ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅತಿ ಹೆಚ್ಚು ಬಾರಿ ಲೋಕಸಭೆಗೆ ಆಯ್ಕೆಯಾದವರು

Published 4 ಜೂನ್ 2024, 22:34 IST
Last Updated 4 ಜೂನ್ 2024, 22:34 IST
ಅಕ್ಷರ ಗಾತ್ರ

8ನೇ ಬಾರಿಗೆ ಲೋಕಸಭೆಗೆ ವೀರೇಂದ್ರ ಕುಮಾರ್

ಕೇಂದ್ರ ಸಚಿವ, ದಲಿತ ನಾಯಕ ವೀರೇಂದ್ರ ಕುಮಾರ್ ಅವರು ಎಂಟನೇ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

ಮಧ್ಯಪ್ರದೇಶದ ಟಿಕಮ್‌ಗಢ್ (ಎಸ್‌ಸಿ) ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೇಂದ್ರ ಸಚಿವ ವೀರೇಂದ್ರ ಕುಮಾರ್ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಪಂಕಜ್ ಅಹಿರ್ವಾರ್ ಅವರನ್ನು 4,03,312 ಮತಗಳಿಂದ ಸೋಲಿಸುವ ಮೂಲಕ ವಿಜಯಶಾಲಿ ಆಗಿದ್ದಾರೆ.

ವೀರೇಂದ್ರ ಕುಮಾರ್ ಅವರು 2009ರಿಂದ ಟಿಕಮ್‌ಗಢ ಲೋಕಸಭೆ ಕ್ಷೇತ್ರದಲ್ಲಿ ಅಜೇಯರಾಗಿ ಉಳಿದಿದ್ದು, ಸತತ ನಾಲ್ಕನೇ ಬಾರಿಗೆ ಚುನಾವಣೆಯಲ್ಲಿ ಗೆದ್ದರು. ಇದಕ್ಕೂ ಮೊದಲು, ಅವರು ನಾಲ್ಕು ಅವಧಿಗೆ ಸಾಗರ್ ಲೋಕಸಭಾ ಕ್ಷೇತ್ರ ಪ್ರತಿನಿಧಿಸಿದ್ದರು. ಆದರೆ, 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆಯ ನಂತರ ಅವರು ಟಿಕಾಮ್‌ಗಢ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

7ನೇ ಬಾರಿಗೆ ಪಂಕಜ್ ಚೌಧರಿ

ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಮತ್ತು ಹಿಂದುಳಿದ ವರ್ಗದ ನಾಯಕರಾದ ಪಂಕಜ್ ಚೌಧರಿ ಅವರು ಲೋಕಸಭೆಗೆ ಏಳನೇ ಅವಧಿಗೆ ಆಯ್ಕೆಯಾಗಿದ್ದಾರೆ. 

ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವಿರೇಂದ್ರ ಚೌದರಿ ಅವರನ್ನು ಪಂಕಜ್‌ 35,451 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.‌ 

ಬಿಜೆಪಿ ಅಭ್ಯರ್ಥಿಗಳಾದ ಇಂದರ್‌ಜಿತ್ ಸಿಂಗ್ ಮತ್ತು ಐದು ಬಾರಿಯ ಸಂಸದ, ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ರಾವ್‌ ಇಂದರ್‌ಜಿತ್ ಸಿಂಗ್ ಲೋಕಸಭೆಗೆ ಆರನೇ ಬಾರಿಗೆ ಪ್ರವೇಶಿಸಿದ್ದಾರೆ. ಹರಿಯಾಣದ ಗುರ್ಗಾಂವ್ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿ ರಾಜ್‌ ಬಬ್ಬರ್‌ ಅವರನ್ನು 73,465 ಮತಗಳ ಅಂತರದಿಂದ ಮಣಿಸಿ‌‌ದ್ದಾರೆ. 

ಶಿವರಾಜ್ ಸಿಂಗ್‌ ಚೌಹಾಣ್

ಬಿಜೆಪಿ ಅಭ್ಯರ್ಥಿ ಶಿವರಾಜ್‌ ಸಿಂಗ್‌ ಚೌಹಾಣ್ ಅವರು ಆರನೇ ಅವಧಿಗೆ ಲೋಕಸಭೆಗೆ ಪ್ರವೇಶಿಸಿದ್ದಾರೆ. ಮಧ್ಯಪ್ರದೇಶದ ವಿಧಿಶಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು 8,21,408 ಮತಗಳ ಅಂತರದಿಂದ ಕಾಂಗ್ರೆಸ್‌ ಅಭ್ಯರ್ಥಿ ಪ್ರತಾಪ್‌ ಬಾನು ಶರ್ಮಾ ಅವರನ್ನು ಮಣಿಸಿದ್ದಾರೆ. 1991ರಿಂದ 2004 ರವರೆಗೆ ವಿದಿಶಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2005ರಲ್ಲಿ ಬಿಜೆಪಿಯ ಮಧ್ಯಪ್ರದೇಶ ಘಟಕದ ಅಧ್ಯಕ್ಷರಾಗಿ ನೇಮಕವಾದ ಚೌಹಾಣ್‌ ಅವರು ಅದೇ ವರ್ಷ ಮುಖ್ಯಮಂತ್ರಿಯಾದರು. 2018ರ ಚುನಾವಣೆಯ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಅದರ 15 ತಿಂಗಳ ಆಡಳಿತ ಹೊರತುಪಡಿಸಿ, 2023ರ ರಾಜ್ಯ ವಿಧಾನಸಭಾ ಚುನಾವಣೆಯವರೆಗೂ ಚೌಹಾಣ್‌ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದರು.  

ಸುದೀಪ್ ಬಂಧೋಪಾಧ್ಯಾಯ

ತೃಣಮೂಲ ಕಾಂಗ್ರೆಸ್‌ನ ಸುದೀಪ್ ಬಂಧೋಪಾಧ್ಯಾಯ ಅವರು ಲೋಕಸಭೆಯಲ್ಲಿ ಆರನೇ ಬಾರಿಗೆ ಗೆದ್ದಿದ್ದಾರೆ.

ಕೋಲ್ಕತ್ತಾ ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯ ತಪಸ್‌ ರಾಯ್‌ ಅವರನ್ನು 83,731 ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾಗಿದ್ದಾರೆ. ಕಳೆದ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ರಾಹುಲ್‌ ಸಿನ್ಹಾ ಅವರನ್ನು 1,27,095 ಮತಗಳ ಅಂತರದಿಂದ ಮಣಿಸಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್‌ನ ಪ್ರಬಲ ಸ್ಪರ್ಧೆಯ ನಡುವೆಯೂ  ಸುದೀಪ್‌ ಅವರು ನಿರಂತರವಾಗಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT