ಶನಿವಾರ, ಆಗಸ್ಟ್ 13, 2022
23 °C

ಬಾಲಿವುಡ್‌ ನಟ ವರುಣ್ ಧವನ್‌ಗೆ ಕೊರೊನಾ ಪಾಸಿಟಿವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ನಟ ವರುಣ್ ಧವನ್‌ಗೆ ಕೋವಿಡ್‌ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ ವರುಣ್‌. ಜಗ್‌ ಜಗ್ ಜಿಯೋ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು ವರುಣ್‌.

ತಮಗೆ ಪಾಸಿಟಿವ್ ಬಂದಿರುವ ಕುರಿತು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿರುವ ವರುಣ್‌ ‘ನಾನು ಲಾಕ್‌ಡೌನ್‌ ಬಳಿಕ ಮರಳಿ ಚಿತ್ರೀಕರಣಕ್ಕೆ ತೆರಳಿದ್ದೆ. ಈಗ ನನಗೆ ಕೊರೊನಾ ಪಾಸಿಟಿವ್ ಬಂದಿದೆ. ಚಿತ್ರತಂಡ ಎಲ್ಲಾ ರೀತಿಯ ಮುನ್ನೆಚ್ಚರಿಕೆಯನ್ನು ವಹಿಸಿತ್ತು. ಆದರೂ ಈ ಕೊರೊನಾ ಸಮಯದಲ್ಲಿ ಯಾವುದೂ ನಿಶ್ಚಿತವಲ್ಲ. ಹಾಗಾಗಿ ಎಲ್ಲರೂ ಆದಷ್ಟು ಜಾಗೃತೆಯಿಂದಿರಿ. ನಾನು ಕೂಡ ಜಾಗೃತೆಯಿಂದಿರುತ್ತೇನೆ. ಬೇಗ ಗುಣಮುಖರಾಗಿ ಎಂಬ ಸಂದೇಶಗಳನ್ನು ನೋಡಿದ್ದೇನೆ. ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ಚಂಢೀಗಡದಲ್ಲಿ ಜಾಗ್ ಜಾಗ್‌ ಜಿಯೋ ಚಿತ್ರೀಕರಣದಲ್ಲಿ ಪಾಲ್ಗೊಂಡ ವರುಣ್‌, ನೀತು ಕಪೂರ್‌, ಅನಿಲ್ ಕಪೂರ್ ಹಾಗೂ ನಿರ್ದೇಶಕ ರಾಜ್ ಮೆಹ್ತಾ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದರು.

ಚಿತ್ರದ ಚಿತ್ರೀಕರಣಕ್ಕೂ ಮೊದಲು ಚಿತ್ರತಂಡದ ಪ್ರತಿಯೊಬ್ಬರು ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದರು. ಶೂಟಿಂಗ್‌ಗೂ ಮೊದಲು ‘ಕೋವಿಡ್‌ ಟೆಸ್ಟೆಡ್‌ ಅಂಡ್ ಸೇಫ್‌’ ಎಂಬ ಸಂದೇಶವಿರುವ ಫೋಟೊವನ್ನು ಹಂಚಿಕೊಂಡಿದ್ದರು ನೀತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು