ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಿಂಗಕಾಮ ಕುರಿತ ಯುವಕನ ಪ್ರಶ್ನೆಗೆ ನಟಿ ಅನುಸೂಯಾ ಕೊಟ್ಟ ಉತ್ತರ

Last Updated 27 ಫೆಬ್ರವರಿ 2023, 14:37 IST
ಅಕ್ಷರ ಗಾತ್ರ

ಬೆಂಗಳೂರು: ತೆಲುಗು ನಟಿ ಹಾಗೂ ಟೆಲಿವಿಷನ್ ನಿರೂಪಕಿ ಅನುಸೂಯಾ ಭಾರಧ್ವಾಜ ಅವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯ ಮೂಲಕ ಯಾವಾಗಲೂ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ.

ಪುಷ್ಪ ಖ್ಯಾತಿಯ ಈ ನಟಿ ಕೇವಲ ಸಿನಿಮಾದಲ್ಲಿ ಮಾತ್ರ ಅಲ್ಲ ಟಿ.ವಿ ಶೋಗಳಲ್ಲಿ ಸಂದರ್ಶನಗಳಲ್ಲಿ ಬೋಲ್ಡ್ ಆಗಿ ಮಾತನಾಡಿ ಆಗಾಗ ಗಮನ ಸೆಳೆಯುತ್ತಿರುತ್ತಾರೆ. ಅಲ್ಲದೇ ತಮ್ಮನ್ನು ಕೆಣಕಲು ಬಂದವರಿಗೆ ಸರಿಯಾಗಿ ಉತ್ತರ ಕೊಡುತ್ತಾರೆ.

ಇತ್ತೀಚೆಗೆ ಅನುಸೂಯಾ ಭಾರಧ್ವಾಜ ಅವರು ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳ ಜೊತೆ ಚಾಟ್ ನಡೆಸುತ್ತಿದ್ದರು. ಈ ವೇಳೆ ಅವರಿಗೆ ಯುವಕನೊಬ್ಬ ನೀವು ನಿಜವಾಗಿಯೂ ಉದಾರವಾದಿ ಮತ್ತು ಪ್ರಬುದ್ಧರಾಗಿದ್ದರೇ ಎಂದಾದರೂ ಸಲಿಂಗ ಕಾಮ ಅನುಭವಿಸಿದ್ದೀರಾ? (ಲೆಸ್ಬಿಯನ್) ಉತ್ತರಿಸಿ ಎಂದು ಕೇಳಿದ್ದಾನೆ.

ಇದಕ್ಕೆ ಅಷ್ಟೇ ಬೋಲ್ಡ್ ಆಗಿ ಉತ್ತರಿಸಿರುವ ಅನುಸುಯಾ, ನನಗೆ ಸಲಿಂಗಿ ಸ್ನೇಹಿತರಿದ್ದಾರೆ, ಫ್ಯಾಮಿಲಿಯಲ್ಲೂ ಇದ್ದಾರೆ. ಆದರೆ, ನನಗೆ ವೈಯಕ್ತಿವಾಗಿ ಆ ಅನುಭವ ಆಗಿಲ್ಲ. ಆನ್‌ಲೈನ್‌ನಲ್ಲಿ ಸಲಿಂಗಿ ಕಾಮದ ಅನುಭವ ಆಗಿದೆ ಎಂದು ಹೇಳಿದ್ದಾರೆ.

ಅನುಸೂಯಾ ಹಂಚಿಕೊಂಡ ಇನ್‌ಸ್ಟಾಗ್ರಾಂ ಸ್ಟೋರಿ
ಅನುಸೂಯಾ ಹಂಚಿಕೊಂಡ ಇನ್‌ಸ್ಟಾಗ್ರಾಂ ಸ್ಟೋರಿ

ಇನ್ನು ಹಲವು ಟಿ.ವಿ ಶೋಗಳಲ್ಲಿ ಗುರುತಿಸಿಕೊಂಡಿರುವ ಅನುಸೂಯಾ ಅವರು, ಸದ್ಯ ಪುಷ್ಪ–2 ಸಿನಿಮಾದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಪುಷ್ಪ–1 ರಲ್ಲಿ ಅವರ ಪಾತ್ರ ಗಮನ ಸೆಳೆದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT