ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಂದ್ರ ಮೋದಿ ಮತ್ತೆ ಸರ್ಕಾರ ರಚಿಸುವುದು ಕಷ್ಟ: ಮಲ್ಲಿಕಾರ್ಜುನ ಖರ್ಗೆ

Published 11 ಮೇ 2024, 9:56 IST
Last Updated 11 ಮೇ 2024, 9:56 IST
ಅಕ್ಷರ ಗಾತ್ರ

ಪಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಸರ್ಕಾರ ರಚಿಸುವುದು ಅತ್ಯಂತ ಕಷ್ಟವಾಗಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಹೇಳಿದ್ದಾರೆ.

ಇಂಡಿಯಾ ಮೈತ್ರಿಕೂಟದ ನಾಯಕರಾದ ಸಿಪಿಐ(ಎಂಎಲ್‌)ನ ದೀ‍ಪಾಂಕರ್‌ ಭಟ್ಟಾಚಾರ್ಯ, ಆರ್‌ಜೆಡಿಯ ಮನೋಜ್ ಕುಮಾರ್ ಝಾ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 

ಪ್ರಧಾನಿಯವರ ಭಾಷಣಗಳು ಇತ್ತೀಚಿನ ದಿನಗಳಲ್ಲಿ ಸವಕಲಾಗಿವೆ ಎಂದ ಅವರು, ಮೋದಿ ಭಾಷಣದಲ್ಲಿ ಮೊದಲಿದ್ದ ಗತ್ತು, ಗಮ್ಮತ್ತು, ಅಭಿಮಾನ ಕಾಣೆಯಾಗಿದೆ. ಅವರು ತೆಲಂಗಾಣದಲ್ಲಿ ಮಾತನಾಡುತ್ತಿದ್ದಾಗ ಇದನ್ನು ನಾನು ಗಮನಿಸಿರುವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಚುನಾವಣೆಯ ಮೂರು ಹಂತಗಳ ಮತದಾನ ಮುಗಿದ ಮೇಲೆ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗುವುದು ಕಷ್ಟ ಎಂಬುದನ್ನು ನಾನು ಹೇಳಬಲ್ಲೆ. ತಮ್ಮ 10 ವರ್ಷಗಳ ಸಾಧನೆಯನ್ನು ಹೇಳಿಕೊಳ್ಳುವುದು ಹಾಗೂ ಹಿಂದೂ-ಮುಸ್ಲಿಂ ವಿಭಜನೆ ಮಾಡಲು ಯತ್ನಿಸಿರುವುದೇ ಇದಕ್ಕೆ ಕಾರಣ ಎಂದು ಖರ್ಗೆ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT