ಶನಿವಾರ, ಜೂನ್ 25, 2022
28 °C

ನಟ ಪುನೀತ್‌ ಕಟ್ಟಾ ಅಭಿಮಾನಿ ಗುಜ್ಜಲ್‌ ಆದರ್ಶ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಹುಟ್ಟಿನಿಂದಲೇ ದೇಹದ ಅಂಗಾಂಗಗಳು ಬೆಳೆಯದೇ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದ ನಗರದ ತಳವಾರಕೇರಿಯ ನಿವಾಸಿ, ನಟ ಪುನೀತ್‌ ರಾಜಕುಮಾರ ಕಟ್ಟಾ ಅಭಿಮಾನಿಯಾಗಿದ್ದ ಗುಜ್ಜಲ್‌ ಆದರ್ಶ (17) ಬುಧವಾರ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಆದರ್ಶ, ಕಳೆದ ಕೆಲವು ದಿನಗಳಿಂದ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಬುಧವಾರ ಮರಣ ಹೊಂದಿದರು. ಆದರ್ಶ ಅವರ ಅಭಿಮಾನಕ್ಕೆ ಮನಸೋತಿದ್ದ ಪುನೀತ್‌, ಹೋದ ವರ್ಷ ಅವರ ಮನೆಗೆ ಭೇಟಿ ನೀಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ನೆರವಾಗಿದ್ದರು.

ಇದನ್ನೂ ಓದಿ... ಕೋವಿಡ್‌: ಭಾರತಕ್ಕಾಗಿ ಆಸ್ಟ್ರೇಲಿಯಾ ಆಟಗಾರರ ‘ಗೇಮ್‌’

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು