ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಮ್ಲಾ: ಮೊಬೈಲ್‌ ಮೂಲಕ ಮತಯಾಚನೆ

Published 28 ಮೇ 2024, 23:40 IST
Last Updated 28 ಮೇ 2024, 23:40 IST
ಅಕ್ಷರ ಗಾತ್ರ

ಶಿಮ್ಲಾ: ಚುನಾವಣೆಯ ಸಂದರ್ಭದಲ್ಲಿ‌ ಜನರನ್ನು ಭೇಟಿಯಾಗಿ ಮತಯಾಚಿಸುವ ಪರಿಪಾಟ ಈಗ ತೆರೆಮರೆಗೆ ಸರಿದಿದ್ದು, ಅತ್ಯಾಧುನಿಕ ತಂತ್ರಜ್ಞಾನವೇ ಅಭ್ಯರ್ಥಿ ಮತ್ತು ಜನರ ನಡುವಿನ ಸೇತುವೆಯಾಗಿದೆ ಎಂದು ಹಿಮಾಚಲ ಪ್ರದೇಶದ ಹಿರಿಯ ಮತದಾರರಾದ ಜುಧ್ಯಾ ದೇವಿ ಅವರು ಅಭಿಪ್ರಾಯಪಟ್ಟರು.

ಹಿಂದೆ ಚುನಾವಣಾ ಪ್ರಚಾರದ ಅಂಗವಾಗಿ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತ ಯಾಚಿಸುತ್ತಿದ್ದರು. ಈಗ ಮೊಬೈಲ್‌ ಫೋನ್‌ಗಳೇ ಮತಯಾಚನೆಗೆ ಮಾಧ್ಯಮವಾಗಿದೆ ಎಂದು 116 ವರ್ಷದ ಜುಧ್ಯಾ ದೇವಿ ಹೇಳಿದರು.

ಮನೆ ಮನೆಗೆ ತೆರಳಿ ಮತಯಾಚಿಸುತ್ತಿದ್ದ ಕಾರಣ ಮತದಾರರು ಮತ್ತು ಅಭ್ಯರ್ಥಿ ನಡುವೆ ಪರಸ್ಪರ ವೈಯಕ್ತಿಕ ಸಂಪರ್ಕವಿರುತ್ತಿತ್ತು. ಈಗ ಅದು ಇಲ್ಲವಾಗಿದೆ ಎಂದು ಅವರು ಖೇದ ವ್ಯಕ್ತಪಡಿಸಿದರು.

ಮಂಡಿ ಜಿಲ್ಲೆಯ ಬಿಲಾಸ್‌ಪುರದ ಕೋಟ್ ಗ್ರಾಮದ ಜುಧ್ಯಾ ದೇವಿ ಅವರು ಪುತ್ರಿ ಠಾಕೂರಿ ದೇವಿ ಮನೆಯಲ್ಲಿ ವಾಸವಾಗಿದ್ದಾರೆ. ಅನಾರೋಗ್ಯದ ಕಾರಣ ಅವರು ಈ ಬಾರಿ ಮನೆಯಿಂದಲೇ ಮತದಾನ ಮಾಡಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದರು.

ಹಿಮಾಚಲ ಪ್ರದೇಶದ ಒಟ್ಟು 56,45,579 ಮತದಾರರಲ್ಲಿ 1,31,642 ಮಂದಿ ಹಿರಿಯ ನಾಗರಿಕರಿದ್ದಾರೆ ಎಂದು ವಿವರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT