ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು 7 ಚಿತ್ರಗಳು ತೆರೆಗೆ: ಪುನೀತ್ ನಟನೆಯ ‘ಜಾಕಿ’ ಮರು ಬಿಡುಗಡೆ

Published 15 ಮಾರ್ಚ್ 2024, 0:41 IST
Last Updated 15 ಮಾರ್ಚ್ 2024, 0:41 IST
ಅಕ್ಷರ ಗಾತ್ರ

ಪುನೀತ್‌ ರಾಜ್‌ಕುಮಾರ್‌–ಭಾವನಾ ಜೋಡಿಯಾಗಿ ನಟಿಸಿರುವ ‘ಜಾಕಿ’ ಚಿತ್ರ ಮರುಬಿಡುಗಡೆಯಾಗುತ್ತಿದೆ. ಅದರ ಹೊರತಾಗಿ ಆರು ಸಿನಿಮಾಗಳು ಈ ವಾರ ತೆರೆ ಕಾಣಲಿವೆ.

ಫೋಟೋ:

ಕೋವಿಡ್‌ನ ಆರಂಭ ಘಟ್ಟದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೇ ಕೇಂದ್ರ ಸರ್ಕಾರ ಘೋಷಿಸಿದ ಲಾಕ್‌ಡೌನ್‌ನಿಂದ ವಲಸೆ ಕಾರ್ಮಿಕರು ಅನುಭವಿಸಿದ ಸಂಕಷ್ಟಗಳನ್ನು ಬಿಚ್ಚಿಡುವ ‘ಫೋಟೋ’ ಸಿನಿಮಾ ಇಂದು(ಮಾ. 15) ತೆರೆಗೆ ಬರುತ್ತಿದೆ. ಉತ್ಸವ್ ಗೋನವಾರ ನಿರ್ದೇಶನದ ಚಿತ್ರವನ್ನು ‘ನಿರ್ದಿಗಂತ’ದ ಮೂಲಕ ನಟ ಪ್ರಕಾಶ್ ರಾಜ್ ಅರ್ಪಿಸುತ್ತಿದ್ದಾರೆ. ‘ಮಸಾರಿ ಟಾಕೀಸ್’ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣಗೊಂಡಿದೆ. ಕಳೆದ ವರ್ಷ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದಿದ್ದ ಈ ಚಿತ್ರ ಸಾಕಷ್ಟು ಚಿತ್ರೋತ್ಸವಗಳಲ್ಲಿ ಪ್ರಶಂಸೆಗೆ ಪಾತ್ರವಾಗಿತ್ತು. ಮಹಾದೇವ ಹಡಪದ್, ಜಹಾಂಗೀರ್, ಸಂಧ್ಯಾ ಅರಕೆರೆ ಮತ್ತು ವೀರೇಶ್ ಗೊನ್ವಾರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ದಿನೇಶ್ ದಿವಾಕರನ್ ಛಾಯಾಚಿತ್ರಗ್ರಹಣ ಶಿವರಾಜ್ ಮೆಹೂ ಸಂಕಲನವಿದೆ. 

ಚೌ ಚೌ ಬಾತ್:

ಕೇಂಜ ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಚೌ ಚೌ ಬಾತ್’ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ. ಹೈಪರ್ ಲಿಂಕ್ ರೊಮ್ಯಾಂಟಿಕ್ ಕಾಮಿಡಿ ಜಾನರ್‌ನ ಈ ಚಿತ್ರವನ್ನು ಹಾರಿಜಾನ್ ಮೂವೀಸ್ ನಿರ್ಮಾಣ ಮಾಡಿದೆ. ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನ, ರುದ್ರಮೂರ್ತಿ ಬೆಳಗೆರೆ ಛಾಯಾಚಿತ್ರಗ್ರಹಣವಿದೆ. ಸಾಗರ್ ಗೌಡ, ಸಂಕಲ್ಪ್ ಶರ್ಮಾ, ಸುಶ್ಮಿತಾ ಭಟ್, ಅರುಣಾ ಬಾಲರಾಜ್ ಮುಂತಾದವರು ನಟಿಸಿದ್ದಾರೆ.

ಮೆಹಬೂಬಾ

ಬಿಗ್‌ಬಾಸ್‌ ಖ್ಯಾತಿಯ ಶಶಿ ನಾಯಕನಾಗಿ ನಟಿಸಿರುವ ‘ಮೆಹಬೂಬಾ’ ಚಿತ್ರ ಕೂಡ ಈ ವಾರ ತೆರೆಗೆ ಬರುತ್ತಿದೆ. ಅನೂಪ್ ಆಂಟೋನಿ ಚಿತ್ರದ ನಿರ್ದೇಶಕರು. ಸರ್ವಧರ್ಮ ಸಾಮರಸ್ಯ ಸಾರುವ ಸಿನಿಮಾದಲ್ಲಿ ಶಶಿಗೆ ನಾಯಕಿಯಾಗಿ ಪಾವನ ಕಾಣಿಸಿಕೊಂಡಿದ್ದಾರೆ. ದಕ್ಷ್ ಎಂಟರ್‌ಟೈನ್‌ಮೆಂಟ್‌ ಸಹಯೋಗದಲ್ಲಿ ಬಾಲಾಜಿ ಮೋಷನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ಮ್ಯಾಥ್ಯೂಸ್‌ ಮನು ಸಂಗೀತ, ಕಿರಣ್ ಹಂಪಾಪುರ ಛಾಯಾಚಿತ್ರಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ ಚಿತ್ರಕ್ಕಿದೆ. 

ಸೋಮು ಸೌಂಡ್‌ ಇಂಜಿನಿಯರ್‌:

‘ಸಲಗ’ ಸಿನಿಮಾದಲ್ಲಿ ‘ಕೆಂಡ’ ಪಾತ್ರ ಮಾಡಿದ್ದ ಶ್ರೇಷ್ಠ ನಾಯಕನಾಗಿ ನಟಿಸಿರುವ ‘ಸೋಮು ಸೌಂಡ್‌ ಇಂಜಿನಿಯರ್‌’ ಕೂಡ ಈ ವಾರ ತೆರೆಗೆ ಬರುತ್ತಿದೆ. ನಿರ್ದೇಶಕ ಸೂರಿ ಗರಡಿಯಲ್ಲಿ ಪಳಗಿರುವ ಅಭಿ ಈ ಚಿತ್ರದ ನಿರ್ದೇಶಕರು. ಕ್ರಿಸ್ಟೋಫರ್​ ಕಿಣಿ ಚಿತ್ರದ ನಿರ್ಮಾಪಕರು. ನಿವಿಷ್ಕಾ ಪಾಟೀಲ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.  ಜಹಾಂಗೀರ್, ಅಪೂರ್ವ, ಯಶ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚರಣ್‌ ರಾಜ್‌ ಸಂಗೀತ, ಶಿವು ಸೇನಾ ಛಾಯಾಗ್ರಹಣ, ಮಾಸ್ತಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ.

ಜಾಕಿ:

ಪುನೀತ್‌ ರಾಜ್‌ಕುಮಾರ್‌ ಅಭಿನಯದ ಸೂಪರ್‌ಹಿಟ್‌ ಚಿತ್ರ ‘ಜಾಕಿ’ ಮರುಬಿಡುಗಡೆಯಾಗುತ್ತಿದೆ. ದುನಿಯಾ ಸೂರಿ ನಿರ್ದೇಶನದ ಚಿತ್ರದಲ್ಲಿ ಭಾವನಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT