ಶುಕ್ರವಾರ, ಏಪ್ರಿಲ್ 16, 2021
31 °C

ಮಲಯಾಳಿ ಸುಂದರಿಯ ತೆಲುಗು ಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಆರ್‌ಎಕ್ಸ್‌100’ ಮತ್ತು 'ಹಿಪ್ಪಿ' ಚಿತ್ರದ ನಾಯಕ ಕಾರ್ತಿಕೇಯ ಈಗ ಅರುಣ್‌ ಜಂಧ್ಯಾಲ ಅವರ ಚೊಚ್ಚಲ ನಿರ್ದೇಶನದ ‘ಗುಣ 369’ ಚಿತ್ರದ ಮೂಲಕ ಮತ್ತೆ ಛಾಪು ಮೂಡಿಸಲು ಸಜ್ಜಾಗಿದ್ದಾರೆ.

 ಈ ಹಿಂದೆ ಅರುಣ್‌ ಅವರು ‘ಬೊಯಪತಿ ಶ್ರೀನು’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅವರ ನಿರ್ದೇಶನದ ‘ಗುಣ 369’ ಚಿತ್ರವು ಹಿಟ್‌ ಆಗುವ ಭಾರಿ ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಟೀಸರ್‌ ಇತ್ತೀಚಿಗೆ ಬಿಡುಗಡೆಯಾಗಿದ್ದು, ನಾಯಕಿಯಾಗಿ ಅನಘಾ ಎಲ್‌.ಕೆ ಮಾರುತೋರಾ ಅಭಿನಯಿಸಿದ್ದಾರೆ. 

ಸಿನಿಮಾದಲ್ಲಿ ಅನಘಾ ಇರುವ ಪೋಸ್ಟರ್‌ನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಇದರಲ್ಲಿ ಸಾಂಪ್ರದಾಯಿಕ ಹುಡುಗಿಯಾಗಿ ಅವರು ನಟಿಸಿದ್ದಾರೆ. ಟಾಲಿವುಡ್‌ನಲ್ಲಿ ಅನಘಾ ಅವರಿಗೆ ಇದು ಮೊದಲ ಚಿತ್ರ. ಈ ಬಗ್ಗೆ ಟ್ವೀಟ್‌ ಮಾಡಿರುವ ತಂಡ, ಅದರಲ್ಲಿ ನಟಿಯ ಹೆಸರನ್ನೂ ಬಹಿರಂಗಪಡಿಸಿದೆ. ‘ಮತ್ತೊಬ್ಬ ಮಲಯಾಳಂ ಸುಂದರಿ ಟಾಲಿವುಡ್‌ಗೆ ಬರುತ್ತಿದ್ದಾರೆ. ಅನಘಾ ಟಾಲಿವುಡ್‌ನಲ್ಲಿ ಕಾರ್ತಿಕೇಯ ಅವರ ಜೋಡಿಯಾಗಿ ನಟಿಸುತ್ತಿದ್ದಾರೆ. ಗುಣ 369ನಲ್ಲಿ ಗೀತಾ ಆಗಿ ನಟಿಸುತ್ತಿದ್ದಾರೆ’ ಎಂದು ಟ್ವೀಟ್‌ ಮಾಡಿದ್ದಾರೆ. 

2017ರಲ್ಲಿ ಚಿತ್ರರಂಗಕ್ಕೆ ಕಾಳಿಟ್ಟಿರುವ ಅನಘಾ ತಮಿಳು ಹಾಗೂ ಮಲಯಾಳಂನಲ್ಲಿ ಪರವಾ, ರಕ್ಷಾಧಿಕಾರಿ ಬೈಜು ಒಪ್ಪೊ, ರೋಜಾಪೂ, ಹಾಗೂ ನಟ್ಪೆ ತುಣೈ ಚಿತ್ರದಲ್ಲಿ ನಟಿಸಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು