ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ADHD: ತಮಗಿರುವ ಅದೊಂದು ಆರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡ ನಟ ಫಹಾದ್ ಫಾಸಿಲ್

Published 27 ಮೇ 2024, 16:47 IST
Last Updated 27 ಮೇ 2024, 16:47 IST
ಅಕ್ಷರ ಗಾತ್ರ

ಕೊಚ್ಚಿ: ದಕ್ಷಿಣ ಭಾರತದ ಖ್ಯಾತ ನಟ ಫಹಾದ್ ಫಾಸಿಲ್ ತಾವು ಅಟೆನ್ಷನ್ ಡೆಫಿಸಿಟ್ /ಹೈಪರ್‌ಆಕ್ಟಿವಿಟಿ ಡಿಸಾರ್ಡರ್(ಎಡಿಎಚ್‌ಡಿ) ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ. 41 ವಯಸ್ಸಿನಲ್ಲಿ ನನಗೆ ಈ ಸಮಸ್ಯೆ ಇರುವುದು ಗೊತ್ತಾಯಿತು ಎಂದು ಅವರು ಹೇಳಿದ್ದಾರೆ.

ADHD ಎಂಬುದು ನ್ಯೂರೊ ಡೆವಲೊಪ್‌ಮೆಂಟಲ್ ಡಿಸಾರ್ಡರ್ ಆಗಿದ್ದು, ಗಮನ ನಿಯಂತ್ರಣ, ನಡವಳಿಕೆ ಮತ್ತು ಉದ್ವೇಗದ ನಿಯಂತ್ರಣ ಮಾಡುವ ಮಿದುಳಿನ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ಸಾಮಾನ್ಯವಾಗಿರುವ ಈ ಸಮಸ್ಯೆ ವಯಸ್ಕರಲ್ಲೂ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

ಭಾನುವಾರ ಕೊತ್ತಮಂಗಲಂನಲ್ಲಿ ಪೀಸ್ ವ್ಯಾಲಿ ಚಿಲ್ಟ್ರನ್ಸ್ ವಿಲೇಜ್ ಉದ್ಘಾಟನೆ ಮಾಡಿ ಮಾತನಾಡಿರುವ ಅವರು, ಚಿಲ್ಡ್ರನ್ಸ್ ವಿಲೇಜ್‌ನಲ್ಲಿ ಸುತ್ತಾಡುತ್ತಾ ಎಡಿಎಚ್‌ಡಿ ಸಮಸ್ಯೆಯನ್ನು ಗುಣಪಡಿಸಬಹುದೇ? ಎಂದು ವೈದ್ಯರನ್ನು ಪ್ರಶ್ನಿಸಿದ್ದಾರೆ.

‘ಚಿಕ್ಕ ವಯಸ್ಸಿನಲ್ಲೇ ಈ ಸಮಸ್ಯೆ ಇರುವುದು ಪತ್ತೆ ಮಾಡಿದರೆ ಸುಲಭವಾಗಿ ಗುಣಪಡಿಸಬಹುದು ಎಂದು ವೈದ್ಯರು ಹೇಳಿದರು. 41ನೇ ವಯಸ್ಸಿನಲ್ಲಿ ಎಡಿಎಚ್‌ಡಿ ಸಮಸ್ಯೆ ಪತ್ತೆಯಾದರೆ ಗುಣಪಡಿಸಬಹುದೇ ಎಂದು ಕೇಳಿದೆ?.ಇತ್ತೀಚೆಗೆ ಪರೀಕ್ಷೆ ವೇಳೆ ನನಗೆ ಎಡಿಎಚ್‌ಡಿ ಸಮಸ್ಯೆ ಇರುವುದು ಪತ್ತೆಯಾಗಿದೆ ’ಎಂದು ಅವರು ಹೇಳಿದ್ದಾರೆ.

ಏಪ್ರಿಲ್ 11ರಂದು ತೆರೆಕಂಡ ಅವರು ಅಭಿನಯಿಸಿರುವ ‘ಆವೇಶಂ’ಚಿತ್ರ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಚಿತ್ರದ ನಿರ್ದೇಶನ, ಸಿನಿಮಾಟೋಗ್ರಫಿ, ಸಂಗೀತ, ತಾಂತ್ರಿಕತೆ, ಅದ್ಭುತ ನಟನೆ, ಅದರಲ್ಲೂ ಫಹಾದ್ ಫಾಸಿಲ್, ಸಾಜಿನ್ ಗೋಪು ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT