ಬುಧವಾರ, ಜನವರಿ 27, 2021
22 °C

ಕೋಲ್ಕತ್ತ: 8 ರಿಂದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ‘26ನೇ ಕೋಲ್ಕತ್ತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 8 ರಿಂದ 15ರವರೆಗೆ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸೌಮಿತ್ರ ಚಟರ್ಜಿ ಅಭಿನಯದ ‘ಅಪುರ್‌ ಸಂಸಾರ್‌’ ಸಿನಿಮಾ ಪ್ರದರ್ಶಿಸಲಾಗುವುದು’ ಎಂದು ಪಶ್ಚಿಮ ಬಂಗಾಳದ ಸಚಿವ ಅರೂಪ್‌ ಬಿಸ್ವಾಸ್‌ ಅವರು ತಿಳಿಸಿದರು.

‘ಅಪುರ್‌ ಸಂಸಾರ್‌’ ಚಿತ್ರವನ್ನು ಸತ್ಯಜೀತ್‌ ರೇ ಅವರು ನಿರ್ದೇಶಿಸಿದ್ದಾರೆ. ಸೌಮಿತ್ರ ಚಟರ್ಜಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅರೂಪ್‌ ಬಿಸ್ವಾಸ್‌, ‘ಏಳು ದಿನದ ಚಲನಚಿತ್ರೋತ್ಸವದ ಮೂಲಕ ಸತ್ಯಜೀತ್‌ ರೇ ಮತ್ತು ಸೌಮಿತ್ರ ಚಟರ್ಜಿ ಅವರನ್ನು ಸ್ಮರಿಸಲಾಗುವುದು’ ಎಂದರು.

‘ಈ ಬಾರಿಯ ಚಲನಚಿತ್ರೋತ್ಸವದಲ್ಲಿ 131 ಸಿನಿಮಾಗಳು ಇರಲಿವೆ. 45 ದೇಶಗಳಿಂದ 1,170 ಸಿನಿಮಾಗಳು ಬಂದಿದ್ದು,  ಈ ಪೈಕಿ 131 ಸಿನಿಮಾ ಆರಿಸಿದ್ದೇವೆ’ ಎಂದು ಸಾಂಸ್ಕೃತಿಕ ವ್ಯವಹಾರಗಳ ರಾಜ್ಯ ಸಚಿವ ಇಂದ್ರನಿಲ್ ಸೇನ್ ತಿಳಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು