ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ ಕೈಪಿಡಿ

Last Updated 17 ಸೆಪ್ಟೆಂಬರ್ 2019, 20:05 IST
ಅಕ್ಷರ ಗಾತ್ರ

ವರ್ಗ: ಮೆರಿಟ್‌ ಆಧಾರಿತ
ವಿದ್ಯಾರ್ಥಿ ವೇತನ: ಸ್ಕಾವರ್ಜ್‌ಮನ್‌ ವಿದ್ಯಾರ್ಥಿ ವೇತನ– 2019
ವಿವರ: ಬೀಜಿಂಗ್‌ನ ಸಿಂಘುವಾ ವಿಶ್ವವಿದ್ಯಾಲಯವು ಯಾವುದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡ ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನದ ಮೂಲಕ ಅವಕಾಶ ಕಲ್ಪಿಸಿದೆ.

ಸ್ಕಾವರ್ಜ್‌ಮನ್‌ ವಿದ್ಯಾರ್ಥಿ ವೇತನ ಕಾರ್ಯಕ್ರಮವು ಚೀನಾ ಮತ್ತು ಭಾರತ ಸಂಬಂಧವನ್ನು ಶೈಕ್ಷಣಿಕವಾಗಿ ವೃದ್ಧಿಸುವಉದ್ದೇಶ ಹೊಂದಿದೆ.

ಅರ್ಹತೆ: 18ರಿಂದ 29ರ ವಯೋಮಾನದ ಭಾರತೀಯ ಪದವೀಧರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಐಇಎಲ್‌ಟಿಎಸ್‌, ಟಿಒಇಎಫ್‌ಎಲ್‌ ಅಥವಾ ಟಿಒಇಎಫ್‌ಎಲ್‌ ಐಬಿಟಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.

ಆರ್ಥಿಕ ನೆರವು: ಸಿಂಘುವಾ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಕೋರ್ಸ್‌ನ ಅಧ್ಯಯನಕ್ಕೆ ಬೋಧನಾ ಶುಲ್ಕ, ವಸತಿ, ಸಾರಿಗೆ ಭತ್ಯೆ, ಆರೋಗ್ಯ ವಿಮೆ, ಅಧ್ಯಯನ ಸಾಮಗ್ರಿ ಸೇರಿದಂತೆ ವೈಯಕ್ತಿಕ ಖರ್ಚುವೆಚ್ಚಕ್ಕೆ ಆರ್ಥಿಕ ನೆರವನ್ನು ಈ ವಿದ್ಯಾರ್ಥಿ ವೇತನ ಒದಗಿಸಲಿದೆ.

ಕೊನೆಯ ದಿನ: 2019ರ ಸೆಪ್ಟೆಂಬರ್‌ 26

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಮಾಹಿತಿಗೆ: http://www.b4s.in/praja/SSR8

***

ವರ್ಗ: ಮೆರಿಟ್‌ ಆಧಾರಿತ

ವಿದ್ಯಾರ್ಥಿವೇತನ: ಪಿಯರ್ಸನ್ ಮೆಪ್ರೊ ಇಂಗ್ಲಿಷ್ ಸ್ಕಾಲರ್‌ ಪ್ರೋಗ್ರಾಮ್‌– 2019

ವಿವರ: ಭಾರತೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರ ಇಂಗ್ಲಿಷ್ ಓದು, ಬರವಣಿಗೆ, ಮಾತನಾಡುವ ಸಾಮರ್ಥ್ಯವನ್ನು ಸುಧಾರಿಸುವ ಮತ್ತು ಅವರ ವೃತ್ತಿಜೀವನದ ಭವಿಷ್ಯವನ್ನು ಇನ್ನಷ್ಟು ವೃದ್ಧಿಸುವ ಉದ್ದೇಶ ಹೊಂದಿದೆ. ಇಂಗ್ಲಿಷ್ ಭಾಷಾ ಪ್ರಾವೀಣ್ಯ ಪಡೆದ
ಉನ್ನತ ಸಾಧಕರಿಗೆ ಈ ವಿದ್ಯಾರ್ಥಿವೇತನ ದೊರೆಯಲಿದೆ.

ಅರ್ಹತೆ: 18– 35 ವರ್ಷದೊಳಗಿನ ಭಾರತೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಹಾಗೂ 8 ಜಿಎಸ್‌ಇ ಹಂತ ದಾಟಿರುವವರು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.

ಆರ್ಥಿಕ ನೆರವು ಮತ್ತು ಸೌಲಭ್ಯ: ಆಯ್ಕೆ ಆಗುವವರಿಗೆ ₹ 10 ಸಾವಿರ ವಿದ್ಯಾರ್ಥಿವೇತನ ದೊರೆಯಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2019ರ ಸೆಪ್ಟೆಂಬರ್‌ 30

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಮಾಹಿತಿಗೆ: http://www.b4s.in/praja/PMES01

***

ವರ್ಗ: ಪ್ರತಿಭೆ ಆಧಾರಿತ

ವಿದ್ಯಾರ್ಥಿ ವೇತನ: 24 ಅನುವ್ರತ್‌ ಪ್ರಬಂಧ ಸ್ಪರ್ಧೆ–2019

ವಿವರ: ಅಖಿಲ ಭಾರತೀಯ ಅನುವ್ರತ್‌ ನ್ಯಾಸ್‌ ಸಂಸ್ಥೆಯು ಯುವ ಸಮುದಾಯದಲ್ಲಿ ಸ್ಪರ್ಧಾತ್ಮಕ ಮನೋಭಾವ ಉತ್ತೇಜಿಸಲು ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಿದೆ.
ಆಯ್ಕೆಯಾಗುವವರಿಗೆ ವಿದ್ಯಾರ್ಥಿ ವೇತನದ ಜತೆಗೆ ಪ್ರಮಾಣ ಪತ್ರ ದೊರೆಯಲಿದೆ.

ಅರ್ಹತೆ: 1ರಿಂದ 12ನೇ ತರಗತಿಯಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರು.

ಆರ್ಥಿಕ ನೆರವು: ಅತ್ಯುನ್ನತ ಮೂರು ಪ್ರಬಂಧಗಳಿಗೆ ಬಹುಮಾನ ದೊರೆಯಲಿದೆ. ಅಲ್ಲದೆ ಪ್ರತಿ ಭಾಗವಹಿಸುವಿಕೆಯ ಗುಂಪು ಮಟ್ಟದ ಪ್ರವೇಶಕ್ಕೆ ಸಮಾಧಾನಕರ ಬಹುಮಾನಗಳು ಮತ್ತು ಪ್ರಶಂಸನೀಯ ಪ್ರಬಂಧ ಬರಹಗಾರರಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆಗೆ ಕೊನೆ ದಿನ: 2019 ಸೆಪ್ಟೆಂಬರ್‌ 30

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಮಾಹಿತಿಗೆ: http://www.b4s.in/praja/AEW3

***

ಕೃಪೆ: www.buddy4study.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT