ಬುಧವಾರ, ಡಿಸೆಂಬರ್ 1, 2021
20 °C

ನಟ ಸಿದ್ಧಾರ್ಥ್‌ಗೆ ಲಂಡನ್‌ನಲ್ಲಿ ಭುಜದ ಶಸ್ತ್ರಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಹುಭಾಷಾ ನಟ ಸಿದ್ಧಾರ್ಥ್ ಲಂಡನ್‌ಗೆ ತೆರಳಿದ್ದು ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಅವರು ಆಪ್ತರು ತಿಳಿಸಿದ್ದಾರೆ. 

ಕೆಲವು ದಿನಗಳ ಹಿಂದೆ ಚಿತ್ರೀಕರಣದ ಸಮಯದಲ್ಲಿ ಬಿದ್ದು ಭುಜಕ್ಕೆ ಗಾಯವಾಗಿತ್ತು. ಅದು ಸಣ್ಣ ಪ್ರಮಾಣದ ಗಾಯವಾಗಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಆದರೆ ಸಿದ್ಧಾರ್ಥ್ ಯಾವುದೇ ಸಿನಿಮಾದ ಚಿತ್ರೀಕರಣಕ್ಕೆ ತೆರಳಿಲ್ಲ ಎಂದು ತಮಿಳುನಾಡಿನ ಮಾಧ್ಯಮಗಳು ವರದಿ ಮಾಡಿವೆ.

ಸಿದ್ಧಾರ್ಥ್ ನಟನೆಯ 'ಮಹಾ ಸಮುದ್ರಂ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಚಿತ್ರಮಂದಿರಗಳಲ್ಲಿ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದ ಪ್ರಚಾರಕ್ಕೆ ಅವರು ಗೈರಾಗಿದ್ದಾರೆ. ಸಿದ್ದಾರ್ಥ್ ಲಂಡನ್‌ಗೆ ತೆರಳಿದ್ದು ಶೀಘ್ರವೇ ಮರಳಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

ಮಹಾಸಮುದ್ರಂ ಸಿನಿಮಾ ಅಕ್ಟೋಬರ್ 14ಕ್ಕೆ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಶರ್ವಾನಂದ್ ಕೂಡ ನಟಿಸಿದ್ದಾರೆ. ಅದಿತಿ ರಾವ್ ಹೈದಿರಿ, ಅನು ಇಮ್ಮಾನ್ಯುಯೆಲ್ ನಾಯಕಿಯರಾಗಿ ನಟಿಸಿದ್ದಾರೆ.  ಜಗಪತಿ ಬಾಬು, ರಾವ್ ರಮೇಶ್, ರಾಮಚಂದ್ರ ರಾಜು ನಟಿಸಿದ್ದಾರೆ. ಅಜಯ್ ಭೂಪತಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು