ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾರಿಯರ್‌ ಲುಕ್‌ನಲ್ಲಿ ಯಂಗ್‌ ರೆಬೆಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಷ್‌

Last Updated 1 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

‘ಅಯೋಗ್ಯ’ ಸಿನಿಮಾ ಖ್ಯಾತಿಯ ನಿರ್ದೇಶಕ ಎಸ್‌. ಮಹೇಶ್‌ ಕುಮಾರ್‌ ಯಂಗ್‌ ರೆಬೆಲ್‌ ಸ್ಟಾರ್‌ ಅಭಿಷೇಕ್‌ ಅಂಬರೀಷ್‌ ಅವರಿಗೆ ಆ್ಯಕ್ಷನ್‌ ಕಟ್‌ ಹೇಳಲು ಸಿದ್ಧತೆ ಆರಂಭಿಸಿದ್ದಾರೆ. ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಸಿನಿಮಾದಲ್ಲಿ ಭರ್ಜರಿ ಲುಕ್‌ನಲ್ಲಿ ಅಭಿಷೇಕ್‌ ಕಾಣಿಸಿಕೊಂಡಿದ್ದಾರೆ.

ಇತ್ತೀಚೆಗೆ ಸಂಸದೆ, ನಟಿ ಸುಮಲತಾ ಅಂಬರೀಷ್‌ ಅವರ ಜನ್ಮದಿನದಂದು ಅಭಿಷೇಕ್‌ ಪಾತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆಯಾಯಿತು. ‘ವರ್ಷಾಂತ್ಯದಲ್ಲಿ ಹೊಸ ಸಿನಿಮಾದ ಶೂಟಿಂಗ್‌ ಆರಂಭವಾಗಲಿದ್ದು, 18 ಸೆಟ್‌ಗಳಲ್ಲಿ ಸಂಪೂರ್ಣ ಚಿತ್ರದ ಚಿತ್ರೀಕರಣ ನಡೆಯಲಿದೆ. 13 ಗೆಟ್‌ಅಪ್‌ಗಳಲ್ಲಿ ಅಭಿಷೇಕ್‌ ಇಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಂದು ಸಾವಿರ ವರ್ಷದ ಹಿಂದೆ ನಡೆಯುವ ಕಥೆ ಇದಾಗಿದ್ದು, ಕರ್ನಾಟಕದ ಇತಿಹಾಸದ ಘಟನೆಗಳನ್ನು ಎತ್ತಿಕೊಂಡು ಕಥೆ ಹೆಣೆದಿದ್ದೇನೆ’ ಎಂದಿದ್ದಾರೆಮಹೇಶ್‌. ಈ ಸಿನಿಮಾವನ್ನು ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ.

ಇದು ಅಭಿಷೇಕ್‌ ಅವರ ನಾಲ್ಕನೇ ಚಿತ್ರ. ‘ಅಮರ್‌’ ಚಿತ್ರದ ಮುಖಾಂತರ ಚಂದನವನಕ್ಕೆ ಕಾಲಿಟ್ಟಿದ್ದ ಅಭಿಷೇಕ್‌, ಸದ್ಯ ಸೂರಿ ನಿರ್ದೇಶನದ ‘ಬ್ಯಾಡ್‌ ಮ್ಯಾನರ್ಸ್‌’ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿ, ನಿರ್ದೇಶಕ ಕೃಷ್ಣ ಅವರ ಹೊಸ ಸಿನಿಮಾ ‘ಕಾಳಿ’ಯಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT