ಚಿಕ್ಕಬಳ್ಳಾಪುರ: ಇರಾನ್ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಗೆ ಗೌರಿಬಿದನೂರು ತಾಲ್ಲೂಕಿನ ಅಲೀಪುರದ ಶಿಯಾ ಮುಸ್ಲಿಮರು ಕಣ್ಣೀರು ಹಾಕಿದರು. ಪಟ್ಟಣದಲ್ಲಿ ಅಘೋಷಿತ ಬಂದ್ ಸ್ಥಿತಿ ಇತ್ತು.

ಖಮೇನಿ ಅವರ ಹತ್ಯೆ ಸುದ್ದಿ ತಿಳಿದು ಭಾನುವಾರ ಬೆಳಿಗ್ಗೆ ಎಲ್ಲರೂ ಸ್ವಯಂ ಪ್ರೇರಿತವಾಗಿ ಅಂಗಡಿಗಳು ಬಾಗಿಲು ಮುಚ್ಚಿದರು. ಅಂಜುಮನ್ ಎ ಜಾಫರಿಯಾ ಸಮಿತಿ ಪ್ರತಿಭಟನೆಗೆ ಕರೆ ನೀಡಿತ್ತು.

ಜನರು ಕಪ್ಪು ಬಟ್ಟೆ ಧರಿಸಿ, ಕಪ್ಪು ಬಾವುಟ ಹಿಡಿದು ಮಸೀದಿ ಬಳಿ ದೊಡ್ಡ ಸಂಖ್ಯೆಯಲ್ಲಿ ಸೇರಿದರು. ಖಮೇನಿ ಅವರ ಭಾವಚಿತ್ರ ಹಿಡಿದು ಪ್ರಾರ್ಥನೆ ಸಲ್ಲಿಸಿದರು. ಕುರ್ಆನ್ ಪಠಿಸಿದರು. ಈ ವೇಳೆ ಬಹಳಷ್ಟು ಜನರು ಅವರನ್ನು ನೆನೆದು ಕಣ್ಣೀರು ಹಾಕಿದರು. ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಧ್ಯಾಹ್ನ ಮಸೀದಿಯಿಂದ ಸೈಯದ್ ಮುಸ್ತಫಾ ಹುಸೇನ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಹಾಡಿನ ಮೂಲಕ ಅವರ ಸಾಧನೆ ಸ್ಮರಿಸಲಾಯಿತು.

ಭಾನುವಾರ ಸೇರಿ ಮೂರು ದಿನ ಅಲೀಪುರ ಪಟ್ಟಣದಲ್ಲಿ ಶೋಕಾಚರಣೆ ಇರಲಿದೆ. ಇಡೀ ದಿನ ಪಟ್ಟಣದಲ್ಲಿ ವ್ಯಾಪಕವಾದ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಅಲೀಪುರದಲ್ಲಿ 25 ಸಾವಿರ ಮತ್ತು ಪಕ್ಕದ ಪೋತೇನಹಳ್ಳಿಯಲ್ಲಿ ಒಂದು ಸಾವಿರ ಶಿಯಾ ಮುಸ್ಲಿಮರು ವಾಸವಾಗಿದ್ದಾರೆ.

ಹತ್ಯೆಯಲ್ಲ ಬಲಿದಾನ

‘ಅಯಾತೊಲ್ಲಾ ಅಲಿ ಖಮೇನಿ ಅವರದ್ದು ಹತ್ಯೆಯಲ್ಲ, ಬಲಿದಾನ. ಅವರು ಸತ್ಯ, ನ್ಯಾಯದ ಪರವಾಗಿ ಇದ್ದರು. ಮಾನವತೆ ಪರವಾಗಿ ಇದ್ದರು. ಅಮೆರಿಕ ಮತ್ತು ಇಸ್ರೇಲ್ ಜಗತ್ತಿನ ಮೇಲೆ ದಬ್ಬಾಳಿಕೆ ನಡೆಸುತ್ತಿವೆ. ಅವರು ನಾಶವಾಗಲಿದ್ದಾರೆ’ ಎಂದು ಅಂಜುಮನ್ ಎ ಜಾಫರಿಯಾ ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಬೆಳ್ಳಿಕುಂಟೆ ಅಲೀಪುರವಾಯಿತು: ಅಲೀಪುರದ ಮೂಲ ಹೆಸರು ಬೆಳ್ಳಿಕುಂಟೆ. ಈ ಹಿಂದೆ ಬಿಜಾಪುರ ಆದಿಲ್ಶಾಹಿಗಳ ಅವಧಿಯಲ್ಲಿ ಅಲ್ಲಿನ ಜನರು ಇಲ್ಲಿಗೆ ವಲಸೆ ಬಂದರು. ಮುಸ್ಲಿಮರ ಸಂಖ್ಯೆ ಹೆಚ್ಚಿದಂತೆ ಬೆಳ್ಳುಕುಂಟೆ ಅಲೀಪುರವಾಗಿ ರೂಪಾಂತರವಾಯಿತು.

ಗ್ರಾಮದ ಬಹುತೇಕ ಮಂದಿ ಇರಾನ್, ಅರಬ್ ದೇಶಗಳು ಸೇರಿದಂತೆ ಜಗತ್ತಿನ ವಿವಿಧ ದೇಶಗಳ ಜೊತೆ ವ್ಯಾಪಾರ, ವಹಿವಾಟು, ಶಿಕ್ಷಣದ ಕಾರಣಕ್ಕೆ ಸಂಪರ್ಕ ಹೊಂದಿದ್ದಾರೆ. ಗ್ರಾಮದಲ್ಲಿ ಅಂಜುಮನ್ ಜಾಫರಿಯಾ ಸಮಿತಿ ಪ್ರತ್ಯೇಕವಾದ ಕೇಬಲ್ ಚಾನಲ್ ಹೊಂದಿದೆ. ‘ಅಲಿ ಟಿವಿ’ ಹೆಸರಿನ ಈ ಚಾನಲ್ನಲ್ಲಿ ಮಸೀದಿಯ ಪ್ರಾರ್ಥನೆಗಳು, ಕುರ್ಆನ್ ಪಠಣ ಧಾರ್ಮಿಕ ವಿಚಾರಗಳು ಪ್ರಸಾರವಾಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.