17ರ ಹರೆಯದಲ್ಲಿ ಧನುಷ್ ಸಿನಿಜೀವನ

ಬುಧವಾರ, ಮೇ 22, 2019
27 °C
ಚಿತ್ರರಂಗದಲ್ಲಿ 17 ವರ್ಷ ಪೂರೈಸಿದ ನಟ ಧನುಷ್

17ರ ಹರೆಯದಲ್ಲಿ ಧನುಷ್ ಸಿನಿಜೀವನ

Published:
Updated:
Prajavani

ತಮಿಳು ನಟ ಧನುಷ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಮೇ 10ಕ್ಕೆ 17 ವರ್ಷಗಳಾದವು. ಇಷ್ಟು ವರ್ಷಗಳಿಂದ ತಮ್ಮನ್ನು ಬೆಳೆಸಿ, ಪ್ರೋತ್ಸಾಹಿಸಿದ ಚಿತ್ರರಂಗದ ಸ್ನೇಹಿತರು ಮತ್ತು ಅಭಿಮಾನಿಗಳಿಗೆ ಧನುಷ್ ತಮ್ಮ ಭಾವನಾತ್ಮಕವಾಗಿ ಪತ್ರವೊಂದನ್ನು ಬರೆದು ಕೃತಜ್ಞತೆ ಸಲ್ಲಿಸಿದ್ದಾರೆ. 

‘ಆತ್ಮೀಯ ಸ್ನೇಹಿತರೇ, ಥುಲುವಾಥೊ ಇಳಮೈ ಸಿನಿಮಾದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ದಿನವನ್ನು ನಾನಿಂದೂ ಮರೆತಿಲ್ಲ. ಅಂದು ಮೇ 10, 2002. ನನ್ನ ಬದುಕನ್ನು ಬದಲಿಸಿದ ದಿನವದು. ನಿಜಕ್ಕೂ 17 ವರ್ಷಗಳಾದವೇ?  ಇದೆಲ್ಲಾ ನಿನ್ನಮೊನ್ನೆಯಂತಿದೆ. ಸ್ನೇಹಿತರೇ, ನಿಮ್ಮ ಹೃದಯದ ಬಾಗಿಲಿಗೆ ನನ್ನನ್ನು ಬರಮಾಡಿಕೊಂಡು ಸ್ಥಾನ ನೀಡಿದ ದಿನವಿದು. ನನ್ನ ಹಳೆಯ ದಿನಗಳನ್ನು ತಿರುಗಿ ನೋಡಿದಾಗ ನಿಮ್ಮ ಅಭಿಮಾನ, ಪ್ರೀತಿ, ನಂಬಿಕೆಯೇ ಎದ್ದು ಕಾಣುತ್ತದೆ’ಎಂದು ಧನುಷ್ ಬರೆದಿದ್ದಾರೆ. 

‘ಒಳ್ಳೆಯ ಮತ್ತು ಕೆಟ್ಟ ಕಾಲದಲ್ಲೂ, ಸಿನಿಮಾ ಯಶಸ್ಸು ಗಳಿಸಲಿ, ಇಲ್ಲವೇ ಫ್ಲಾಪ್ ಆಗಲಿ, ಅಲ್ಲೆಲ್ಲಾ ನೀವು ನನ್ನ ಜತೆಗೇ ಇದ್ದೀರಿ. ಥ್ಯಾಂಕ್ಯೂ ಸೋ ಮಚ್. ನಾನು ಪರಿಪೂರ್ಣ ಮನುಷ್ಯನಲ್ಲ. ಆದರೆ, ನಿಮ್ಮ ಅಪರಿಮಿತ ಪ್ರೀತಿ, ಪ್ರಾಮಾಣಿಕತೆ, ನಂಬಿಕೆ ನನ್ನನ್ನು ಗಟ್ಟಿಗೊಳಿಸಿದೆ. ಇದರಿಂದಾಗಿಯೇ ನನ್ನ ಜೀವನದ ಅತ್ಯುತ್ತಮವಾದುದನ್ನು ಸಾಧಿಸಲು ನನಗೆ ಸಾಧ್ಯವಾಗಿದೆ. 17 ವರ್ಷಗಳ ನನ್ನ ವೃತ್ತಿಜೀವನದ ಯಶಸ್ಸಿಗೆ ಹಾರೈಸಿ ನೀವು ತಯಾರಿಸಿರುವ ವಿಡಿಯೊ, ಪೋಸ್ಟರ್‌ಗಳನ್ನು ನೋಡಿ ಭಾವುಕನಾಗಿರುವೆ. ಬನ್ನಿ ಯಾವಾಗಲೂ ಪ್ರೀತಿ ಹಂಚೋಣ. ಬರೀ ಪ್ರೀತಿ, ಬನ್ನಿ ನಿರ್ಭಯವಾಗಿ ಕನಸು ಕಾಣೋಣ’ ಎಂದು ಹೇಳಿದ್ದಾರೆ. 

ಸದ್ಯಕ್ಕೆ ಮೂರು ಚಿತ್ರಗಳ ಯೋಜನೆಯನ್ನು ಒಪ್ಪಿಕೊಂಡಿರು ಧನುಷ್, ‘ಅಸುರನ್’ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದರಲ್ಲಿ ಧನುಷ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !