ಗುರುವಾರ , ಆಗಸ್ಟ್ 5, 2021
28 °C
ದೀವಾರ್ ಸಿನಿಮಾದ ಶರ್ಟ್‌ ರಹಸ್ಯ ಬಯಲು

ಟೈಲರ್ ಮಾಡಿದ್ದ ಎಡವಟ್ಟು ಅಮಿತಾಬ್‌ ಬಚ್ಚನ್‌ಗೆ ಪ್ರಸಿದ್ಧಿ ತಂದು ಕೊಟ್ಟಿತ್ತು

ಪ್ರಜಾವಾಣಿ ವೆಬ್‌ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಖ್ಯಾತ ನಟ ಅಮಿತಾಬ್ ಬಚ್ಚನ್ ಅವರು ಸಾಮಾಜಿಕ ಜಾಲತಾಣಗಳ ಮುಖಾಂತರ ನಿರಂತರವಾಗಿ ತಮ್ಮ ಅಭಿಮಾನಿಗಳ ಸಂಪರ್ಕದಲ್ಲಿರುತ್ತಾರೆ. ಈ ಮೂಲಕ ಅವರು ತಮ್ಮ ಹಳೆಯ ನೆನಪುಗಳನ್ನು ಆಗಾಗ ಮೆಲುಕು ಹಾಕುತ್ತಿರುತ್ತಾರೆ.

ಅಮಿತಾಬ್ ಅವರು ತಮ್ಮ ಸಿನಿ ಪಯಣದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ಧಾರೆ. ಅದಲ್ಲಿ 1975 ರಲ್ಲಿ ತೆರೆ ಕಂಡಿದ್ದ ಯಶ್‌ ಚೋಪ್ರಾ ನಿರ್ದೇಶನದ ‘ದೀವಾರ್’ ಸೂಪರ್‌ ಹಿಟ್ ಸಿನಿಮಾ ಎನಿಸಿಕೊಂಡಿದೆ. ಈ ಸಿನಿಮಾಕ್ಕೆ ಸಂಬಂಧಿಸಿದಂತೆ ಒಂದು ಗುಟ್ಟನ್ನು ಮಂಗಳವಾರ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಅವರು ತೆರೆದಿಟ್ಟಿದ್ದಾರೆ.

ದೀವಾರ್ ಸಿನಿಮಾದ ದೃಶ್ಯದಲ್ಲಿ ಅಮಿತಾಬ್ ಶರ್ಟ್‌ನ್ನು ನಡುವಿಗೆ ಎತ್ತಿ ಕಟ್ಟಿದ್ದರು. ಸಿನಿಮಾ ಬಿಡುಗಡೆಯಾದ ನಂತರ ಅಮಿತಾಬ್ ಅವರ ಈ ಸ್ಟೈಲ್‌ನ್ನು ಅನೇಕ ಜನ ಮೆಚ್ಚಿಕೊಂಡಿದ್ದರು. ಅಲ್ಲದೇ ಹಲವರು ಅದನ್ನು ಅನುಸರಿಸಲು ಪ್ರಾರಂಭಿಸಿದ್ದರು. ಆದರೆ, ಅಂದು ಶರ್ಟ್‌ನ್ನು ಎತ್ತಿ ಕಟ್ಟಿದ್ದು ಏಕೆ? ಎಂಬುದರ ಬಗ್ಗೆ ಅಮಿತಾಬ್ ರಹಸ್ಯವನ್ನು ಇಂದು ಬಿಚ್ಚಿಟ್ಟಿದ್ದಾರೆ.

‘ಈ ಚಿತ್ರದಲ್ಲಿ ಶರ್ಟ್‌ನ್ನು ಎತ್ತಿ ಕಟ್ಟಿದ್ದರ ಬಗ್ಗೆ ನಿಮಗೆ ಹೇಳಬೇಕು. ಅದರ ಹಿಂದೆ ದೊಡ್ಡ ಕಥೆ ಇದೆ. ಅಂದು ಚಿತ್ರೀಕರಣ ನಡೆಯುವಾಗ ಎಲ್ಲ ಸಿದ್ದವಾಗಿತ್ತು. ಕ್ಯಾಮೆರಾ ರೋಲಿಂಗ್‌ಗೆ ಸಿದ್ದವಾಗಿತ್ತು. ಡೈರೆಕ್ಟರ್ ಸಿದ್ದವಾಗಿದ್ದರು. ಆದರೆ ನನ್ನ ಈ ಶರ್ಟ್‌ ಮಾತ್ರ ಮೊಣಕಾಲ ಕೆಳಗೆ ಹೋಗುತಿತ್ತು. ಇದು ಟೈಲರ್ ಮಾಡಿದ್ದ ಎಡವಟ್ಟು. ಶೂಟಿಂಗ್ ಕ್ಯಾನ್ಸಲ್ ಮಾಡುವ ಹಾಗಿರಲಿಲ್ಲ. ನಾನು ತಕ್ಷಣವೇ ಶರ್ಟ್‌ನ್ನು ಸ್ಟೈಲಿಶ್ ಆಗಿ ಮೇಲೆ ನಡುವಿಗೆ ಎತ್ತಿ ಕಟ್ಟಿದೆ. ಆದರೆ, ದೀವಾರ್ ಬಿಡುಗಡೆ ನಂತರ ಇದೊಂದು ಐಕಾನಿಕ್ ದೃಶ್ಯವಾಗಿತ್ತು’ ಎಂದು ಬರೆದುಕೊಂಡಿದ್ದಾರೆ.

 

ಈ ಚಿತ್ರವನ್ನು ಐದು ಲಕ್ಷಕ್ಕೂ ಅಧಿಕ ಜನ ಇಷ್ಟಪಟ್ಟಿದ್ದಾರೆ. ಕಳೆದ ಭಾನುವಾರ ತಂದೆಯರ ದಿನಾಚರಣೆ ಪ್ರಯುಕ್ತ ಅಮಿತಾಬ್ ತಮ್ಮ ತಂದೆಯ ಜೊತೆಗಿರುವ ಫೋಟೊವನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: ಓಟಿಟಿಗೆ ನೋ ಎಂದ ವಿಜಯ್ ದೇವರಕೊಂಡ, ಥಿಯೇಟರ್‌ಗಳಿಗೆ ಬರಲಿದೆ ‘ಲಿಗರ್’

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು