ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಟಿ ಲಾವಣ್ಯ ತ್ರಿಪಾಠಿಯೊಂದಿಗೆ ಎಂಗೇಜ್‌ ಆದ 'ಫಿದಾ' ಖ್ಯಾತಿಯ ನಟ ವರುಣ್‌ ತೇಜಾ

Published : 10 ಜೂನ್ 2023, 7:00 IST
Last Updated : 10 ಜೂನ್ 2023, 7:00 IST
ಫಾಲೋ ಮಾಡಿ
Comments

‘ಫಿದಾ‘ ಚಿತ್ರದ ಮೂಲಕ ಸಿನಿಪ್ರಿಯರ ಮನಗೆದ್ದ ತೆಲುಗು ನಟ ವರುಣ್‌ ತೇಜಾ ತಮ್ಮ ಬಹುಕಾಲದ ಗೆಳತಿ, ನಟಿ ಲಾವಣ್ಯ ತ್ರಿಪಾಠಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ತೆಲುಗು ಚಿತ್ರಗಳಾದ ‘ಮಿಸ್ಟರ್‘ ಮತ್ತು ‘ಅಂತರಿಕ್ಷ್ 9000 ಕೆಎಂಪಿಎಚ್‌‘ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿರುವ ಇವರಿಬ್ಬರು, 'ಮಿಸ್ಟರ್‌' ಚಿತ್ರದ ಶೂಟಿಂಗ್‌ ವೇಳೆಯಿಂದಲೇ ಡೇಟಿಂಗ್‌ ನಡೆಸುತ್ತಿದ್ದರು ಎನ್ನಲಾಗಿದೆ. ಶುಕ್ರವಾರ ರಾತ್ರಿ ತಮ್ಮ ಬಂಧು ಬಳಗದ ಸಮ್ಮುಖದಲ್ಲಿ ಪರಸ್ಪರ ಉಂಗುರ ಬದಲಾಯಿಸಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಪೋಟೋ ಪೋಸ್ಟ್‌ ಮಾಡಿರುವ ನಟಿ ಲಾವಣ್ಯ ತ್ರಿಪಾಠಿ, '2016ರಿಂದ ಇನ್‌ಫಿನಿಟಿವರೆಗೆ... ನನ್ನ ಸಂಗಾತಿಯನ್ನು ಕಂಡುಕೊಂಡಿದ್ದೇನೆ' ಎಂದು ಬರೆದುಕೊಂಡಿದ್ದಾರೆ. 'ನನ್ನ ಪ್ರೀತಿ ನನಗೆ ಸಿಕ್ಕಿದೆ' ಎಂದು ವರುಣ್‌ ತೇಜಾ ಫೋಸ್ಟ್‌ ಮಾಡಿದ್ದಾರೆ. ಇವರ ನಿಶ್ಚಿತಾರ್ಥಕ್ಕೆ ನಟಿ ಸಮಂತಾ, ಸುನಿಲ್‌ ಶೆಟ್ಟಿ ಸೇರಿದಂತೆ ಹಲವು ನಾಯಕ, ನಾಯಕಿಯರು ಶುಭಾಶಯ ತಿಳಿಸಿದ್ದಾರೆ.

ಅಲ್ಲು–ಕೊನಿಡೇಲಾ ಕುಟುಂಬದ ಮೂಲದವರಾದ ವರುಣ್‌ ತೇಜಾ, ತೆಲುಗಿನ ನಟ ಹಾಗೂ ನಿರ್ಮಾಪಕ ನಾಗೇಂದ್ರ ಬಾಬು ಅವರ ಮಗನಾಗಿದ್ದಾರೆ. ‘ಮುಕುಂದ‘ ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದ ವರುಣ್‌ ತೇಜಾ ಅವರ ಆರಂಭಿಕ ಮೂರು ಚಿತ್ರಗಳು ಹೆಚ್ಚು ಸದ್ದು ಮಾಡಿರಲಿಲ್ಲ. ಸಾಯಿ ಪಲ್ಲವಿಯೊಂದಿಗೆ ನಟಿಸಿದ್ದ 'ಫಿದಾ‘ ಚಿತ್ರದ ಮೂಲಕ ವರುಣ್‌ ತೆಲುಗಿನಲ್ಲಿ ಭರವಸೆಯ ನಟ ಎನಿಸಿಕೊಂಡರು. ಈ ಚಿತ್ರ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು.

2012ರಲ್ಲಿ 'ಅಂದಾಲ ರಾಕ್ಷಸಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ಲಾವಣ್ಯ ತ್ರಿಪಾಠಿ ತೆಲುಗಿನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT