ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹರಿಜನ’ ಪತ್ರಿಕೆಯನ್ನು ಸಂಪಾದಿಸುತ್ತಿದ್ದವರು ಯಾರು?

Last Updated 11 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

1. ‘ಹರಿಜನ’ ಪತ್ರಿಕೆಯನ್ನು ಸಂಪಾದಿಸುತ್ತಿದ್ದವರು ಯಾರು?
ಅ) ಅಂಬೇಡ್ಕರ್ ಆ) ನೆಹರು ಇ) ಗಾಂಧೀಜಿ ಈ) ತಿಲಕ್

2. ಮೂಲ ಮಹಾಭಾರತದ ಎಷ್ಟು ಪರ್ವಗಳನ್ನು ಮಾತ್ರ ಕುಮಾರವ್ಯಾಸ ಕನ್ನಡಿಸಿದ್ದಾನೆ?
ಅ) ಹತ್ತು ಆ) ಹನ್ನೆರಡು ಇ) ಹದಿನೆಂಟು ಈ) ಹದಿನಾರು

3. 2018ರ ‘ಅಡ್ಮಿರಲ್ ಕಪ್’ ಹಾಯಿದೋಣಿ ಸ್ಪರ್ಧೆ ಗೆದ್ದ ದೇಶ ಯಾವುದು?
ಅ) ನೈಜೀರಿಯಾ ಆ) ಸಿಂಗಾಪುರ ಇ) ಇಟಲಿ ಈ) ಪೋಲೆಂಡ್

4. ಭೂಮಿಯ ವಾತಾವರಣದಲ್ಲಿ ಅತ್ಯಂತ ಸಮೃದ್ಧವಾಗಿರುವ ಅನಿಲ ಯಾವುದು?
ಅ) ಜಲಜನಕ ಆ) ಸಾರಜನಕ
ಇ) ಹೀಲಿಯಂ ಈ) ಇಂಗಾಲದ ಡೈ ಆಕ್ಸೆಡ್‌

5. ಹಿರಿಯ ನಾಗರಿಕರಿಗಾಗಿ ‘ಮುಖ್ಯಮಂತ್ರಿ ತೀರ್ಥದರ್ಶನ್ ಯೋಜನ್’ಎಂಬ ಉಚಿತ ಪ್ರವಾಸ ಯಾವ ರಾಜ್ಯದಲ್ಲಿ ಮೊದಲು ಆರಂಭವಾಯಿತು?
ಅ) ಮಧ್ಯಪ್ರದೇಶ ಆ) ದೆಹಲಿ ಇ) ಬಿಹಾರ್ ಈ) ಪಶ್ಚಿಮ ಬಂಗಾಳ

6. ರವೀಂದ್ರನಾಥ ಠಾಕೂರರ ‘ಗೀತಾಂಜಲಿ’ಗೆ ಪ್ರಸ್ತಾವನೆ ಬರೆದ ಆಂಗ್ಲಕವಿ ಯಾರು?
ಅ) ಎಲಿಯಟ್ ಆ) ಏಟ್ಸ್ ಇ) ಶೆಲ್ಲಿ ಈ) ವಿಲಿಯಂ ಬ್ಲೆಕ್

7. ವಿಸ್ತೀರ್ಣದಲ್ಲಿ ಅತ್ಯಂತ ಕಿರಿದಾದ ಕೇಂದ್ರಾಡಳಿತ ಪ್ರದೇಶ ಯಾವುದು?
ಅ) ಚಂಡೀಗಢ ಆ) ದಾದ್ರಾ-ನಗರ ಹವೇಲಿ ಇ) ಡಯು-ಡಮನ್ ಈ) ಲಕ್ಷದ್ವೀಪ

8. ಬೇಡರ ಕಣ್ಣಪ್ಪ ಚಿತ್ರದ ‘ಶಿವಪ್ಪ ಕಾಯೋ ತಂದೆ... ’ ಹಾಡನ್ನು ಹಾಡಿದ ಗಾಯಕ ಯಾರು?
ಅ) ಘಂಟಸಾಲ ಆ) ಸೌಂದರ ರಾಜನ್ ಇ) ಸಿ.ಎಸ್. ಜಯರಾಮನ್ ಈ) ಶೀರ್ಗಳಿ ಗೋವಿಂದ ರಾಜನ್

9. ಸೈದ್ಧಾಂತಿಕವಾಗಿ ನೀರಿನ ಕುದಿಯುವ ಬಿಂದುವು ಎಲ್ಲಿ ನೂರು ಡಿಗ್ರಿ ಇರುತ್ತದೆ?
ಅ) ಎಲ್ಲ ಕಡೆ ಆ) ಅತಿ ಎತ್ತರದ ಸ್ಥಳದಲ್ಲಿ ಇ) ಅತಿ ತಗ್ಗಾದ ಸ್ಥಳದಲ್ಲಿ ಈ) ಸಮುದ್ರ ಮಟ್ಟದಲ್ಲಿ

10. ಬಿ.ಎಂ.ಶ್ರೀ. ಅವರ ‘ಅಶ್ವತ್ಥಾಮನ್’ ನಾಟಕ ಗ್ರೀಕಿನ ಯಾವ ನಾಟಕವನ್ನು ಆಧರಿಸಿದೆ?
ಅ) ಎಲೆಕ್ಟಾ ಆ) ಮೀಡಿಯಾ ಇ) ಎಜಾಕ್ಸ್ ಈ) ಅಗಮೆಮ್ನಾನ್

ಹಿಂದಿನ ಸಂಚಿಕೆಯ ಸರಿ ಉತ್ತರಗಳು
1. 1939 2. ಎರಡು 3. ಸಂಗೀತ 4. ಬಿ. ವೆಂಕಟಾಚಾರ್ಯ 5. ಭಾರತೀಯ ವಿದ್ಯಾ ಭವನ 6. ಹುದುಗು ಗೊಳಿಸಲು 7. ದೃಷ್ಟದ್ಯಮ್ನ 8. ಐವತ್ತು 9. ಗುಜರಾತ್ 10. ಕಂದಪದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT