ತೆಲುಗಿನ ನಟ ರಾಮ್ಚರಣ್ ನಟನೆಯ 16ನೇ ಸಿನಿಮಾದ ಶೀರ್ಷಿಕೆ ಘೋಷಣೆಯಾಗಿದೆ. ‘ಪೆದ್ದಿ’ ಎಂಬ ಟೈಟಲ್ನ ಈ ಸಿನಿಮಾದಲ್ಲಿ ನಟ ಶಿವರಾಜ್ಕುಮಾರ್ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ.

ರಾಮ್ಚರಣ್ ಹಾಗೂ ಶಿವರಾಜ್ಕುಮಾರ್ ಜೊತೆಯಾಗಿ ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಚಿತ್ರವನ್ನು ಬುಚ್ಚಿ ಬಾಬು ಸನಾ ನಿರ್ದೇಶಿಸುತ್ತಿದ್ದಾರೆ. ಜಾಹ್ನವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಅಮೆರಿಕದಲ್ಲಿ ಮೂತ್ರಕೋಶ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮರಳಿರುವ ಶಿವರಾಜ್ಕುಮಾರ್ ಸುಮಾರು ಎರಡೂವರೆ ತಿಂಗಳ ಬಳಿಕ ಚಿತ್ರೀಕರಣಕ್ಕೆ ಇಳಿದಿದ್ದಾರೆ. ಸದ್ಯಕ್ಕೆ ಕಾರ್ತಿಕ್ ಅದ್ವೈತ್ ಆ್ಯಕ್ಷನ್ ಕಟ್ ಹೇಳುತ್ತಿರುವ ‘#131’ ಸಿನಿಮಾ ಹಾಗೂ ‘ಪೆದ್ದಿ’ಯಲ್ಲಿ ಶಿವರಾಜ್ಕುಮಾರ್ ತೊಡಗಿಸಿಕೊಂಡಿದ್ದಾರೆ. ‘ಪೆದ್ದಿ’ ಚಿತ್ರದಲ್ಲಿ ಜಗಪತಿ ಬಾಬು, ದಿವ್ಯೆಂದು ಶರ್ಮಾ ತಾರಾಬಳಗದಲ್ಲಿದ್ದಾರೆ. ಮೈತ್ರಿ ಮೂವೀ ಮೇಕರ್ಸ್, ಸುಕುಮಾರ್ ರೈಟಿಂಗ್ ಹಾಗೂ ವೃದ್ಧಿ ಸಿನಿಮಾಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ಎ.ಆರ್. ರೆಹಮಾನ್ ಸಂಗೀತ, ನವೀನ್ ನೂಲಿ ಸಂಕಲನ, ಆರ್. ರತ್ನವೇಲು ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.