ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಕ್ಕೆ ಮನಸೋತ ಡೆನ್ಮಾರ್ಕ್‌ ಮಕ್ಕಳು

Last Updated 17 ಫೆಬ್ರುವರಿ 2020, 4:39 IST
ಅಕ್ಷರ ಗಾತ್ರ

ಜಾಗತಿಕ ಪೌರತ್ವ ದಿನಾಚರಣೆ ಅಂಗವಾಗಿ ಚಮನ್ ಭಾರತೀಯ ಸ್ಕೂಲ್ ‘ಸಾಂಸ್ಕೃತಿಕ ಸಂಗಮ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪರಿಕ್ರಮ ಫೌಂಡೇಶನ್ ಮತ್ತು ಡೆನ್ಮಾರ್ಕ್‌ ವೆಸ್ಟರ್ನ್ ಸಿಂಫೋನಿ ಯೂತ್ ಆರ್ಕೆಸ್ಟ್ರಾ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.

ಭಾರತೀಯ ಕಲೆ, ಸಂಸ್ಕೃತಿ ಹಾಗೂ ಪರಂಪರೆಯ ಜ್ಞಾನವನ್ನು ಇತರೆ ರಾಷ್ಟ್ರದ ಮಕ್ಕಳೊಂದಿಗೆ ಪರಸ್ಪರ ವಿನಿಮಯ ಮಾಡಿಕೊಳ್ಳುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

ಸಹಕಾರ ನಗರದ ಪರಿಕ್ರಮ ಶಾಲೆಯ 300ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಡ್ಯಾನಿಶ್ ಸಿಂಫೋನಿ ಯೂತ್ ಆರ್ಕೆಸ್ಟ್ರಾದ ಕಲಾವಿದರು ಯೂರೋಪಿಯನ್ ಸಂಗೀತದೊಂದಿಗೆ ರಂಜಿಸಿದರು. ಎರಡೂ ದೇಶಗಳ ವಿದ್ಯಾರ್ಥಿಗಳಿಗೆ ತಮ್ಮ ದೇಶದ ಕಲೆ ಮತ್ತು ಸಂಸ್ಕೃತಿ ಪ್ರದರ್ಶಿಸಲುಈ ಕಾರ್ಯಕ್ರಮ ಸೂಕ್ತ ವೇದಿಕೆ ಒದಗಿಸಿತು.

ಪರಿಕ್ರಮದ ವಿದ್ಯಾರ್ಥಿಗಳು ಡ್ಯಾನಿಶ್ ವಿದ್ಯಾರ್ಥಿಗಳ ಎದುರು ಕನ್ನಡ ಹಾಡು ಹಾಡುವ ಮೂಲಕ ಕನ್ನಡ ನಾಡುನುಡಿಯನ್ನು ಪರಿಚಯಿಸಿದರು. ಹವಾಮಾನ ಬದಲಾವಣೆ ಕುರಿತ ನಾಟಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT