ಭಾನುವಾರ, ಸೆಪ್ಟೆಂಬರ್ 15, 2019
23 °C

ಇಂದು ಕಾಮೆಡ್‌–ಕೆ ಪರೀಕ್ಷೆ

Published:
Updated:

ಬೆಂಗಳೂರು: ದೇಶದ 142 ನಗರಗಳ 432 ಕೇಂದ್ರಗಳಲ್ಲಿ ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ‘ಕಾಮೆಡ್‌–ಕೆ’ ಪರೀಕ್ಷೆ ನಡೆಯಲಿದೆ.

ರಾಜ್ಯದ 90 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, 21 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆಯುವ ನಿರೀಕ್ಷೆ ಇದೆ. ದೇಶದಾದ್ಯಂತ ಒಟ್ಟು 72,152 ಮಂದಿ ನೋಂದಾಯಿಸಿ ಕೊಂಡಿದ್ದಾರೆ.

ಇದು ಯುಜಿಇಟಿ ಆನ್‌ಲೈನ್‌ ಪರೀಕ್ಷೆಯಾಗಿದ್ದು, ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್‌ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟದ (ಕಾಮೆಡ್‌–ಕೆ) 20 ಸಾವಿರ ಬಿಇ, ಬಿ.ಟೆಕ್‌ ಮತ್ತು ಬಿ.ಆರ್ಕ್‌ ಸೀಟುಗಳ ಭರ್ತಿಗಾಗಿ ನಡೆಯುತ್ತಿದೆ. ಅಭ್ಯರ್ಥಿಗಳು ಪ್ರವೇಶ ಪತ್ರದ ಜತೆಗೆ ತಮ್ಮ ಭಾವಚಿತ್ರವಿರುವ ಗುರುತಿನ ಚೀಟಿ ಕೊಂಡೊಯ್ಯಬೇಕು. ಮೊಬೈಲ್‌ ಸಹಿತ ಇತರ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಒಯ್ಯುವಂತಿಲ್ಲ.

Post Comments (+)