ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ಮರಿಗಳಿಗೆ ಜನ್ಮ ನೀಡಿದ '‌777 ಚಾರ್ಲಿ’: ಸಂತಸ ಹಂಚಿಕೊಂಡ ರಕ್ಷಿತ್ ಶೆಟ್ಟಿ

Published 16 ಮೇ 2024, 5:09 IST
Last Updated 16 ಮೇ 2024, 5:09 IST
ಅಕ್ಷರ ಗಾತ್ರ

ಮೈಸೂರು: ಚಂದನವನದಲ್ಲಿ ಸೂಪರ್‌ ಹಿಟ್‌ ಆಗಿದ್ದ ‘777 ಚಾರ್ಲಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಚಾರ್ಲಿ ನಾಯಿ ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ.

ಚಾರ್ಲಿ ಮರಿ ಹಾಕಿರುವ ವಿಷಯ ತಿಳಿದು ಮೈಸೂರಿಗೆ ತೆರಳಿದ್ದ ರಕ್ಷಿತ್ ಶೆಟ್ಟಿ , ಇನ್‌ಸ್ಟಾಗ್ರಾಂ ಲೈವ್ ಬರುವ ಮೂಲಕ ಚಾರ್ಲಿಯ ತಾಯ್ತನದ ಗಳಿಗೆಯನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ.

‘777 ಚಾರ್ಲಿ’ ಚಿತ್ರಕ್ಕಾಗಿ ತರಬೇತಿ ನೀಡಿದ್ದ ಪ್ರಮೋದ್ ಅವರ ಮನೆಯಲ್ಲಿಯೇ ಚಾರ್ಲಿ ವಾಸವಾಗಿದ್ದು, ಅಲ್ಲಿಯೇ ಮರಿಗಳಿಗೆ ಜನ್ಮ ನೀಡಿದೆ. ಒಂದು ಹೆಣ್ಣು ಮರಿ ಸೇರಿ ಒಟ್ಟು ಆರು ಮರಿಗಳಿಗೆ ಜನ್ಮ ನೀಡಿದೆ.

ಚಾರ್ಲಿ ತಾಯಿಯಾಗಿರುವ ವಿಷಯ ಕೇಳಿ ಸಂತಸ ವ್ಯಕ್ತಪಡಿಸಿರುವ ರಕ್ಷಿತ್ ಶೆಟ್ಟಿ, ‘ಚಾರ್ಲಿ ತಾಯಿಯಾಗುತ್ತಾಳೋ ಇಲ್ಲವೊ ಎಂಬ ಅನುಮಾನವಿತ್ತು. ಅದು ಈಗ ದೂರವಾಗಿದೆ’ ಎಂದಿದ್ದಾರೆ.

‘ಚಾರ್ಲಿ ಮರಿ ಹಾಕಿರುವ ವಿಷಯ ತಿಳಿದು ಮೈಸೂರಿನಲ್ಲಿರುವ ಪ್ರಮೋದ್‌ ಅವರ ಮನೆಗೆ ಬಂದೆ. ಚಾರ್ಲಿ ಸಿನಿಮಾ ಮುಗಿದು ಎರಡು ವರ್ಷ ಕಳೆಯಿತು. ಚಾರ್ಲಿ ತಾಯಿ ಆಗುವುದನ್ನು ನೋಡುವುದಕ್ಕೆ ಇಡೀ ಚಿತ್ರತಂಡವೇ ಕಾಯುತಿತ್ತು. ಪ್ರಮೋದ್ ಅವರಿಗೆ ಕರೆ ಮಾಡಿ ಚಾರ್ಲಿ ತಾಯಿ ಆಗುತ್ತಾಳಾ ಎಂದು ಕೇಳುತ್ತಿದ್ದೆ. ವಯಸ್ಸಾದ್ದರಿಂದ ತಾಯಿಯಾಗುವ ಸಂಭವ ಕಡಿಮೆ ಎಂದು ಅವರು ಹೇಳುತ್ತಿದ್ದರು. ಕೊನೆಗೂ ತಾಯ್ತನದ ಸಂಭ್ರಮವನ್ನು ಚಾರ್ಲಿ ಅನುಭವಿಸುತ್ತಿದ್ದಾಳೆ. ಮೇ 9ರಂದು 6 ಮರಿಗಳಿಗೆ ಜನ್ಮ ನೀಡಿದ್ದಾಳೆ’ ಎಂದು ಹೇಳಿದ್ದಾರೆ.

‘ನಾನು ಎಲ್ಲಿಗೆ ಹೋದರೂ ಜನ ಚಾರ್ಲಿ ಸಿನಿಮಾದ ಬಗ್ಗೆ ಮಾತನಾಡುತ್ತಾರೆ. ಅಷ್ಟರ ಮಟ್ಟಿಗೆ ಆ ಚಿತ್ರ ಜನರನ್ನು ತಲುಪಿದೆ. ಮಕ್ಕಳಿಗಂತೂ ಇಷ್ಟವಾದ ಸಿನಿಮಾವಾಗಿದೆ’ ಎಂದು ಚಿತ್ರದ ಬಗ್ಗೆ ಮಾತನಾಡಿದ್ದಾರೆ.

ಪರಂವಃ ಸ್ಟುಡಿಯೋಸ್‌ ನಿರ್ಮಾಣದ ಈ ಚಿತ್ರವನ್ನು ಕಿರಣ್ ರಾಜ್ ನಿರ್ದೇಶನ ಮಾಡಿದ್ದರು. 2022ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಭಾರತದಲ್ಲಿ ಮಾತ್ರವಲ್ಲದೇ ಜಪಾನ್, ಥೈಲ್ಯಾಂಡ್‌ನಲ್ಲಿಯೂ ಬಿಡುಗಡೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT