ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'83' ಟೀಸರ್‌ ಬಿಡುಗಡೆ: ವಿಶ್ವಕಪ್‌ ಜಯದ ಕ್ಯಾಚ್‌ ಹಿಡಿದ ರಣವೀರ್‌ ಸಿಂಗ್‌

Last Updated 26 ನವೆಂಬರ್ 2021, 6:34 IST
ಅಕ್ಷರ ಗಾತ್ರ

ನವದೆಹಲಿ: ಕಬೀರ್‌ ಖಾನ್‌ ಅವರ ಬಹುನಿರೀಕ್ಷಿತ ಚಿತ್ರ '83' ಟೀಸರ್‌ ಶುಕ್ರವಾರ ಬೆಳಗ್ಗೆ ಬಿಡುಗಡೆಯಾಗಿದೆ. ನವೆಂಬರ್‌ 30ಕ್ಕೆ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಲಿದೆ. ಟೀಸರ್‌ನಲ್ಲಿ ಭಾರತದ ಕ್ರಿಕೆಟ್‌ ಇತಿಹಾಸದ ವೈಭವಯುತ ದಿನದ ದೃಶ್ಯಗಳು ಇವೆ.

ಜೂನ್‌ 25, 1983, ಲಂಡನ್‌ನ ಲಾರ್ಡ್ಸ್‌ ಕ್ರಿಕೆಟ್‌ ಸ್ಟೇಡಿಯಂನ ದೃಶ್ಯವಿರುವ ಟೀಸರ್‌ನ ಕೊನೆಯಲ್ಲಿ ಕಪಿಲ್‌ ದೇವ್‌ ಪಾತ್ರವನ್ನು ನಿಭಾಯಿಸುತ್ತಿರುವ ರಣವೀರ್‌ ಸಿಂಗ್‌ ಕ್ಯಾಚ್‌ ಹಿಡಿಯುತ್ತಿರುವುದು ಇದೆ. ಕಪಿಲ್‌ ದೇವ್‌ ಹಿಡಿತ ಕ್ಯಾಚ್‌ನಿಂದ ವೆಸ್ಟ್‌ ಇಂಡೀಸ್‌ನ ವಿವಿಯನ್‌ ರಿಚರ್ಡ್ಸ್‌ ಅವರು ಔಟಾದರು. ಇದರಿಂದ ಭಾರತ 1983ರ ಕ್ರಿಕೆಟ್‌ ವಿಶ್ವಕಪ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವ ಹಾದಿ ಸುಗಮವಾಗಿತ್ತು.

'83' ಸಿನಿಮಾ ಕಪಿಲ್‌ ದೇವ್‌ ನೇತೃತ್ವದ ಭಾರತ ಕ್ರಿಕೆಟ್‌ ತಂಡವು 1983ರ ವಿಶ್ವಕಪ್‌ ಗೆದ್ದ ಐತಿಹಾಸಿಕ ದಿನದ ಕತೆಯನ್ನು ಒಳಗೊಂಡಿದೆ. ರಣವೀರ್‌ ಸಿಂಗ್‌ ಅವರು ಕಪಿಲ್‌ ದೇವ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

'ಭಾರತದ ಅದ್ಭುತ ಜಯದ ಹಿಂದಿನ ಕತೆ. ಅದ್ಭುತ ಕತೆ. ಅದ್ಭುತ ಜಯ. '83' ಡಿಸೆಂಬರ್ 24, 2021ರಂದು ಬಿಡುಗಡೆಯಾಗುತ್ತಿದೆ' ಎಂದು ರಣವೀರ್‌ ಸಿಂಗ್‌ ಪೋಸ್ಟ್‌ ಮಾಡಿದ್ದಾರೆ. ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ತೆರೆ ಕಾಣಲಿದೆ. ದೀಪಿಕಾ ಪಡುಕೋಣೆ ಅವರು ಕಪಿಲ್‌ ದೇವ್‌ ಅವರ ಪತ್ನಿ ರೋಮಿ ದೇವ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪಂಕಜ್‌ ತ್ರಿಪಾಠಿ ಅವರು ಟೀಂ ಇಂಡಿಯಾ ಮ್ಯಾನೇಜರ್‌ ಪಿಆರ್‌ ಮಾನ್‌ ಸಿಂಗ್‌ ಪಾತ್ರ ನಿಭಾಯಿಸಿದ್ದಾರೆ. ಏಮಿ ವಿರ್ಕ್‌ ಅವರು ಬಲ್ವಿಂದರ್‌ ಸಿಂಗ್‌ ಸಂಧು, ಸಾಹಿಲ್‌ ಖಟ್ಟರ್‌ ಅವರು ಸೈಯದ್‌ ಕಿರ್ಮಾನಿ ಮತ್ತು ತಾಹಿರ್‌ ಭಾಸಿನ್‌ ಅವರು ಸುನೀಲ್‌ ಗವಾಸ್ಕರ್‌ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT