ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೈಭೀ ಚೌಕೀದಾರ್’ ನೇರ ಸಂವಾದ

ದೇಶದ ವಿವಿಧೆಡೆಯ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ಸಂವಾದ
Last Updated 31 ಮಾರ್ಚ್ 2019, 15:15 IST
ಅಕ್ಷರ ಗಾತ್ರ

ಬೀದರ್: ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ನಗರದ ಹೋಟೆಲ್‌ ಲಕ್ಷ್ಮಿ ಇಂಟರ್‌ನ್ಯಾಷನಲ್‌ ಸಭಾಂಗಣದಲ್ಲಿ ಭಾನುವಾರ ‘ಮೈಭೀ ಚೌಕೀದಾರ್’ ಸಂವಾದ ಕಾರ್ಯಕ್ರಮದ ನೇರ ಪ್ರಸಾರ ನಡೆಯಿತು.

ದೆಹಲಿಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧೆಡೆಯ ಕಾರ್ಯಕರ್ತರೊಂದಿಗೆ ನೇರ ಸಂವಾದ ನಡೆಸಿದರು.

ಸಂವಾದ ಶುರುವಾಗುತ್ತಿದ್ದಂತೆಯೇ ಕಾರ್ಯಕರ್ತರು ತಮ್ಮ ಎರಡು ಕೈಗಳನ್ನು ಮೇಲಕ್ಕೆ ಎತ್ತಿ ‘ಮೋದಿಜಿ ನೀವು ಮುಂದೆ ಸಾಗಿ, ನಾವು ನಿಮ್ಮೊಂದಿಗೆ ಇದ್ದೇವೆ’ ಎನ್ನುವ ಘೋಷಣೆಗಳನ್ನು ಕೂಗಿದರು.

ಬೆಂಗಳೂರಿನ ರಾಕೇಶ್ ಪ್ರಸಾದ ಅವರು ‘ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂದೇ ಹೇಳಿಕೊಳ್ಳುತ್ತಿದ್ದೇವೆ. ಮುಂದುವರಿದ ರಾಷ್ಟ್ರ ಎಂದು ಒಪ್ಪಿಕೊಳ್ಳುವುದು ಯಾವಾಗ?’ ಎಂದು ಕೇಳಿದರು.

‘ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿನ ದೇಶ ಭಕ್ತಿಗೆ ಸರಿಯಾದ ದಿಕ್ಕು ತೋರಿಸಿದ್ದರೆ ನಮ್ಮ ದೇಶ ಯಾವತ್ತೋ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಿತ್ತು. ಭಾರತ–ಪಾಕಿಸ್ತಾನದ ಗಡಿ ವಿವಾದದಲ್ಲೇ ಹೆಚ್ಚಿನ ಸಮಯ ಕಳೆದಿದ್ದೇವೆ. ಪಾಕಿಸ್ತಾನಕ್ಕೆ ಅದರ ಪಾಡಿಗೆ ಸಾಯಲು ಬಿಡಿ. ಸೇನೆಯ ಕಾರ್ಯ ಹಾಗೂ ಕ್ರೀಡೆಯಲ್ಲಿನ ಸಾಧನೆ ಸೇರಿದಂತೆ ನಮ್ಮ ರಾಷ್ಟ್ರದ ಶಕ್ತಿ ಪ್ರತಿಯೊಂದು ಕ್ಷೇತ್ರದಲ್ಲೂ ವೃದ್ಧಿಸಿದೆ ’ ಎಂದು ಪ್ರಧಾನಿ ಉತ್ತರಿಸಿದರು.

ಬೀದರ್‌ ಲೋಕಸಭಾ ಕ್ಷೇತ್ರದ ಬಿಜೆಪಿಯ ಉಸ್ತುವಾರಿ ಅಮರನಾಥ ಪಾಟೀಲ, ಶಾಸಕ ಪ್ರಭು ಚವಾಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರ ಸಿಂಗ್‌ ಠಾಕೂರ್‌, ಜಿಲ್ಲಾ ವಕ್ತಾರ ಬಸವರಾಜ ಜೋಜನಾ, ಮಹೇಶ್ವರ ಸ್ವಾಮಿ, ಚಂದ್ರಶೇಖರ ಗಾದಾ, ಡಾ.ನಿತಿನ್‌ ಕರ್ಪೂರ್, ಸಚ್ಚಿದಾನಂದ ಚಿದ್ರೆ, ಶಶಿಧರ ಸ್ವಾಮಿ, ನಿಲೇಶ ಜಾಧವ, ಅಶೋಕ ಹೊಕ್ರಾಣೆ, ವಿಜಯಕುಮಾರ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT