ಬೆಂಗಳೂರು: ಟಾಟಾ ಮುಂಬೈ ಮ್ಯಾರಥಾನ್ (ಟಿಎಂಎಂ) 2026 ತನ್ನ ಪಾಲುದಾರರಾದ ಯುನೈಟೆಡ್ ವೇ ಮುಂಬೈ ಅವರ ಬೆಂಬಲದೊಂದಿಗೆ ಈಗಾಗಲೇ ₹53.7 ಕೋಟಿಗೂ ಅಧಿಕ ನಿಧಿಯನ್ನು ಸಂಗ್ರಹಿಸಿದೆ.

ಸಂಗ್ರಹವಾಗುವ ನಿಧಿಯನ್ನು ಮಕ್ಕಳ ಶಿಕ್ಷಣ, ಮಹಿಳಾ ಸಬಲೀಕರಣ, ಸಮುದಾಯಗಳ ಬಲವರ್ಧನೆ, ಆರೋಗ್ಯ ಸುಧಾರಣೆ, ಪ್ರಾಣಿಗಳ ಆರೈಕೆ ಹಾಗೂ ಪರಿಸರ ಸಂರಕ್ಷಣೆಯಂತಹ ವಿವಿಧ ಕ್ಷೇತ್ರಗಳಿಗೆ ವಿನಿಯೋಗಿಸಲಾಗುತ್ತದೆ. ನಿಧಿ ಸಂಗ್ರಹಣೆಯು 2026ರ ಫೆ. 5ರವರೆಗೆ ಮುಂದುವರಿಯಲಿದೆ ಎಂದು ಟಿಎಂಎಂ ತಿಳಿಸಿದೆ.

2004ರಿಂದ ಇಂದಿನವರೆಗೆ ಎನ್ಜಿಒಗಳು, ಕಾರ್ಪೊರೇಟ್ ಸಂಸ್ಥೆಗಳು, ಓಟಗಾರರು ಹಾಗೂ ವೈಯಕ್ತಿಕ ನಿಧಿ ಸಂಗ್ರಾಹಕರ ಒಕ್ಕೂಟದ ಪ್ರಯತ್ನಗಳಿಂದ ಒಟ್ಟು ₹536 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಹೇಳಿದೆ.

ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಬದ್ಧತೆಗಳನ್ನು ಬಲಪಡಿಸಲು ಹಾಗೂ ನೌಕರರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಮ್ಯಾರಥಾನ್ ವೇದಿಕೆಯನ್ನು ಬಳಸಿಕೊಳ್ಳುತ್ತಿವೆ. ಈ ವರ್ಷ ಭಾಗವಹಿಸಿರುವ 194 ಕಾರ್ಪೊರೇಟ್ ತಂಡಗಳಲ್ಲಿ 40 ಕಂಪನಿಗಳು ಮೊದಲ ಬಾರಿಗೆ ಮ್ಯಾರಥಾನ್ನ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿವೆ ಎಂದು ತಿಳಿಸಿದೆ.

ಎನ್ಜಿಒ ವಲಯವೂ ವಿಸ್ತಾರಗೊಳ್ಳುತ್ತಿದ್ದು, 2026ರಲ್ಲಿ 68 ಹೊಸ ಸಂಸ್ಥೆಗಳು ಸೇರ್ಪಡೆಯಾಗಿವೆ. ಇದರೊಂದಿಗೆ ಒಟ್ಟು ಎನ್ಜಿಒಗಳ ಸಂಖ್ಯೆ 305ಕ್ಕೆ ಏರಿಕೆಯಾಗಿದೆ. ಇದು ನಿಧಿ ಸಂಗ್ರಹ ಮತ್ತು ಜಾಗೃತಿ ನಿರ್ಮಾಣಕ್ಕೆ ಹೊಸ ವೇದಿಕೆಯನ್ನು ಒದಗಿಸುತ್ತಿದೆ ಎಂದು ಹೇಳಿದೆ.

ಈ ಅಭಿಯಾನವು ಸಾಮಾಜಿಕ ಬಂಡವಾಳವನ್ನು ನಿರ್ಮಿಸುವುದರ ಜೊತೆಗೆ, ಮುಂದಿನ ತಲೆಮಾರಿನ ದಾನಿಗಳು, ನಿಧಿ ಸಂಗ್ರಾಹಕರು ಮತ್ತು ಸಾಮಾಜಿಕವಾಗಿ ತೊಡಗಿಸಿಕೊಂಡ ಸಂಸ್ಥೆಗಳನ್ನು ರೂಪಿಸುತ್ತಿದೆ ಎಂದು ತಿಳಿಸಿದೆ.

ಒಂದೇ ವರ್ಷದಲ್ಲಿ ಶೇ.70ಕ್ಕೂ ಹೆಚ್ಚು ನಿಧಿ ಸಂಗ್ರಾಹಕರು, 40 ಹೊಸ ಕಾರ್ಪೊರೇಟ್ಗಳು ಮತ್ತು 68 ಹೊಸ ಎನ್ಜಿಒಗಳು ಸೇರಿಕೊಂಡಿವೆ. ಟಾಟಾ ಮುಂಬೈ ಮ್ಯಾರಥಾನ್ ಈಗ ಕೇವಲ ಓಟವಲ್ಲ, ಹೊಸ ತಲೆಮಾರಿನವರು ದಾನವನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಪಾಲ್ಗೊಳ್ಳುತ್ತಾರೆ ಎಂಬುದನ್ನು ರೂಪಿಸುವ ವೇದಿಕೆಯಾಗಿದೆ ಎಂದು ಯುನೈಟೆಡ್ ವೇ ಮುಂಬೈ ಸಿಇಒ ಜಾರ್ಜ್ ಐಕಾರಾ ಹೇಳಿದರು.

ಟಾಟಾ ಮುಂಬೈ ಮ್ಯಾರಥಾನ್ ಕಾರ್ಪೊರೇಟ್ಗಳು, ಎನ್ಜಿಒಗಳು, ಓಟಗಾರರು ಹಾಗೂ ವೈಯಕ್ತಿಕ ನಿಧಿ ಸಂಗ್ರಾಹಕರಿಗೆ ಸಾಮಾಜಿಕ ಹಿತಕ್ಕಾಗಿ ವೇದಿಕೆಯನ್ನು ಒದಗಿಸಿದೆ. ಇದು ನಾಗರಿಕ ಸಮಾಜದೊಂದಿಗೆ ನಮ್ಮ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಎನ್ಜಿಒ ಕ್ಷೇತ್ರದಲ್ಲಿ ನಿಧಿ ಸಂಗ್ರಹದ ವೆಚ್ಚವು ಸಾಮಾನ್ಯವಾಗಿ ಶೇ. 50–60 ಇರುತ್ತದೆ. ಯುನೈಟೆಡ್ ವೇ ಮುಂಬೈ ಅವರ ಬೆಂಬಲದಿಂದ ಅದನ್ನು ಶೇ. 3.83ಗೆ ಇಳಿಸಲು ಸಾಧ್ಯವಾಗಿದೆ. ಆದ್ದರಿಂದಲೇ ಇಂದು 305 ಎನ್ಜಿಒಗಳು ಮುಂಬೈ ಮ್ಯಾರಥಾನ್ ಮೂಲಕ ನಿಧಿ ಮತ್ತು ಜಾಗೃತಿ ಸಂಗ್ರಹಿಸುತ್ತಿವೆ ಎಂದು ಪ್ರೋಕ್ಯಾಮ್ ಇಂಟರ್ನ್ಯಾಷನಲ್ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಸಿಂಗ್ ಹೇಳಿದರು.

ಟಾಟಾ ಮುಂಬೈ ಮ್ಯಾರಥಾನ್ನ ನಿಧಿ ಸಂಗ್ರಹವು ನನ್ನ ಕುಟುಂಬವನ್ನು ಸಮುದಾಯ ಆಧಾರಿತ ಬದಲಾವಣೆಯ ನಂಬಿಕೆಯ ಸುತ್ತ ಒಗ್ಗೂಡಿಸಿತು. ಈ ವೇದಿಕೆ ರೇಸ್ ದಿನದಾಚೆಯೂ ಮುಂದುವರಿಯುವ ಸಮೂಹ ಪ್ರಯತ್ನಗಳಿಗೆ ಅವಕಾಶ ನೀಡುತ್ತದೆ ಎಂದು ಮಾನಸಿಕ ಆರೋಗ್ಯ ಹೋರಾಟಗಾರ್ತಿ, ನಾಟಕ ನಿರ್ದೇಶಕಿ ಹಾಗೂ ಅಗತ್ಸು ಫೌಂಡೇಶನ್ ಸಂಸ್ಥಾಪಕಿ ಇರಾ ಖಾನ್ ತಿಳಿಸಿದರು.

ಈ ಹೊಸ ನಿಧಿ ಸಂಗ್ರಾಹಕರ ಜೊತೆಗೆ, ಚೇಂಜ್ ಲೆಜೆಂಡ್ಸ್ ಎಂದು ಪರಿಚಿತರಾದ ದಾನಿಗಳು ಈ ಅಭಿಯಾನಕ್ಕೆ ಬಲ ನೀಡುತ್ತಿದ್ದಾರೆ. ವಿಲ್ಲಿ ಡಾಕ್ಟರ್ (₹1.67 ಕೋಟಿ), ಅಜಯ್ ಎಚ್. ಮೆಹ್ತಾ (₹1.40 ಕೋಟಿ) ಮತ್ತು ಸದಾಶಿವ ಎಸ್. ರಾವ್ (₹1.09 ಕೋಟಿ) ಪ್ರಮುಖರು. ಡಾ. ಬಿಜಲ್ ಮೆಹ್ತಾ, ಡಾ. ಮೀರಾ ಮೆಹ್ತಾ ಮತ್ತು ಶ್ಯಾಮ್ ಜಸಾನಿ ಅವರು ಕೂಡ ₹1 ಕೋಟಿ ಗಡಿ ದಾಟಿದ್ದಾರೆ. ಈ ಸಾಲಿನಲ್ಲಿ 16 ವರ್ಷದ ಸೋಫಿ ಸೋನಾ ಶಾ ಅವರು ಟಾಟಾ ಮುಂಬೈ ಮ್ಯಾರಥಾನ್ ಇತಿಹಾಸದ ಅತ್ಯಂತ ಕಿರಿಯ ‘ಚೇಂಜ್ ಲೆಜೆಂಡ್ ಎನ್ನುವ ಖ್ಯಾತಿಗೆ ಪಾತ್ರರಾದರು. ಮೊದಲ ಬಾರಿಗೆ ನಿಧಿ ಸಂಗ್ರಹಿಸಿದರೂ, ಅವರ ಸಾಧನೆ ಟಿಎಂಎಂ 2026ರಲ್ಲಿ ಉಂಟಾಗುತ್ತಿರುವ ಬದಲಾವಣೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ ಎಂದು ಟಿಎಂಎಂ ತಿಳಿಸಿದೆ.

ಜ. 13ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಆರ್ಯವೀರ್ ರಾಕೇಶ್ ಝುಂಜುನ್ವಾಲಾ, ಹಸೀನಾ ಥೆಮಲಿ, ಸಮೀರ್ ಪೋಪಟ್ ಮೆಂಗಲ್, ಇರಾ ಖಾನ್ ಮತ್ತು ಶಾಂತಾ ವಲ್ಲುರಿ ಗಾಂಧಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.