ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಮಾರ್ಚ್ 17ರಂದು ಆಕಾಶ್ ಸಿನಿಮಾ ಮರು ಬಿಡುಗಡೆಯಾಗುತ್ತಿದೆ. ಈ ಸಂದರ್ಭ ಚಿತ್ರೀಕರಣದ ವೇಳೆ ಕಳೆದ ಕ್ಷಣಗಳ ಬಗ್ಗೆ ಸಹ ನಟರಾದ ಕಿಶೋರ್, ಆಶಿತಾ ಅವರು ಮೆಲುಕು ಹಾಕಿದ್ದಾರೆ.

'ಆಕಾಶ್’ ಚಿತ್ರ ಕುರಿತು ಮಾತನಾಡಿರುವ ನಟ ಕಿಶೋರ್ ಅವರು, ‘ಈ ಚಿತ್ರಕ್ಕೆ 21 ವರ್ಷ ಆಗಿದೆ ಅಂತ ಈಗಲೂ ನಂಬಲು ಆಗುತ್ತಿಲ್ಲ. ಈ ಚಿತ್ರವನ್ನು ನಿನ್ನೆ ಮೊನ್ನೆ ಚಿತ್ರೀಕರಿಸಿದಂತಿದೆ. ನಿರ್ದೇಶಕ ಮಹೇಶ್ ಬಾಬು ಅವರು ಮೊದಲು ಕರೆ ಮಾಡಿ ಚಿತ್ರದ ಬಗ್ಗೆ ತಿಳಿಸಿದಾಗ ತುಂಬಾ ಸಂತೋಷದಿಂದ ಒಪ್ಪಿಕೊಂಡೆ. ಈ ಚಿತ್ರದ ಮುಹೂರ್ತದ ವೇಳೆ ಅಣ್ಣವ್ರರಲ್ಲಿ ಇದ್ದ ಮುಗ್ದತೆ ನನ್ನನ್ನು ಈಗಲೂ ಕಾಡುತ್ತಿದೆ‘ ಎಂದು ಹೇಳಿಕೊಂಡಿದ್ದಾರೆ.

‘ಆಕಾಶ್’ ಚಿತ್ರದ ಕ್ಷಣಗಳನ್ನು ಮೆಲುಕು ಹಾಕಿದ ನಟಿ ಆಶಿತಾ ಅವರು, ‘ಪುನೀತ್ ರಾಜ್ಕುಮಾರ್ ಅವರ ಸಹೋದರಿ ಪಾತ್ರ ಮಾಡಲು ಅವಕಾಶ ಸಿಕ್ಕಾಗ ತುಂಬಾ ಸಂತಸ ಪಟ್ಟಿದೆ. ಈ ವರ್ಷ ‘ಆಕಾಶ್’ ಮರುಬಿಡುಗಡೆ ಆಗುತ್ತಿರುವುದಕ್ಕೆ ಖುಷಿ ಇದೆ‘ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.