ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಎಸ್‌ಎಲ್‌ಸಿ ಬದುಕಿನ ಮಹತ್ವದ ಹೆಜ್ಜೆ: ಇಲ್ಲಿವೆ ಹಲವು ಸಲಹೆಗಳು

Last Updated 9 ಫೆಬ್ರುವರಿ 2019, 5:35 IST
ಅಕ್ಷರ ಗಾತ್ರ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿದೆ. ಈ ಪರೀಕ್ಷೆ ಬದುಕಿನಲ್ಲಿ ಮಹತ್ವದ ಹೆಜ್ಜೆ. ಹೀಗಾಗಿ ಉತ್ತಮ ಶ್ರೇಣಿಯಲ್ಲಿ ಪಾಸಾಗಬೇಕೆಂಬ ಆತ್ಮವಿಶ್ವಾಸ, ಛಲ ಬೆಳೆಸಿಕೊಳ್ಳಬೇಕು

* ಪರೀಕ್ಷೆಗೆ ಇನ್ನೆಷ್ಟು ದಿನ ಉಳಿಯಿತೆಂದು ದಿನವೂ ಬರೆದಿಡಬೇಕು

* ಈಗಾಗಲೇ ಬರೆದ ಪರೀಕ್ಷೆಗಳ ತಪ್ಪನ್ನು ಸರಿಪಡಿಸಿಕೊಳ್ಳಬೇಕು

* ಅಧ್ಯಾಯವನ್ನು ಮೊದಲೇ ಮನದಟ್ಟು ಮಾಡಿಕೊಳ್ಳಬೇಕು

* ಶಿಕ್ಷಕರು, ಸಹಪಾಠಿಗಳ ಜತೆ ಕ್ಲಿಷ್ಟ ವಿಷಯ ಚರ್ಚಿಸಬೇಕು

* ದಿನವೂ ಬೆಳಿಗ್ಗೆ ಮತ್ತು ಸಂಜೆ ಸ್ವಲ್ಪ ಹೊತ್ತು ದೇವರ ಧ್ಯಾನ ಮಾಡಬೇಕು

* ಓದಿದ ವಿಷಯಗಳನ್ನು ಮನನ ಮಾಡಿಕೊಂಡು, ಪ್ರತಿದಿನ ಬರೆಯಬೇಕು

* ಏಕಾಂತದಲ್ಲಿ ಕುಳಿತು ಓದಿದ ವಿಷಯಗಳನ್ನು ನೆನಪಿಸಿಕೊಳ್ಳಬೇಕು

* ಸರಿಯಾದ ಸಮಯದಲ್ಲಿ ಆಹಾರ, ವಿಶ್ರಾಂತಿ ತೆಗೆದುಕೊಳ್ಳಬೇಕು

* ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು

* ಟಿ.ವಿ ಹಾಗೂ ಮೊಬೈಲ್‌ಗಳಿಂದ ದೂರವಿರಬೇಕು. ಸಹಪಾಠಿಗಳಿಗೆ ಸರಿಸಾಟಿಯಾಗಿರುತ್ತೇನೆ, ಅವರಿಗಿಂತ ಕೀಳಲ್ಲ ಎಂದುಅರಿಯಬೇಕು

* ಪರಿಶ್ರಮದಿಂದಲೇ ಮೇಲೆ ಬರಬೇಕೇ ವಿನಾ ಅನ್ಯ ಮಾರ್ಗದಿಂದಲ್ಲ ಎಂಬ ದೃಢ ಸಂಕಲ್ಪ ಇರಬೇಕು

* ಕೀಳರಿಮೆ, ಅತಿ ಆತ್ಮವಿಶ್ವಾಸ ಎರಡೂ ಒಳ್ಳೆಯದಲ್ಲ

* ಪರೀಕ್ಷೆ ಮುಗಿದ ದಿವಸ ಆ ವಿಷಯವನ್ನು ಪುನಃ ಚರ್ಚಿಸಬಾರದು. ಮುಂದಿನ ವಿಷಯದ ತಯಾರಿ ನಡೆಸಬೇಕು. ಪರೀಕ್ಷೆಗಾಗಿ ನಿತ್ಯದ ವೇಳಾಪತ್ರಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು

* ಪರೀಕ್ಷೆಯ ಹಿಂದಿನ ದಿನ ಹೆಚ್ಚು ಹೊತ್ತು ಓದದೇ ಪತ್ರಿಕೆ, ಪುಸ್ತಕಗಳಲ್ಲಿನ ಪ್ರಶ್ನೆ ಬಿಡಿಸಿದರೆ ಆತ್ಮವಿಶ್ವಾಸ ಹೆಚ್ಚುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT