ಮಂಗಳವಾರ, ಆಗಸ್ಟ್ 20, 2019
27 °C

ನಂದಿನಿ ರೆಡ್ಡಿ ಮೂರನೇ ಚಿತ್ರದಲ್ಲಿ ಸಮಂತಾ

Published:
Updated:
Prajavani

ನಿರ್ದೇಶಕಿ ನಂದಿನಿ ರೆಡ್ಡಿಯವರ ಹೊಸ ಚಿತ್ರಕ್ಕೆ ನಟಿ ಸಮಂತಾ ಅಕ್ಕಿನೇನಿ ಸಹಿ ಹಾಕಿದ್ದಾರೆ. ಇದು ನಂದಿನಿ ರೆಡ್ಡಿ ನಿರ್ದೇಶನದಲ್ಲಿ ಸಮಂತಾ ನಟಿಸುತ್ತಿರುವ ಮೂರನೇ ಚಿತ್ರವಾಗಿದೆ. ಈ ಮೊದಲು ಈ ಜೋಡಿ ‘ಜಬರ್‌ದಸ್ತ್‌’ ಹಾಗೂ ‘ಓ ಬೇಬಿ’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

ಸದ್ಯ ‘ಓ ಬೇಬಿ’ ಬಾಕ್ಸಾಫೀಸಿನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಈ ಚಿತ್ರದ ಉತ್ತಮ ಅಭಿನಯಕ್ಕಾಗಿ ಸಮಂತಾ ಅವರಿಗೆ ಪ್ರಶಂಸೆಯೂ ವ್ಯಕ್ತವಾಗಿದೆ. ಈ ಜೋಡಿಯ ಹೊಸ ಚಿತ್ರದ ಕೆಲಸ ಈಗಾಗಲೇ ಆರಂಭಗೊಂಡಿದ್ದು, ಅಧಿಕೃತ ಹೇಳಿಕೆ ಹೊರಬೀಳಬೇಕಷ್ಟೇ.  ಈ ಚಿತ್ರದ ಕತೆಯನ್ನು ‘ಓ ಬೇಬಿ’ ಸೆಟ್‌ನಲ್ಲೇ ನಂದಿನಿ, ಸಮಂತಾಗೆ ವಿವರಿಸಿದ್ದರು. ಚಿತ್ರಕತೆಯನ್ನು ಸಿದ್ಧ ಮಾಡಿಟ್ಟುಕೊಳ್ಳುವಂತೆ ಆಗಲೇ ಸಮಂತಾ ಸೂಚಿಸಿದ್ದರಂತೆ. 

ನಂದಿನಿ ಅವರು ಕಳೆದ ವರ್ಷ ‘ಗ್ಯಾಂಗ್‌ಸ್ಟಾರ್‍ಸ್‌’ ಎಂಬ ಅಮೆಜಾನ್‌ ಒರಿಜಿನಲ್‌ ಸರಣಿಯನ್ನು ನಿರ್ದೇಶಿಸಿದ್ದರು. ಇದರಲ್ಲಿ ಜಗಪತಿ ಬಾಬು, ನವದೀಪ್‌, ಶ್ವೇತಾ ಬಸು ಪ್ರಸಾದ್‌ ಮೊದಲಾದವರು ನಟಿಸಿದ್ದರು. ಆದರೆ ಇದು ಪ್ರೇಕ್ಷಕರ ಮನಮುಟ್ಟುವಲ್ಲಿ ವಿಫಲವಾಗಿತ್ತು. ಮೊದಲ ತೆಲುಗು ವೆಬ್‌ ಸರಣಿ ಇದಾಗಿತ್ತು. 

 

Post Comments (+)