ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್ | ಬೂರುಗದ ಮರದ ಬೀಜ ಪ್ರಸರಣವು ಯಾವುದರಿಂದ ಆಗುತ್ತದೆ?

Last Updated 17 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

1. ಚರ್ಮಕ್ಕೆ ಸಂಬಂಧಿಸಿದ ವೈದ್ಯಕೀಯ ಅಧ್ಯಯನದ ಶಾಸ್ತ್ರವನ್ನು ಏನೆಂದು ಕರೆಯುತ್ತಾರೆ?
ಅ) ಟ್ಯಾಕ್ಸಿಡರ್ಮಿ
ಆ) ಡರ್ಮೆಟಾಲಜಿ
ಇ) ಎಕೋಡರ್ಮಿ
ಈ) ಯಾವುದೂ ಅಲ್ಲ

2. ವಿಶ್ವ ವಿಖ್ಯಾತ ‘ಕ್ಯೂ ಗಾರ್ಡನ್’ ಯಾವ ನಗರದ ಬಳಿ ಇದೆ?
ಅ) ನ್ಯೂಯಾರ್ಕ್‌
ಆ) ಡೆವೊನ್
ಇ) ಲಂಡನ್
ಈ) ಪ್ಯಾರಿಸ್

3. ‘ತಾಂಡವಾಳ’ ಎಂಬ ಶಬ್ದ ಯಾವ ಲೋಹಕ್ಕೆ ಸಂಬಂಧಿಸಿದೆ?
ಅ) ತಾಮ್ರ
ಆ) ಬೆಳ್ಳಿ
ಇ) ಚಿನ್ನ
ಈ) ಕಬ್ಬಿಣ

4. ಅಕ್ಕಮಹಾದೇವಿಯು ಮೂಲತಃ ಯಾವ ಊರಿನವಳು?
ಅ) ಉಡುತಡಿ
ಆ) ಬಳ್ಳಿಗಾವೆ
ಇ) ಕಲ್ಯಾಣ
ಈ) ಉಳವಿ

5. ಚಿಕೂನ್‌ಗುನ್ಯಾ ಜ್ವರವು ವಿಶೇಷವಾಗಿ ದೇಹದ ಯಾವ ಭಾಗಗಳಲ್ಲಿ ಅತಿಯಾದ ನೋವನ್ನು ಉಂಟುಮಾಡುತ್ತದೆ?
ಅ) ಗಂಟಲು
ಆ) ಕೀಲುಗಳು
ಇ) ಹೊಟ್ಟೆ
ಈ) ಕಣ್ಣು

6. ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಪಂದ್ಯಗಳು ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತಿವೆ?
ಅ) ಎರಡು
ಆ) ಮೂರು
ಇ) ಒಂದು
ಈ) ನಾಲ್ಕು

7. ಥಿಯಡೊಲೈಟ್ ಎಂಬ ಉಪಕರಣವನ್ನು ಯಾವ ಕಾರ್ಯದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ?
ಅ) ಮುದ್ರಣ
ಆ) ಸರ್ವೆ
ಇ) ವೈದ್ಯಕೀಯ
ಈ) ನೇಯ್ಗೆ

8. ವಿ.ಸ.ಖಾಂಡೇಕರ್ ಅವರು ಯಾವ ಭಾಷೆಯ ಪ್ರಮುಖ ಸಾಹಿತಿ?
ಅ) ಗುಜರಾತಿ
ಆ) ರಾಜಸ್ಥಾನಿ
ಇ) ಒರಿಯಾ
ಈ) ಮರಾಠಿ

9. ಇವುಗಳಲ್ಲಿ ಯಾವುದು ಯೋಗದ ಎಂಟು ಅಂಗಗಳಲ್ಲಿ ಒಂದಲ್ಲ?
ಅ) ಅನುಸಂಧಾನ
ಆ) ಆಸನ
ಇ) ನಿಯಮ
ಈ) ಪ್ರಾಣಾಯಾಮ

10. ಬೂರುಗದ ಮರದ ಬೀಜ ಪ್ರಸರಣವು ಯಾವುದರಿಂದ ಆಗುತ್ತದೆ?
ಅ) ನೀರು
ಆ) ಪಕ್ಷಿಗಳು
ಇ) ಗಾಳಿ
ಈ) ಬೆಂಕಿ

ಹಿಂದಿನ ಸಂಚಿಕೆಯಸರಿ ಉತ್ತರಗಳು
1. ಐದು 2. ಎಚ್. ವಿ. ನಂಜುಂಡಯ್ಯ3. ರಾಯಚೂರು 4. ಒಂಬತ್ತು 5. ಸೆರೆನಾ ವಿಲಿಯಮ್ಸ್ 6. ಸಾವಿತ್ರಿ 7. ಕಾನಕಾನಹಳ್ಳಿ 8. ಮೈಸೂರು 9. ಗಿಲಟಿನ್ 10. ಬೇಂದ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT