ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಶುಕ್ರವಾರ ಪೂರ್ಣಗೊಂಡಿದ್ದು, ಸಂಜೆ 7ರ ಹೊತ್ತಿಗೆ ಶೇ 60.03ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಈ ಬಾರಿಯ ಲೋಕಸಭೆ ಚುನಾವಣೆಯು ಒಟ್ಟು ಏಳು ಹಂತಗಳಲ್ಲಿ ನಡೆಯುತ್ತಿದೆ. ಮೊದಲ ಹಂತದಲ್ಲಿ ಇಂದು (ಶುಕ್ರವಾರ) 21 ರಾಜ್ಯಗಳ 102 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ.

ಅಧಿಕೃತವಾಗಿ ಮತದಾನ ಸಂಜೆ 6ಕ್ಕೆ ಕೊನೆಗೊಂಡಿತು. ಆದರೆ ಸರತಿಯಲ್ಲಿ ನಿಂತಿದ್ದ ಮತದಾರರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಪುದುಚೇರಿಯಲ್ಲಿ ಗರಿಷ್ಠ ಶೇ 73.25ರಷ್ಟು ಮತದಾನವಾಗಿದ್ದರೆ, ಬಿಹಾರದಲ್ಲಿ ಕನಿಷ್ಠ ಶೇ 47.49ರಷ್ಟು ಮತದಾನವಾಗಿದೆ. ಉಳಿದಂತೆ...

ಅಂಡಮಾನ್ ನಿಕೋಬಾರ್– ಶೇ 56.87

ಅರುಣಾಚಲಪ್ರದೇಶ ಶೇ 65.46

ಅಸ್ಸಾಂ– ಶೇ 71.38

ಚತ್ತೀಸಗಢ–ಶೇ 63.41

ಜಮ್ಮು ಮತ್ತು ಕಾಶ್ಮೀರ– ಶೇ 65.08

ಲಕ್ಷದ್ವೀಪ– ಶೇ 59.02

ಮಧ್ಯಪ್ರದೇಶ– ಶೇ 55.29

ಮಹಾರಾಷ್ಟ್ರ– ಶೇ 55.29

ಮಣಿಪುರ– ಶೇ 68.62

ಮೇಘಾಲಯ– ಶೇ 70.26

ಮಿಜೋರಾಂ– ಶೇ 54.18

ನಾಗಾಲ್ಯಾಂಡ್– ಶೇ 56.77

ಪುದುಚೇರಿ– ಶೇ 73.25

ರಾಜಸ್ಥಾನ– ಶೇ 50.95

ಸಿಕ್ಕಿಂ– ಶೇ 68.06

ತಮಿಳುನಾಡು– ಶೇ 62.19

ಮಧ್ಯಾಹ್ನ 3ರವರೆಗೂ ಮತದಾನ ಪ್ರಮಾಣ ಶೇ 49.78ರಷ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.