ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಶಲ ವಿನಿಮಯಕ್ಕೆ ವೇದಿಕೆ

Last Updated 25 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ನಾನು ನಿರ್ದೇಶಿಸಿದ ಅನಂತ v/s ನಸ್ರುತ್‌ ಸಿನಿಮಾ ಬೆಂಗಳೂರಿನ 11ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದ್ದು ಅತ್ಯಂತ ಸಂತಸ ತಂದಿದೆ. ಈ ಮೂಲಕ ನನ್ನ ಸಿನಿಮಾ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶನ ಕಂಡಂತಾಗಿದೆ. ಹೊರ ರಾಜ್ಯ ಮತ್ತು ಹೊರ ದೇಶಿಕರಿಗೆ ನನ್ನ ಸಿನಿಮಾ ನಿರ್ದೇಶನದ ಕಲಾತ್ಮಕತೆ ಪರಿಚಯವಾದಂತಾಗಿದೆ. ಇದು ಹೆಮ್ಮೆಯ ವಿಷಯ.

ಚೇತನ್‌ ಮುಂಡಾಡಿ ಅವರು ನಿರ್ದೇಶಿಸಿದ್ದ ತುಳು ಚಿತ್ರ ‘ಮುದಿಪು’ ಕಳೆದ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತ್ತು. ನಾನು ಆ ಸಿನಿಮಾದ ಕ್ರಿಯೇಟಿವ್‌ ಹೆಡ್‌ ಆಗಿ ಕೆಲಸ ಮಾಡಿದ್ದೆ. ಈ ವರ್ಷವೂ ಕಳೆದ ವರ್ಷದಂತೆಯೇ ವ್ಯವಸ್ಥಿತವಾಗಿ ಚಿತ್ರೋತ್ಸವ ಆಯೋಜಿಸಲಾಗಿದೆ.

ಇಂಥ ಚಿತ್ರೋತ್ಸವಗಳು ನನ್ನಂಥ ಯುವ ನಿರ್ದೇಶಕರು, ಕಲಾವಿದರಿಗೆ ಉತ್ತಮ ವೇದಿಕೆ ಕೊಡುತ್ತವೆ. ಬೇರೆ ರಾಜ್ಯ, ಅನ್ಯ ದೇಶಗಳ ಚಲನಚಿತ್ರಗಳನ್ನು ವೀಕ್ಷಿಸಲು ಅವಕಾಶ ಸಿಗುತ್ತದೆ. ಈ ಮೂಲಕ ಆ ಸಿನಿಮಾಗಳಲ್ಲಿನ ಕಲಾತ್ಮಕತೆ, ನಿರ್ದೇಶಕನ ಚಾಕಚಕ್ಯತೆ, ಕೌಶಲವನ್ನು ತಿಳಿದುಕೊಳ್ಳಲು ಉಪಯುಕ್ತವಾಗುತ್ತದೆ. ಇದೊಂದು ರೀತಿಯ ನಮ್ಮಂತವರಿಗೆ ಕಲಿಕಾ ಕೇಂದ್ರವೂ ಆಗಿದೆ. ಇಡೀ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುವ ಸಾಕಷ್ಟು ಸಿನಿಮಾಗಳನ್ನು ವೀಕ್ಷಿಸಿ, ನನ್ನ ಕೌಶಲವನ್ನು ಹೆಚ್ಚಿಸಿಕೊಳ್ಳಲು ಮಗ್ನನಾಗುತ್ತೇನೆ.

ಸುಧೀರ್‌ ಶಾನುಭೋಗ್‌, ಯುವ ನಿರ್ದೇಶಕ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT