ವರ್ಗ: ಮೆರಿಟ್ ಮತ್ತು ಆದಾಯ ಆಧಾರಿತ

ವಿದ್ಯಾರ್ಥಿ ವೇತನ: ಲೋರಿಯಲ್ ಇಂಡಿಯಾ ಫಾರ್ ಯಂಗ್ ವಿಮೆನ್ ಇನ್ ಸೈನ್ಸ್ ಸ್ಕಾಲರ್‌ಶಿಪ್– 2019

ವಿವರ: ಭಾರತದಲ್ಲಿ ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಗಳಲ್ಲಿ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ಕೈಗೊಳ್ಳುವ ವಿದ್ಯಾರ್ಥಿನಿಯರಿಗೆ ‘ಲೋರಿಯಲ್ ಇಂಡಿಯಾ’ ಸಂಸ್ಥೆ ವಿದ್ಯಾರ್ಥಿ ವೇತನ ನೀಡುತ್ತಿದೆ. ವಿಜ್ಞಾನ ಕ್ಷೇತ್ರದಲ್ಲಿ ವಿದ್ಯಾರ್ಥಿನಿಯರು ಶಿಕ್ಷಣದ ಜತೆಗೆ ತಮ್ಮ ಕೆರಿಯರ್ ರೂಪಿಸಿಕೊಳ್ಳಲು ನೆರವಾಗುವುದು ಹಾಗೂ ಆ ಮೂಲಕ ವಿದ್ಯಾರ್ಥಿನಿಯರ ಸಬಲೀಕರಣವನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಈ ವಿದ್ಯಾರ್ಥಿ ವೇತನ ಹೊಂದಿದೆ.

ಅರ್ಹತೆ: 2018-19ನೇ ಶೈಕ್ಷಣಿಕ ಸಾಲಿನಲ್ಲಿ 12ನೇ ತರಗತಿಯನ್ನು ಪಿಸಿಬಿ/ಪಿಸಿಎಂ/ಪಿಸಿಎಂಬಿಯಲ್ಲಿ ಶೇ 85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ₹ 4 ಲಕ್ಷಕ್ಕಿಂತ ಕಡಿಮೆ ಇರಬೇಕು. ಅಲ್ಲದೆ ಅಭ್ಯರ್ಥಿಗಳು 19 ವರ್ಷದೊಳಗಿನವರಾಗಿರಬೇಕು.

ಆರ್ಥಿಕ ನೆರವು ಮತ್ತು ಸೌಲಭ್ಯ: ಆಯ್ಕೆಯಾಗುವ ವಿದ್ಯಾರ್ಥಿನಿಯರಿಗೆ ಅವರ ಪದವಿ ವ್ಯಾಸಂಗಕ್ಕೆ ಬೋಧನಾ ಶುಲ್ಕ ಸೇರಿದಂತೆ ಇತರೆ ಖರ್ಚು ವೆಚ್ಚಗಳನ್ನು ಭರಿಸಲು ₹ 2.50 ಲಕ್ಷ ವಿದ್ಯಾರ್ಥಿವೇತನ ದೊರೆಯುತ್ತದೆ.

ಅರ್ಜಿ ಸಲ್ಲಿಕೆ ವಿಧಾನ: ಆನ್‍ಲೈನ್ ಮತ್ತು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ.

ವಿಳಾಸ: ಲೋರಿಯಲ್ ಇಂಡಿಯಾ, ದಿ ಸ್ಕಾಲರ್‌ಶಿಪ್ ಸೆಲ್, C/O Buddy4Study, ಸ್ಟೆಲ್ಲರ್ ಐಟಿ ಪಾರ್ಕ್, ಸಿ–25, ಆಫೀಸ್ ನಂ. 8,9,10. ಟವರ್–ಎ, ಗ್ರೌಂಡ್ ಫ್ಲೋರ್, ಸೆಕ್ಟರ್ 62, ನೊಯ್ಡಾ, ಉತ್ತರ ಪ್ರದೇಶ–201301 ಇಂಡಿಯಾ.

ಕೊನೆಯ ದಿನ: 2019ರ ಜುಲೈ 10

ಮಾಹಿತಿಗೆ: http://www.b4s.in/praja/LIF9

ವರ್ಗ: ಸಂಶೋಧನಾ ಆಧಾರಿತ

ವಿದ್ಯಾರ್ಥಿವೇತನ: ರಾಮನ್– ಚಾರ್ಪಾಕ್ ಫೆಲೊಶಿಪ್ 2019

ವಿವರ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ಮತ್ತು ಭಾರತೀಯ ಫ್ರೆಂಚ್ ಸಂಸ್ಥೆಯು (ಐಎಫ್‌ಐ) ವಿಜ್ಞಾನ ವಿಷಯದಲ್ಲಿ ಪಿಎಚ್.ಡಿ ಅಧ್ಯಯನ ಮಾಡಬಯಸುವ ಭಾರತೀಯ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಡಿ ಅವಕಾಶ ಫ್ರಾನ್ಸ್‌ನಲ್ಲಿ ಅಧ್ಯಯನ ನಡೆಸಲು ಅವಕಾಶ ಕಲ್ಪಿಸಲಿವೆ.

ಅರ್ಹತೆ: ಭಾರತದಲ್ಲಿ ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಯಲ್ಲಿ ಪಿಎಚ್.ಡಿ ಅಧ್ಯಯನಕ್ಕೆ ನೋಂದಾಯಿಸಿರುವ ವಿದ್ಯಾರ್ಥಿಗಳು ಫ್ರೆಂಚ್ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದಡಿ ವ್ಯಾಸಂಗ ಮಾಡಲು ಅರ್ಜಿ ಸಲ್ಲಿಸಬಹುದು. ಅರ್ಜಿದಾರರ ವಯೋಮಿತಿ 30 ವರ್ಷ.

ಸೌಲಭ್ಯ ಮತ್ತು ನೆರವು: ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ತಿಂಗಳಿಗೆ 1500 ಯುರೊ ವಿದ್ಯಾರ್ಥಿವೇತನವಾಗಿ ದೊರೆಯಲಿದೆ. ಅಲ್ಲದೆ ಫ್ರಾನ್ಸ್‌ಗೆ ಪ್ರಯಾಣ ವೆಚ್ಚ, ಆರೋಗ್ಯ ವಿಮೆ, ಉಪನ್ಯಾಸಗಳಲ್ಲಿ ಭಾಗವಹಿಸುವುದಕ್ಕೆ ತಗಲುವ ವೆಚ್ಚ, ವೀಸಾಕ್ಕೆ ನೆರವು ಮತ್ತು ಫ್ರಾನ್ಸ್‌ನಿಂದ ಹಿಂದಿರುಗುವಾಗ ಪ್ರಯಾಣ ವೆಚ್ಚವನ್ನು ಈ ವಿದ್ಯಾರ್ಥಿ ವೇತನವೇ ಭರಿಸಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 15, 2019

ಅರ್ಜಿ ಸಲ್ಲಿಕೆ ವಿಧಾನ: ಆನ್ಲೈನ್ ಮೂಲಕ

ಮಾಹಿತಿಗೆ: http://www.b4s.in/praja/RCF3

ವರ್ಗ: ಆದಾಯ ಆಧಾರಿತ

ವಿದ್ಯಾರ್ಥಿ ವೇತನ: ಎಚ್‌ಡಿಎಫ್‌ಸಿ ಬ್ಯಾಂಕ್ ಎಜುಕೇಶನಲ್ ಕ್ರೈಸಿಸ್ ಸ್ಕಾಲರ್‌ಶಿಪ್ ಸಪೋರ್ಟ್–2019

ವಿವರ: ಕೌಟುಂಬಿಕ ಆರ್ಥಿಕ ಸಮಸ್ಯೆಗಳಿಂದ ಶಿಕ್ಷಣ ಮುಂದುವರೆಸಲು ಕಷ್ಟವೆನಿಸುವ ವಿದ್ಯಾರ್ಥಿಗಳಿಗೆ ನೆರವು ನೀಡಲು ಎಚ್‍ಡಿಎಫ್‍ಸಿ ಬ್ಯಾಂಕ್ ಈ ವಿದ್ಯಾರ್ಥಿ ವೇತನ ಆರಂಭಿಸಿದೆ. ಆರ್ಥಿಕ ಸಮಸ್ಯೆ ಕಾರಣಕ್ಕೆ ವಿದ್ಯಾರ್ಥಿಗಳು ಓದನ್ನು ಮೊಟಕುಗೊಳಿಸಬಾರದು ಎಂಬ ಉದ್ದೇಶವನ್ನು ಈ ಸ್ಕಾಲರ್‌ಶಿಪ್ ಹೊಂದಿದೆ.

ಅರ್ಹತೆ: 6ರಿಂದ 12ನೇ ತರಗತಿ, ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳು, ಪೂರ್ಣ ಮತ್ತು ಅರೆ ಕಾಲಿಕ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವವರು, ಐಟಿಐ, ಡಿಪ್ಲೊಮಾ, ಪಾಲಿಟೆಕ್ನಿಕ್, ಪಿಎಚ್.ಡಿ. ವ್ಯಾಸಂಗ ಮಾಡುತ್ತಿರುವವರು ಅರ್ಜಿ ಸಲ್ಲಿಸಬಹುದು. ಆರ್ಥಿಕ ತೊಂದರೆಗೆ ಸಿಲುಕಿರುವ ಅಭ್ಯರ್ಥಿಗಳಿಗೆ (ಅನಾಥ, ದೀರ್ಘಕಾಲಿನ ಆರೋಗ್ಯ ಸಮಸ್ಯೆ/ ದುಡಿಯುವ ವ್ಯಕ್ತಿಯ ಮರಣ, ಅಂಗವಿಕಲ) ಆದ್ಯತೆ.

ಸೌಲಭ್ಯ ಮತ್ತು ನೆರವು: ಆಯ್ಕೆಯಾಗುವ ಶಾಲಾ ವಿದ್ಯಾರ್ಥಿಗಳಿಗೆ ₹ 10 ಸಾವಿರ, ವಿಶ್ವವಿದ್ಯಾಲಯ, ಐಟಿಐ, ಡಿಪ್ಲೊಮಾ, ಪಾಲಿಟೆಕ್ನಿಕ್ ಕೋರ್ಸ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ₹ 25,000 ನೆರವು ದೊರೆಯಲಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ಜುಲೈ 15

ಅರ್ಜಿ ಸಲ್ಲಿಕೆ ವಿಧಾನ: ಆನ್ಲೈನ್ ಮೂಲಕ ಮಾತ್ರ

ಮಾಹಿತಿಗೆ: http://www.b4s.in/praja/HEC6

ಕೃಪೆ: www.buddy4study.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.