ಶನಿವಾರ, 10 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಷೇಕ್‌ ಅಂಬರೀಷ್‌ಗೆ ಸಿಕ್ಕಿದ ಭರ್ಜರಿ ಗಿಫ್ಟ್

Last Updated 4 ಅಕ್ಟೋಬರ್ 2020, 9:48 IST
ಅಕ್ಷರ ಗಾತ್ರ

‘ನನ್ನನ್ನು ಮುದ್ದಾಗಿ ಸಾಕಿ ಬೆಳೆಸಿರುವ ನನ್ನ ಅಮ್ಮನೇ ನನಗೆ ವಿಶೇಷ ಉಡುಗೊರೆಯಾಗಿದ್ದಾರೆ‌’ ಎಂದು 27ನೇ ವಸಂತಕ್ಕೆ ಕಾಲಿಟ್ಟಿರುವ ನಟ ಅಭಿಷೇಕ್‌ ಅಂಬರೀಷ್ ತನ್ನ ತಾಯಿ, ಸಂಸದೆ ಮತ್ತು ಚಿತ್ರನಟಿ ಸುಮಲತಾ ಅಂಬರೀಷ್ ಅವರನ್ನು ಹೊಗಳಿದ್ದಾರೆ.

ಶನಿವಾರ ತನ್ನ ಹುಟ್ಟುಹಬ್ಬವನ್ನು ತಾಯಿ ಮತ್ತು ಆಪ್ತರ ಸಮ್ಮುಖದಲ್ಲಿ ಸರಳವಾಗಿ ಆಚರಿಸಿಕೊಂಡ ಅಭಿಷೇಕ್‌, ‘ಅಪ್ಪನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವೆ. ತಂದೆಯವರು ಇಲ್ಲದೆ, ಇದು ನನಗೆ ಎರಡನೇ ಹುಟ್ಟುಹಬ್ಬ. ತಂದೆಯನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದರೂ, ಅವರು ನೀಡಿರುವ ಅಭಿಮಾನಿಗಳಿಂದಾಗಿ ಆ ಬೇಸರ ದೂರವಾಗಿದೆ’ ಎಂದು ಹೇಳಿದ್ದಾರೆ.

ಅಭಿಷೇಕ್‌ ನಟಿಸುತ್ತಿರುವ, ‘ದುನಿಯಾ’ ಸೂರಿ ನಿರ್ದೇಶನದ ‘ಬ್ಯಾಡ್‌ಮ್ಯಾನರ್ಸ್‌’ ಚಿತ್ರದ ವಿಶೇಷ ಪ್ರೋಮೊ ಟೀಸರ್‌ ಅನ್ನು ಅಭಿಯ ಹುಟ್ಟುಹಬ್ಬದ ಭರ್ಜರಿ ಉಡುಗೊರೆಯಾಗಿ ಚಿತ್ರತಂಡ ಬಿಡುಗಡೆ ಮಾಡಿದೆ. ಈ ಚಿತ್ರ ನೈಜ ಕಥೆಯನ್ನು ಆಧರಿಸಿದೆಯಂತೆ. ಚಿತ್ರದಲ್ಲಿ ಅಭಿಷೇಕ್‌ ಗ್ಯಾಂಗ್‌ಸ್ಟರ್‌ ಅಥವಾ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಾ ಎನ್ನುವ ಕುತೂಹಲವನ್ನು ಹುಟ್ಟುಹಾಕಿದೆ ಚಿತ್ರದ ಪ್ರೋಮೊ ಟೀಸರ್‌.ಈ ಚಿತ್ರಕ್ಕಾಗಿ ಸಾಕಷ್ಟು ದೇಹ ದಂಡಿಸಿರುವ ಅಭಿಷೇಕ್‌, ಒಂದಿಷ್ಟು ತೂಕವನ್ನು ಇಳಿಸಿ ಸ್ಲಿಮ್‌ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಚಿತ್ರೀಕರಣ ಇನ್ನು ಎರಡು ವಾರಗಳಲ್ಲಿ ಶುರುವಾಗಲಿದ್ದು, ಸದ್ಯದಲ್ಲೇ ಚಿತ್ರತಂಡ ಕೂಡಿಕೊಳ್ಳಲಿದ್ದಾರಂತೆ.

ಸ್ಯಾಂಡಲ್‌ವುಡ್‌ಗೆ ಅಂಟಿರುವ ಡ್ರಗ್ಸ್‌ ಕಳಂಕದ ಬಗ್ಗೆಯೂ ಪ್ರತಿಕ್ರಿಯಿಸಿರುವ ಅಭಿಷೇಕ್‌, ‘ತಪ್ಪು ಮಾಡಿದವರಿಗೆ ಖಂಡಿತಾ ಶಿಕ್ಷೆ ಆಗುತ್ತದೆ. ಆದರೆ, ಅಮಾಯಕರನ್ನು ಇದರಲ್ಲಿ ಬಲಿಪಶು ಮಾಡಬಾರದು. ವಿಚಾರಣೆ ಎದುರಿಸಿದವರನ್ನು ಅಪರಾಧಿಗಳಂತೆ ಕಾಣಬಾರದು. ಫಿಲ್ಮ್‌ ಇಂಡಸ್ಟ್ರಿ ಎಂದರೆ ಕೆಲವೇ ಕೆಲವು ಜನರದ್ದು ಮಾತ್ರವಲ್ಲ. ಯಾರೋ ಕೆಲವರು ಮಾಡುವ ತಪ್ಪಿನಿಂದ ಅಮಾಯಕರಿಗೆ ತೊಂದರೆಯಾಗಿದೆ. ‘ಅಂಬಿ ನಿಂಗ್‌ ವಯಸ್ಸಾಯ್ತು’ ಚಿತ್ರದಲ್ಲಿ ನಟಿಸಿದ್ದ ಅಭಿ ಎನ್ನುವವರನ್ನು ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದರಿಂದ ಅಭಿಗೆ ಸಾಕಷ್ಟು ತೊಂದರೆಯಾಗಿದೆ. ಆತನಿಗೆ ಒಂದು ಸಿನಿಮಾ ಕೈತಪ್ಪಿ ಹೋಗಿದೆ. ವೃತ್ತಿ ಬದುಕಿನಲ್ಲಿ ಈ ರೀತಿ ಅವಕಾಶಗಳನ್ನು ಕಳೆದುಕೊಳ್ಳುವುದು ಸಣ್ಣ ವಿಚಾರವಲ್ಲ. ಇಂತಹ ಬೆಳವಣಿಗೆಗಳು ಆಗಬಾರದು’ ಎಂದು ಕಳಕಳಿ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT