ಶುಕ್ರವಾರ, ಡಿಸೆಂಬರ್ 2, 2022
19 °C

ಕಾಂತಾರ ಸಿನಿಮಾ ಬಗ್ಗೆ ನಟ ಯಶ್ ಮೆಚ್ಚುಗೆಯ ಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ರಿಷಭ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಮಂದಿರಗಳಲ್ಲಿ ಉತ್ತಮವಾಗಿ ಪ್ರದರ್ಶನಗೊಳ್ಳುತ್ತಿದ್ದು ಎಲ್ಲೆಡೆ ಪ್ರಶಂಸೆ ಮಾತು ಕೇಳಿ ಬರುತ್ತಿವೆ.

ಇದೀಗ ನಟ ಯಶ್ ಕೂಡ ಕಾಂತಾರದ ಬಗ್ಗೆ ಮನದುಂಬಿ ಹೊಗಳಿದ್ದು, ‘ಕಾಂತಾರ ಕೂಡ ನನ್ನ ಸಿನಿಮಾ ಕನ್ನಡ ಸಿನಿಮಾ’ ಎಂದು ಹೃದಯತುಂಬಿ ಹೇಳಿದ್ದಾರೆ.

ಮುಂಬೈನಲ್ಲಿ ನಡೆದ ಇಂಡಿಯಾ ಟುಡೇ ಕಾನ್‌ಕ್ಲೇವ್ 2022 ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಕಾಂತಾರ ಸಿನಿಮಾ ಕೂಡ ನನ್ನ ಸಿನಿಮಾನೇ. ಕನ್ನಡ ಸಿನಿಮಾ ಇಷ್ಟೊಂದು ಪ್ರಶಂಸೆಯಾಗುತ್ತಿದೆ. ಗರುಡ ಗಮನ ವೃಷಭ ವಾಹನ, ಚಾರ್ಲಿ 777 ಸಿನಿಮಾಗಳು ಗಡಿ ಮೀರಿ ನೋಡಲ್ಪಟ್ಟಿವೆ. ಕನ್ನಡ ಸಿನಿಮಾಗಳು ಇಂದು ಜಾಗತಿಕ ಮನ್ನಣೆ ಪಡೆಯುತ್ತಿವೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ನಾನು ಇಂದು ಪ್ಯಾನ್ ಇಂಡಿಯಾ ನಟನಾಗಿದ್ದರೂ ನನಗೆ ಕನ್ನಡವೇ ಮೊದಲು ಎಂದು ಯಶ್ ಹೇಳಿದ್ದಾರೆ.

ಇನ್ನು ಯಶ್ ಅವರಿಗೆ ಬ್ರಹ್ಮಾಸ್ತ್ರ 2 ಸಿನಿಮಾಕ್ಕೆ ಆಫರ್ ಬಂದಿರುವುದಾಗಿ ಹಾಗೂ ಅವರು ಅದನ್ನು ತಿರಸ್ಕರಿಸಿರುವುದಾಗಿ ಹೇಳಿರುವುದು ವರದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು