ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹400 ಕನಿಷ್ಠ ವೇತನವೇ ನಿಜವಾದ ‘ಚಾರ್‌ಸೋ ಪಾರ್‌’: ಜೈರಾಮ್‌

Published 1 ಮೇ 2024, 14:18 IST
Last Updated 1 ಮೇ 2024, 14:18 IST
ಅಕ್ಷರ ಗಾತ್ರ

ನವದೆಹಲಿ: ಕಾರ್ಮಿಕರಿಗೆ ದಿನಕ್ಕೆ ₹400 ಕನಿಷ್ಠ ವೇತನ ನೀಡಲಾಗುವುದು ಎಂಬ ಕಾಂಗ್ರೆಸ್‌ನ ಭರವಸೆಯೇ ನಿಜವಾದ ‘ಚಾರ್‌ಸೋ ಪಾರ್‌’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಹೇಳಿದರು.

ಅಂತರರಾಷ್ಟ್ರೀಯ ಕಾರ್ಮಿಕರ ದಿನವಾದ ಬುಧವಾರ, ಕಾಂಗ್ರೆಸ್‌ನ ‘ಶ್ರಮಿಕ್‌ ನ್ಯಾಯ’ ಗ್ಯಾರಂಟಿಯನ್ನು ಪುನರುಚ್ಚರಿಸಿರುವ ಅವರು, ಕಳೆದ 10 ವರ್ಷಗಳು ಕಾರ್ಮಿಕರಿಗೆ ‘ಅನ್ಯಾಯ ಕಾಲ’ವಾಗಿತ್ತು ಎಂದಿದ್ದಾರೆ.

400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆಂಬ ಬಿಜೆಪಿಯ ಘೋಷವಾಕ್ಯವನ್ನು ಉಲ್ಲೇಖಿಸಿದ ರಮೇಶ್‌ ಅವರು, ಸಂವಿಧಾನವನ್ನು ಬದಲಾಯಿಸುವ ಉದ್ದೇಶದಿಂದ ಎನ್‌ಡಿಎ ಒಕ್ಕೂಟವು 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲು ಬಯಸುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT