ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫ್ರ್ಯಾಂಕ್ಲಿನ್‌ ಥಿಯೇಟರ್‌’ನಿಂದ ಸಂಚಾರಿ ವಿಜಯ್‌ಗೆ ಗೌರವ

Last Updated 29 ಜೂನ್ 2021, 10:29 IST
ಅಕ್ಷರ ಗಾತ್ರ

ಬೆಂಗಳೂರು: ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಇತ್ತೀಚೆಗೆ ಮೃತಪಟ್ಟಿದ್ದ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಅವರಿಗೆ ಅಮೆರಿಕದ ಖ್ಯಾತ ‘ಫ್ರ್ಯಾಂಕ್ಲಿನ್‌ ಥಿಯೇಟರ್‌’ ಗೌರವ ಸೂಚಿಸಿದೆ.

ಥಿಯೇಟರ್‌ ಎದುರಿಗಿರುವ ಎಲ್‌ಇಡಿ ಪರದೆಯಲ್ಲಿ ‘ಸದಾ ನಮ್ಮ ಹೃದಯದಲ್ಲಿ, ಸಂಚಾರಿ ವಿಜಯ್‌ ನಮ್ಮನ್ನಗಲಿದ್ದಾರೆ ಆದರೆ ನಾವು ಅವರನ್ನು ಮರೆತಿಲ್ಲ’ ಎಂದು ನಿರಂತರವಾಗಿ 24 ಗಂಟೆ ಈ ಸಂದೇಶವನ್ನು ಪ್ರದರ್ಶಿಸುವ ಮೂಲಕ, ವಿಜಯ್‌ ಅವರನ್ನು ಸ್ಮರಿಸಿದೆ. ‘ಅಮೆರಿಕದಲ್ಲಿ ಕನ್ನಡ ಸಿನಿಮಾಗಳ ಪ್ರದರ್ಶಕರಾದ, ನಿರ್ಮಾಪಕ ರವಿ ಕಶ್ಯಪ್‌ ಅವರ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಅಗಲಿದ ಕನ್ನಡದ ಕಲಾವಿದನನ್ನು ಗುರುತಿಸಿದ ಫ್ರಾಂಕ್ಲಿನ್ ಥಿಯೇಟರ್ ಮತ್ತು ಕಾರಣಕರ್ತರಾದ ರವಿಯವರಿಗೆ ವಂದನೆ. ವಿಜಯ್‌ ಅವರ ಪ್ರತಿಭೆಯನ್ನು ದೂರದ ಅಮೆರಿಕದಲ್ಲಿದ್ದುಕೊಂಡು ಸ್ಮರಿಸಿರುವುದು ಸಂತೋಷ’ ಎಂದು ನಿರ್ದೇಶಕ ಬಿ.ಎಸ್‌. ಲಿಂಗದೇವರು ತಿಳಿಸಿದರು.

ಸಂಚಾರಿ ವಿಜಯ್‌ ನಿಧನವಾದ ಸಂದರ್ಭದಲ್ಲಿ ಚೆನ್ನೈಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ಕೂಡಾ ಸಂತಾಪ ವ್ಯಕ್ತಪಡಿಸಿತ್ತು. ‘ಚೆನ್ನೈನಲ್ಲಿರುವ ಅಮೆರಿಕ ದೂತಾವಾಸ ಕಚೇರಿಯಲ್ಲಿ 2018ರಲ್ಲಿ ‘ಪ್ರೈಡ್’ ತಿಂಗಳ ಆಚರಣೆಯ ಪ್ರಯುಕ್ತ ತೃತೀಯ ಲಿಂಗಿಗಳ ಸಮುದಾಯದ ಸಂಘರ್ಷವನ್ನು ಬಿಂಬಿಸುವ ಪ್ರಶಸ್ತಿ ವಿಜೇತ ಚಿತ್ರ ‘ನಾನು ಅವನಲ್ಲ–ಅವಳು’ ಪ್ರದರ್ಶನ ಮತ್ತು ಸಂವಾದದಲ್ಲಿ ಸಂಚಾರಿ ವಿಜಯ್ ಭಾಗಿಯಾಗಿದ್ದರು’ ಎಂದು ಟ್ವೀಟ್‌ ಮೂಲಕ ಕಚೇರಿಯು ನೆನಪಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT