ಕೆಲವನ್ನು ತೋರಿಸಿ, ಕೆಲವನ್ನು ಅಡಗಿಸಿ ಎಂದ ಅಧ್ಯಕ್ಷ ಚಿತ್ರದ ನಟಿ ಹೆಬಾ ಪಟೇಲ್

ಬೆಂಗಳೂರು: ಬೋಲ್ಡ್ ಫೋಟೊ ಒಂದನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, ಕೆಲವನ್ನು ತೋರಿಸಿ, ಕೆಲವನ್ನು ಮುಚ್ಚಿಡಿ ಎಂದು ಅಡಿಬರಹ ನೀಡುವ ಮೂಲಕ ನೋಡುಗರ ಹುಬ್ಬೇರಿಸಿದ್ದಾರೆ ಹೆಬಾ ಪಟೇಲ್!
ಕನ್ನಡದಲ್ಲಿ ಜನಪ್ರಿಯತೆ ಗಳಿಸಿದ್ದ ಅಧ್ಯಕ್ಷ ಚಿತ್ರದಲ್ಲಿ ನಟ ಶರಣ್ಗೆ ನಾಯಕಿಯಾಗಿ ನಟಿಸಿದ್ದ ಹೈದರಾಬಾದ್ ಮೂಲದ ಹೆಬಾ ಪಟೇಲ್, ಲಾಕ್ಡೌನ್ನಲ್ಲಿ ಇನ್ಸ್ಟಾಗ್ರಾಂನಲ್ಲಿ ಈ ಪೋಸ್ಟ್ ಮಾಡಿದ್ದಾರೆ.
ಲಾಕ್ಡೌನ್ ಅವಧಿಯಲ್ಲಿ ಸೆಲೆಬ್ರಿಟಿಗಳು ಮತ್ತು ಚಿತ್ರರಂಗದ ನಟ-ನಟಿಯರು ಸಾಮಾಜಿಕ ಜಾಲತಾಣಗಳ ಮೂಲಕ ಜನರೊಡನೆ ಸಂಪರ್ಕದಲ್ಲಿರುತ್ತಾರೆ.
ಅದೇ ರೀತಿಯಲ್ಲಿ ಹೆಬಾ ಕೂಡ, ಫೋಟೊ ಪೋಸ್ಟ್ ಮಾಡಿದ್ದು, ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ಅಲ್ಲದೆ, ಅಭಿಮಾನಿಗಳು ಕಮೆಂಟ್ ಮೂಲಕ ನಟಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.
ನನಗೆ ಹೊಟ್ಟೆಕಿಚ್ಚಾಗುತ್ತಿದೆ: ಸಹೋದರಿ ಫೋಟೊ ನೋಡಿ ಪ್ರಿಯಾಂಕ ಕಮೆಂಟ್!
ಮತ್ತೊಂದು ಫೋಟೊದಲ್ಲಿ ನಟಿ, ಉಡುಗೆಯನ್ನು ಕಡಿಮೆ ಮಾಡಿದ್ದೇನೆ ಮತ್ತು ಹೊರಗೆ ಹೋಗುವುದನ್ನು ಕೂಡ ಕಡಿಮೆ ಮಾಡಿದ್ದೇನೆ ಎನ್ನುವ ಮೂಲಕ ಒಗಟಿನ ರೀತಿಯಲ್ಲಿ ಅಡಿಬರಹ ನೀಡಿ ಬೋಲ್ಡ್ ಚಿತ್ರವನ್ನು ಪೋಸ್ಟ್ ಮಾಡಿ, ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.