‘ಬಿಗಿಲ್‌’ನಲ್ಲಿ ವಿಜಯ್ ಜೊತೆ ಶಾರುಕ್ ಹೆಜ್ಜೆ!

ಶನಿವಾರ, ಜೂಲೈ 20, 2019
27 °C

‘ಬಿಗಿಲ್‌’ನಲ್ಲಿ ವಿಜಯ್ ಜೊತೆ ಶಾರುಕ್ ಹೆಜ್ಜೆ!

Published:
Updated:
Prajavani

ತಮಿಳಿನ ಸೂಪರ್‌ಸ್ಟಾರ್‌ ವಿಜಯ್‌ ಮತ್ತು ನಯನತಾರಾ ಜೋಡಿಯಾಗಿ ನಟಿಸಿರುವ ‘ಬಿಗಿಲ್‌’ ಸಿನಿಮಾ ಈ ವರ್ಷದ ಆರಂಭದಿಂದಲೇ ಒಂದಿಲ್ಲೊಂದು ಕಾರಣಗಳಿಗೆ ಸುದ್ದಿ ಮಾಡುತ್ತಲೇ ಇದೆ. ಜೂನ್‌ನಲ್ಲಿ ಈ ಚಿತ್ರದ ಶೀರ್ಷಿಕೆಯನ್ನು ಜಾಹೀರು ಮಾಡಿದಾಗಲೂ ಒಳ್ಳೆಯ ರೆಸ್ಪಾನ್ಸ್ ವ್ಯಕ್ತವಾಗಿತ್ತು. 

ಇದೀಗ ಇನ್ನೊಮ್ಮೆ ‘ಬಿಗಿಲ್’ ಸುದ್ದಿಯಲ್ಲಿದೆ. ಇದು ಅಂತಿಂಥ ಸುದ್ದಿಯಲ್ಲ, ಬಾಲಿವುಡ್‌ ಬಾದ್‌ಷಾನನ್ನು ತಮಿಳಿಗೆ ಕರೆತರುವ ಭರ್ಜರಿ ಸುದ್ದಿಯನ್ನು ಚಿತ್ರತಂಡ ಹೊರಹಾಕಿದೆ.

ಹೌದು, ಶಾರುಕ್ ಖಾನ್‌ ‘ಬಿಗಿಲ್‌’ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇದನ್ನು ಶಾರುಕ್ ಆಪ್ತಮೂಲಗಳೇ ಖಚಿತಪಡಿಸಿದೆ. ‘ಬಿಗಿಲ್ ಚಿತ್ರತಂಡದವರು ಅವರನ್ನು ಸಂಪರ್ಕಿಸಿದ್ದರು. ಚಿತ್ರದಲ್ಲಿ ಕಾಣಿಸಿಕೊಳ್ಳಲು ಶಾರುಕ್ ಒಪ್ಪಿಕೊಂಡಿದ್ದಾರೆ. ಚಿತ್ರದ ದೃಶ್ಯದಲ್ಲಿ ಒಂದು ಹಾಡಿಗೆ ನಾಯಕನಟ ವಿಜಯ್‌ ಜೊತೆಗೆ ಹೆಜ್ಜೆ ಹಾಕಲಿದ್ದಾರೆ’ ಎಂದು ಖಚಿತಪಡಿಸಿದ್ದಾರೆ.

ಅಂದಹಾಗೆ ಶಾರುಕ್ ತಮಿಳು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲ ಸಲ. ‘ಝೀರೊ’ ಸಿನಿಮಾ ಸೋಲಿನ ನಂತರ ಅವರು, ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿರಲಿಲ್ಲ. 

ಆಪ್ತರ ಸಿನಿಮಾಗಳಲ್ಲಿ ಶಾರುಕ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದೂ ಇದೇ ಮೊದಲೇನಲ್ಲ. ಮೂವತ್ತಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದಾರೆ. ಆದರೆ ಕೆಲವು ವರ್ಷಗಳ ಹಿಂದೆ ಅವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಾರೆ ಎಂಬ ನಿರ್ಧಾರಕ್ಕೆ ಬಂದಿದ್ದರು. ಅದನ್ನು ಮಾಧ್ಯಮದವರ
ಮುಂದೆ ಹೇಳಿಯೂ ಇದ್ದರು. ಆದರೆ ‘ಬಿಗಿಲ್‌’ ವಿಷಯದಲ್ಲಿ ಬಾದ್‌ಷಾ ತಮ್ಮ ಮನಸ್ಸನ್ನು ಬದಲಾಯಿಸಿದ್ದಾರೆ. 

‘ಬಿಗಿಲ್‌’ ಸಿನಿಮಾವನ್ನು ಅತ್ಲೀ ಕುಮಾರ್ ನಿರ್ದೇಶಿಸುತ್ತಿದ್ದು, ಎ.ಆರ್. ರೆಹಮಾನ್‌ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ನಯನತಾರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಜಾಕಿ ಶ್ರಾಫ್‌ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಸ್ಪೋರ್ಟ್ಸ್‌ ಆ್ಯಕ್ಷನ್‌ ಕಥೆಯ ಸಿನಿಮಾ ಆಗಿದ್ದು ಅಕ್ಟೋಬರ್ ಕೊನೆಯ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. 

Post Comments (+)