವಿನ್ಯಾಸಕನ ಪಾತ್ರವೆಂದರೆ ವೆಬ್‌ಸೈಟ್‌ ಅಭಿವೃದ್ಧಿಗೊಳಿಸುವುದು ಮಾತ್ರವೇ ಹೊರತು ಸಾಫ್ಟ್‌ವೇರ್‌ ಅಥವಾ ಕೋಡಿಂಗ್‌ ಬಗ್ಗೆ ಗೊತ್ತಿರ
ಬೇಕೆಂಬ ನಿಯಮವಿಲ್ಲ. ಉದಾಹರ ಣೆಗೆ ವೆಬ್‌ಸೈಟ್‌ನಲ್ಲಿ ಚಿತ್ರಗಳು, ಪುಟದ ರೂಪುರೇಷೆ, ಬಣ್ಣ, ಅಕ್ಷರದ ಗಾತ್ರ ಮತ್ತು ವಿನ್ಯಾಸವನ್ನು ವಿನ್ಯಾಸಕ ನಿರ್ಧರಿಸುತ್ತಾನೆ. ಒಟ್ಟಿನಲ್ಲಿ ಅದು ನೋಡಲು ಆಕರ್ಷಕವಾಗಿರಬೇಕು, ಮಾಹಿತಿ ಸಾಕಷ್ಟಿರಬೇಕು. ವೆಬ್‌ ವಿನ್ಯಾಸಕರಿಗೆ ಯುಎಕ್ಸ್‌ ವಿನ್ಯಾಸಕ, ಗ್ರಾಫಿಕ್‌ ವಿನ್ಯಾಸಕ, ಸಾಮಾ ಜಿಕ ಜಾಲತಾಣ ವಿನ್ಯಾಸಕ.. ಹೀಗೆ ವಿವಿಧ ರೀತಿಯ ಉದ್ಯೋಗಾವಕಾಶಗಳು ಲಭ್ಯ. ಹೆಚ್ಚು ಕೌಶಲವಿದ್ದಂತೆ ಹೆಚ್ಚು ಬೇಡಿಕೆ ಹಾಗೂ ವೇತನ ಪಡೆಯಬಹುದು. ಹೀಗಾಗಿ ಕೇವಲ ವಿನ್ಯಾಸವಲ್ಲದೇ ಉನ್ನತ ಮಟ್ಟದ ಕೌಶಲಗಳಲ್ಲಿ ಪರಿಣತಿ ಸಾಧಿಸಬೇಕಾಗುತ್ತದೆ.

ಯುಎಕ್ಸ್‌ (ಯೂಸರ್‌ ಎಕ್ಸ್‌ಪೀರಿಯನ್ಸ್‌ ವಿನ್ಯಾಸ) ಅಂದರೆ ಗ್ರಾಹಕರ ಬೇಡಿಕೆಯನ್ನು ಅರಿತು ವಿನ್ಯಾಸ ಮಾಡಬೇಕಾಗುತ್ತದೆ. ಇದನ್ನು ಪದೇ ಪದೇ ಪರೀಕ್ಷಿಸಿ ಅಭಿವೃದ್ಧಿಪಡಿಸಬೇಕಾಗುತ್ತದೆ. ಹಾಗೆಯೇ ಗ್ರಾಹಕರನ್ನು ನಿರ್ವಹಿಸುವ ಕೌಶಲ ಕೂಡ ಇರಬೇಕು.

ವೆಬ್‌ ವಿನ್ಯಾಸ ಕಲಿಕೆಗೆ ಪೂರ್ಣಾವಧಿ ಹಾಗೂ ಅಲ್ಪಾವಧಿ ಕೋರ್ಸ್‌ ಗಳಿವೆ. ಇದರ ಜೊತೆಗೆ ವಿದ್ಯಾರ್ಥಿಗಳು ಬಹುಶಿಸ್ತೀಯ ಸಂವಹನ ವಿನ್ಯಾಸ ದಂತಹ ಪ್ರೋಗ್ರಾಮ್‌ಗೂ ಸೇರಿಕೊಳ್ಳಬಹುದು. ಇತರ ಸಾಫ್ಟ್ ಕೌಶಲಗಳನ್ನು ರೂಢಿಸಿಕೊಳ್ಳುವುದು ಅವರವರ ಕಲಿಕಾ ಸಾಮರ್ಥ್ಯಕ್ಕೆ ಬಿಟ್ಟಿದ್ದು.

ಈ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಕೂಡ ಕೆಲಸ ಮಾಡಬಹುದು. ಹಾಗೆಯೇ ಬೇರೆ ಕಂಪನಿಗಳಲ್ಲಿ ಕೆಲಸಕ್ಕೆ ಸೇರಬಹುದು. ಮುಖ್ಯವಾದದ್ದು ಸೃಜನ ಶೀಲ ಮನಸ್ಸು, ತಂತ್ರಜ್ಞಾನ ಕಲಿಯುವ ಸಾಮರ್ಥ್ಯ ಹಾಗೂ ಬೇರೆ ಬೇರೆ ರೀತಿಯ ಗ್ರಾಹಕರ ಜೊತೆ ಕೆಲಸ ಮಾಡುವ ಮನೋಭಾವ ಇರಬೇಕು.

(ಲೇಖಕ: ವೃತ್ತಿ ಮಾರ್ಗದರ್ಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT