ಪ್ರಜಾವಾಣಿ ಕ್ವಿಜ್ 58

7

ಪ್ರಜಾವಾಣಿ ಕ್ವಿಜ್ 58

Published:
Updated:

1. ಭಾರತದಲ್ಲಿ 4ಜಿ ತರಂಗಾಂತರ ಸೇವೆ ಆರಂಭವಾದದ್ದು ಯಾವ ವರ್ಷ?

ಅ) 2011 ಆ) 2012 ಇ) 2013 ಈ) 2014

2. ಸಂಗೀತಗಾರರಾದ ಹರಿಹರನ್ ಮತ್ತು ಲೆಸ್ಲಿ ಲೂಯಿಸ್‌ರ ಜೋಡಿ ಯಾವ ಹೆಸರಿನಿಂದ ಪ್ರಸಿದ್ಧವಾಗಿದೆ?

ಅ) ಕಲೋನಿಯಲ್ ಕಸಿನ್ಸ್ ಆ) ಕಲೋನಿಯಲ್ ಬ್ರದರ್ಸ್ ಇ) ಕಲೋನಿಯಲ್ ಕಂಪೋಸರ್ಸ್ ಈ) ಕಲೋನಿಯಲ್ ಕಪಲ್

3. ಇವರಲ್ಲಿ ಚಲನಚಿತ್ರಗಳಲ್ಲಿ ನಟಿಸಿರದ ಕರ್ನಾಟಕದ ರಾಜಕಾರಣಿ ಯಾರು?

ಅ) ರಾಮಕೃಷ್ಣ ಹೆಗಡೆ ಆ) ಜೆ.ಎಚ್. ಪಟೇಲ್ ಇ) ಎಂ.ಪಿ ಪ್ರಕಾಶ್ ಈ) ಅನಂತಕುಮಾರ್

4. ಆಧುನಿಕ ಇಸ್ಪೀಟನ್ನು ಹೋಲುವ ಪ್ರಾಚೀನ ಭಾರತೀಯ ಕ್ರೀಡೆ ಯಾವುದು?

ಅ) ಪಗಡೆ ಆ) ಚೆನ್ನೆಮಣೆ ಇ) ಗಂಜೀಫಾ ಈ) ಪರಮಪದ ಸೋಪಾನ ಪಟ

5. ಅಡಾಲ್ಫ್ ಹಿಟ್ಲರ್ ನಿಧಾನನಾದದ್ದು ಹೇಗೆ?

ಅ) ಯುದ್ಧದಲ್ಲಿ ಆ) ಹೃದಯಾಘಾತದಿಂದ ಇ) ಅಪಘಾತದಲ್ಲಿ ಈ) ಆತ್ಮಹತ್ಯೆಯಿಂದ

6. ಭಾರತೀಯ ಸಂಪ್ರದಾಯದ ಪ್ರಕಾರ ಇವುಗಳಲ್ಲಿ ಯಾವುದು ಮಾತಿನ ರೂಪಗಳಲ್ಲಿ ಒಂದಲ್ಲ?

ಅ) ಪ್ರಥಮಾ ಆ) ಪರಾ ಇ) ಪಶ್ಯಂತಿ ಈ) ವೈಖರಿ

7. ಗಾಣಗಿತ್ತಿ ಅಯ್ಯೋ ಎಂದರೆ... ಈ ಗಾದೆಯ ಉತ್ತರಾರ್ಧವೇನು?

ಅ) ಯಾರಿಗೇನು ಲಾಭ ಆ) ನೆತ್ತಿ ತಣ್ಣಗಾದೀತೇ ಇ) ಎಣ್ಣೆ ಬಂದೀತೇ ಈ) ದುಡ್ಡು ಸುರಿದೀತೇ

8. ಕ್ಯಾಸಿನೋಗಳಿಗೆ ಅತ್ಯಂತ ಪ್ರಸಿದ್ಧವಾದ ಅಮೆರಿಕದ ನಗರ ಯಾವುದು?

ಅ) ಲಾಸ್ ವೆಗಾಸ್ ಆ) ನ್ಯೂಯಾರ್ಕ್ ಇ) ಬೋಸ್ಟನ್ ಈ) ವಾಷಿಂಗ್ಟನ್

9. ಪಾರ್ತಿಸುಬ್ಬ ಯಾವ ಕ್ಷೇತ್ರದ ಪ್ರಸಿದ್ಧ ವ್ಯಕ್ತಿ?

ಅ) ಕಂಸಾಳೆ ಆ) ಹರಿಕಥೆ ಇ) ಯಕ್ಷಗಾನ ಈ) ಗೊಂಬೆಯಾಟ

10. ಭಾರತದ ಯಾವ ರಾಜ್ಯದಲ್ಲಿ ಹಿಂದೂ ಪುರುಷರಿಗೆ ಎರಡನೇ ಹೆಂಡತಿಯನ್ನು ಹೊಂದಲು ಕಾನೂನುಬದ್ಧ ಅವಕಾಶವಿದೆ?

ಅ) ಕರ್ನಾಟಕ ಆ) ಗೋವಾ ಇ) ಮಹಾರಾಷ್ಟ್ರ ಈ) ತೆಲಂಗಾಣ

ಹಿಂದಿನ ಸಂಚಿಕೆಯ ಸರಿ ಉತ್ತರಗಳು:

1 ನಾಯಿ 2. ಸಿ. ಲಲಿತ, ಸಿ. ಸರೋಜ

3. ಅಪಧಮನಿ 4. ಬಿಎಂಶ್ರೀ 5. ರಷ್ಯಾ

6. ಅರುಣ್ ಕುಮಾರ್ 7. ಕೇರಳ
8. ಎರಡನೇ ಪುಲಕೇಶಿ. 9. ಬನವಾಸಿ,
10 ಟೋಕಿಯೊ

ಎಸ್‌. ಎಲ್‌. ಶ್ರೀನಿವಾಸ ಮೂರ್ತಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !