ಟೀಚ್ ಫಾರ್ ಚೇಂಜ್‌ಗೆ ಪೆಗಾ ಬೆಂಬಲ

7

ಟೀಚ್ ಫಾರ್ ಚೇಂಜ್‌ಗೆ ಪೆಗಾ ಬೆಂಬಲ

Published:
Updated:
Deccan Herald

ಸರ್ಕಾರಿ ಶಾಲಾ ಮಕ್ಕಳಲ್ಲಿ ಡಿಜಿಟಲ್ ಸಾಕ್ಷರತೆ ಮತ್ತು ಭಾಷಾ ಕೌಶಲ್ಯ ಕಲಿಸುವುದರ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿದೇಶದ ಪೆಗಾ ಸಿಸ್ಟಮ್ಸ್ ಸಾಫ್ಟ್‌ವೇರ್ ಸಂಸ್ಥೆಯು ಟೀಚ್ ಫಾರ್ ಚೇಂಜ್ ಎಂಬ ಎನ್‌ಜಿಒ ಸಂಸ್ಥೆಯೊಂದಿಗೆ ಕೈಜೋಡಿಸಿದೆ.

ಈ ಉದ್ದೇಶದ ಅಂಗವಾಗಿ ಈಚೆಗೆ ನಗರದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ದೇಶದ ಪ್ರಸಿದ್ಧ ಫ್ಯಾಷನ್ ಡಿಸೈನರ್‌ಗಳು ತಯಾರಿಸಿದ್ದ ವಿಭಿನ್ನ ವಿನ್ಯಾಸದ ಉಡುಪುಗಳ ಫ್ಯಾಷನ್ ಶೋ ಸಹ ಹಮ್ಮಿಕೊಳ್ಳಲಾಗಿತ್ತು. ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಪ್ರಣೀತಾ ಸುಭಾಷ್ ಫ್ಯಾಷನ್ ಶೋದಲ್ಲಿ ಪಾಲ್ಗೊಂಡು ಜಾಗೃತಿ ಮೂಡಿಸಿದರು. ಅದರೊಟ್ಟಿಗೆ ರಿಟ್ಜ್ ಕಾರ್ಲ್‌ಟನ್‌ನಲ್ಲಿ ನಿಧಿ ಸಂಗ್ರಹಣೆಯನ್ನು ಮಾಡಲಾಯಿತು. ಧೀರೆನ್‌ ರಾಜ್‌ಕುಮಾರ್ ಹಾಗೂ ಬೆಹರಾಮ್ ಸಿಂಗಾನ್‌ಪುರಿಯಾ ಸಹ ಭಾಗಿಯಾಗಿದ್ದರು.

ಫ್ಯಾಷನ್‌ ಶೋದಲ್ಲಿ ಖನಿಜಿಯೋ ಅಫೀಷಿಯಲ್, ವಿಧಿವಾದ್ವಾನಿ, ಪರಿಧಿ ಜೈಪುರಿಯಾ ಮತ್ತು ಹೌಸ್ ಆಫ್ ತ್ರಿ ವಿನ್ಯಾಸದ ಉಡುಪುಗಳಿದ್ದವು. ಶೋಭಾ ಅಸಾರದ ಆಭರಣಗಳ ಪ್ರದರ್ಶನವೂ ಇತ್ತು.

ಪೆಗಾ ಟೀಚ್ ಫಾರ್ ಚೇಂಜ್ ಸಹಭಾಗಿತ್ವದಲ್ಲಿ ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಣದ ಸೂಚ್ಯಂಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ. ಈ ಸಂಬಂಧ ಈಗಾಗಲೇ 40 ಶಾಲೆಗಳಲ್ಲಿ 52 ತರಗತಿಗಳೊಂದಿಗೆ ನಗರದಲ್ಲಿ ಸಕ್ರಿಯವಾಗಿದ್ದು, ಎರಡು ಡಿಜಿಟಲ್ ಕೇಂದ್ರಗಳನ್ನು ಸ್ಥಾಪಿಸಿದೆ.

ಪೆಗಾ ಸಿಸ್ಟಮ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸುಮನ್ ರೆಡ್ಡಿ ಈದುನೂರಿ, ‘ನಾವು ಬೆಳೆಯುತ್ತಿರುವಂತೆ ನಮ್ಮೊಂದಿಗೆ ಸಮಾಜವು ಬೆಳೆಯಬೇಕು. ದೇಶದ ಎಲ್ಲೆಡೆಯ ಶಾಲೆಗಳಲ್ಲಿ ಡಿಜಿಟಲ್ ಸಂಬಂಧಿತ ಶಿಕ್ಷಣ ಇಂದು ಅಗತ್ಯವಾಗಿದೆ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !