ಗುರುವಾರ , ಜನವರಿ 23, 2020
22 °C

ಕೃಷಿ ವಿಶ್ವವಿದ್ಯಾಲಯ: SSLC, PUC ಪಾಸಾದವರಿಗೆ ಸಹಾಯಕ, ಚಾಲಕ ಹುದ್ದೆಗಳಿಗೆ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಜೂನಿಯರ್ ಎಂಜಿನಿಯರ್‌, ಸ್ಟೆನೊ, ಸಹಾಯಕ, ಚಾಲಕ, ಅಡುಗೆಯವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಸದರಿ ಹುದ್ದೆಗಳಿಗೆ ಹೈದರಾಬಾದ್‌ ಕರ್ನಾಟಕ ವಿಭಾಗದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. 

ಈ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ನಿಗದಿ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಜೊತೆಗೆ ಅಗತ್ಯ ಶೈಕ್ಷಣಿಕ ಪ್ರಮಾಣ ಪತ್ರಗಳ ಜೆರಾಕ್ಸ್‌ ಪ್ರತಿಗಳನ್ನು ಸಲ್ಲಿಸಬೇಕು. ಹುದ್ದೆಗಳ ವಿವರ, ವೇತನ, ವಯೋಮಿತಿ, ನಿಗದಿತ ಅರ್ಜಿ ನಮೂನೆಯ ಮಾಹಿತಿಗಾಗಿ ಅಧಿಸೂಚನೆ ನೋಡುವುದು.

ಹುದ್ದೆಗಳ ವಿವರ

1) ಜೂನಿಯರ್ ಎಂಜಿನಿಯರ್‌: 04

2) ಅಸಿಸ್ಟೆಂಟ್‌, ಫಿಲ್ಡ್‌ ಅಸಿಸ್ಟೆಂಟ್‌, ಲ್ಯಾಬೊರೇಟರಿ ಅಸಿಸ್ಟೆಂಟ್‌: 20

3) ಟೆಕ್ನಿಕಲ್‌: 07

4) ಸ್ಟೆನೊ/ಚಾಲಕ/ಅಡುಗೆಯವರು/ಕೇರ್‌ ಟೇಕರ್‌: 08

ವಯಸ್ಸು: ಕನಿಷ್ಠ 18, ಗರಿಷ್ಠ 35 ವರ್ಷಗಳು. ಸರ್ಕಾರದ ನಿಯಮಗಳ ಅನುಸಾರ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಸಡಿಲಿಕೆ: ಎಸ್‌ಸಿ, ಎಸ್‌ಟಿ, ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ, ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷಗಳು, ಅಂಗವಿಕಲರಿಗೆ 45 ವರ್ಷಗಳವರೆಗೂ ಸಡಿಲಿಕೆ ಇರುತ್ತದೆ.

ವಿದ್ಯಾರ್ಹತೆ, ವೇತನ ಶ್ರೇಣಿ, ನೇಮಕಾತಿ ಪ್ರಕ್ರಿಯೆಯ ಮಾಹಿತಿಗಾಗಿ ವಿಶ್ವವಿದ್ಯಾಲಯ ಪ್ರಕಟಿಸಿರುವ ಅಧಿಸೂಚನೆ ನೋಡುವುದು.

ಅರ್ಜಿ ಸಲ್ಲಿಸುವ ವಿಳಾಸ

The Administrative Officer, The University of Agricultural Science, GKVK, Bengaluru-560065

ಈ ಮೇಲಿನ ವಿಳಾಸಕ್ಕೆ ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ಪ್ರಮಾಣ ಪತ್ರಗಳನ್ನು ನಿಗದಿತ ದಿನಾಂಕದ ಒಳಗೆ ಕಳುಹಿಸಬೇಕು.

ಅರ್ಜಿ ಸಲ್ಲಿಕೆ ಕಡೆಯ ದಿನಾಂಕ: 28-01-2020

ಹೆಚ್ಚಿನ ಮಾಹಿತಿಗಾಗಿ ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯನ್ನು ನೋಡುವುದು. ಅಧಿಸೂಚನೆಯ ಲಿಂಕ್‌ ಅನ್ನು ಈ ಕೆಳಗೆ ನೀಡಲಾಗಿದೆ.

ಅಧಿಸೂಚನೆhttps://bit.ly/2usDPeT

ವೆಬ್‌ಸೈಟ್‌www.uasbangalore.edu.in

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು